ಕುದುರೆ ಮೇಲೆ ಬಂದ ಅಮೆಜಾನ್ ಡೆಲಿವರಿ ಬಾಯ್‌; ವಿಡಿಯೋ ವೈರಲ್‌!

ಚಳಿಗಾಲದ ಹಿಮದಿಂದಾಗಿ ಜಮ್ಮು-ಕಾಶ್ಮೀರದ ರಸ್ತೆಗಳು ಹಿಮಾವೃತಗೊಂಡಿವೆ. ಹೀಗಾಗಿ ರಸ್ತೆಗಳಲ್ಲಿ ವಾಹನಗಳು, ಮನುಷ್ಯರು ಸಂಚರಿಸುವುದಕ್ಕೆ ಅಡಚಣೆ ಉಂಟಾಗಿದೆ. ಹೀಗಾಗಿ, ಅಮೆಜಾನ್‌ ಡೆಲಿವರಿ ಬಾಯ್‌ ಒಬ್ಬರು ಗ್ರಾಹಕರಿಗೆ ಅವರು ಆರ್ಡರ್‌ ಮಾಡಿದ್ದ ವಸ್ತುವನ್ನು ಕೊಡಲು ಕುದುರೆ ಹತ್ತಿ ಬಂದಿದ್ದು, ಜನರ ಮೆಚ್ಚುಗೆ ಗಳಿಸಿದ್ದಾರೆ.

ಶ್ರೀನನರದಲ್ಲಿ ಅಮೆಜಾನ್ ಡೆಲಿವರಿ ಬಾಯ್‌ ಕುದುರೆ ಮೇಲೆ ಬಂದು ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದೆ. ಹಲವಾರು ಮಂದಿ ಆತನಿಗೆ ಹ್ಯಾಟ್ಸ್‌ಆಫ್‌ ಹೇಳಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಮಾಸ್ಕ್ ಧರಿಸಿ ಕೊರೋನಾ ಶಿಷ್ಟಾಚಾರ ಪಾಲಿಸುವ ಈತ ಮನೆಯೊಂದರ ಮುಂದೆ ಕುದುರೆ ನಿಲ್ಲಿಸಿ, ಕೆಳಗಿಳಿದು ಬರುತ್ತಾನೆ. ಆರ್ಡರ್ ಕೊಟ್ಟವರನ್ನ ಹೊರಗೆ ಕರೆಯಿಸಿಕೊಂಡು ದೂರದಿಂದಲೇ ಪಾರ್ಸಲ್ ಇಟ್ಟು, ಡಿಜಿಟಲ್ ಪೇಮೆಂಟ್ ನಂತರ ಪುನಃ ಕುದುರೆ ಹತ್ತಿ ಮುಂದೆ ಸಾಗುವ ದೃಶ್ಯಗಳು ವಿಡಿಯೋದಲ್ಲಿವೆ.

https://twitter.com/UmarGanie1/status/1348862193790435330?s=20

ಕೆಲವರು ಹಿಮಾವೃತ ರಸ್ತೆಗಳನ್ನು ತೆರವುಗೊಳಿಸಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಬಾರದೆ ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ದರ್ಶನ್ ಅಭಿನಯದ ರಾಬರ್ಟ್ ಮಾರ್ಚ್‌ 11ಕ್ಕೆ‌ ರಿಲೀಸ್‌‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights