ಪಂಜಾಬ್‌ ಮಾಜಿ ಸಿಎಂ ಬದಲು ಪುಟ್‌ಬಾಲ್‌ ಆಟಗಾರ ಅಮರೀಂದರ್‌ರನ್ನು ಟ್ಯಾಗ್‌ ಮಾಡಿದ ಮಾಧ್ಯಮಗಳು!

ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ರಾಜೀನಾಮೆಯ ಬಳಿಕ ಪಂಜಾಬ್‌ ರಾಜಕೀಯದಲ್ಲಿ ಹಲವು ವಿದ್ಯಾಮಾನಗಳು ಜರುಗುತ್ತಿವೆ. ಈ ಮಧ್ಯೆ, ಅಮರೀಂದರ್ ಸಿಂಗ್‌ ಬಗ್ಗೆ ಸುದ್ದಿ ಮಾಡಿ, ಟ್ವಿಟರ್‌ನಲ್ಲಿ ಮಾಜಿ ಸಿಎಂ ಬದಲಿಗೆ ಭಾರತೀಯ ರಾಷ್ಟ್ರೀಯ ಫುಟ್ಬಾಲ್ ತಂಡದ ಗೋಲ್ ಕೀಪರ್ ಅಮರಿಂದರ್ ಸಿಂಗ್ ಅವರನ್ನು ಮಾಧ್ಯಮಗಳು ಟ್ಯಾಗ್‌ ಮಾಡುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಫುಟ್ಬಾಲ್‌ ಆಟಗಾರ ‘ನಾನು ಮಾಜಿ ಮುಖ್ಯಮಂತ್ರಿ ಅಲ್ಲ, ನನ್ನನ್ನು ಟ್ಯಾಗ್ ಮಾಡುವುದನ್ನು ನಿಲ್ಲಿಸಿ’ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಆಟಗಾರ ಅಮರಿಂದರ್, ‘ಆತ್ಮೀಯ ಮಾಧ್ಯಮ, ಪತ್ರಕರ್ತರೇ, ನಾನು ಫುಟ್ಬಾಲ್‌ ತಂಡದ ಆಟಗಾರ, ಗೋಲ್‌ ಕೀಪರ್‌ ಅಮರಿಂದರ್ ಸಿಂಗ್ ಹಾಗೂ ನಾನು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್‌ ಅಲ್ಲ. ದಯವಿಟ್ಟು ನನ್ನನ್ನು ಟ್ಯಾಗ್ ಮಾಡುವುದನ್ನು ನಿಲ್ಲಿಸಿ’ ಎಂದು ಪೋಸ್ಟ್‌ ಮಾಡಿದ್ದಾರೆ.

ಸಿಂಗ್ ಅವರ ಟ್ವೀಟ್ ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಟ್ವೀಟ್‌ಅನ್ನು ಪಂಜಾಬ್‌ ಮಾಜಿ ಸಿಎಂ ಅಮರೀಂದರ್‌ ಸಿಂಗ್‌ ಕೂಡ ರೀ-ಟ್ವೀಟ್‌ ಮಾಡಿದ್ದಾರೆ. ನನ್ನ ಯುವ ಸ್ನೇಹಿತನೇ, ನಾನು ನಿಮ್ಮೊಂದಿಗೆ ಸಹಾನುಭೂತಿ ಹೊಂದಿದ್ದೇನೆ. ನಿಮ್ಮ ಮುಂದಿನ ಪಂದ್ಯಗಳಿಗೆ ಶುಭವಾಗಲಿ ಎಂದು ಮಾಜಿ ಸಿಎಂ ಹೇಳಿದ್ದಾರೆ.

ಪಂಜಾಬ್‌ನವರೇ ಆದ ಫುಟ್‌ಬಾಲ್‌ ಪ್ಲೇಯರ್ ಅಮರಿಂದರ್ ಸಿಂಗ್ ಅವರು ಎಟಿಕೆ ಮೋಹನ್ ಬಗಾನ್ ಫುಟ್ಬಾಲ್ ಕ್ಲಬ್ ಪರ ಆಡುತ್ತಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ತೊರೆಯುತ್ತೇನೆ; ಆದರೆ, ಬಿಜೆಪಿ ಸೇರುವುದಿಲ್ಲ: ಅಮರೀಂದರ್ ಸಿಂಗ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights