ಗೋವಾ ಚುನಾವಣೆ: ಎಲ್ಲಾ 40 ಕ್ಷೇತ್ರಗಳಲ್ಲಿಯೂ ಟಿಎಂಸಿ ಸ್ಪರ್ಧೆ: ಲುಯಿಜಿನೊ ಫಲೆರೊ

2022ರಲ್ಲಿ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಟಿಎಂಸಿ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎಲ್ಲಾ 40 ಸ್ಥಾನಗಳಲ್ಲಿಯೂ ಸ್ವತಂತ್ರವಾಗಿ ಸ್ಪರ್ಧಿಸಲು ಚಿಂತನೆ ನಡೆಯುತ್ತಿದೆ ಎಂದು ಟಿಎಂಸಿ ಸೇರಿರುವ, ಗೋವಾ ಮಾಜಿ ಸಿಎಂ ಲುಯಿಜಿನೊ ಫಲೆರೊ ಹೇಳಿದ್ದಾರೆ.

ಟಿಎಂಸಿ ವರಿಷ್ಠೆ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು 15 ದಿನಗಗಳಲ್ಲಿ ರಾಜ್ಯಕ್ಕೆ ಒಮ್ಮೆ ಭೇಟಿ ನೀಡಲಿದ್ದಾರೆ. ಅವರ ಭೇಟಿಯ ವೇಳೆ ಚುನಾವಣಾ ಸ್ಪರ್ಧೆಯ ಬಗ್ಗೆ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

“ಗೋವಾದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷವು ಹೊಸ ಮುಖಗಳನ್ನು ಹುಡುಕುತ್ತಿದೆ. ಟಿಎಂಸಿಯಿಂದ ನಾವು 40 ಹೊಸ ಮುಖಗಳನ್ನು ಆಯ್ಕೆ ಮಾಡುತ್ತೇವೆ” ಎಂದು ಮಾಜಿ ಸಿಎಂ ಹೇಳಿದ್ದಾರೆ.

ಫಲೆರೊ ಅವರು ಒಂಬತ್ತು ಇತರ ನಾಯಕರೊಂದಿಗೆ ಕೋಲ್ಕತ್ತಾದಲ್ಲಿ ಬುಧವಾರ ಟಿಎಂಸಿಗೆ ಸೇರಿದ್ದರು.

ಉಳಿದಂತೆ ಶಿವಸೇನೆ ಕೂಡ ಗೋವಾದಲ್ಲಿ ತನ್ನ ಪ್ರಾಭಲ್ಯವನ್ನು ಹೆಚ್ಚಿಕೊಳ್ಳಲು ಮುಂದಾಗಿದ್ದು, 20 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ.

ಇದನ್ನೂ ಓದಿ: ಪಂಜಾಬ್‌ ಮಾಜಿ ಸಿಎಂ ಬದಲು ಪುಟ್‌ಬಾಲ್‌ ಆಟಗಾರ ಅಮರೀಂದರ್‌ರನ್ನು ಟ್ಯಾಗ್‌ ಮಾಡಿದ ಮಾಧ್ಯಮಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights