ಗಾಂಧಿ ಪ್ರತಿಮೆ ಎದುರು ಬಿಕ್ಕಿ-ಬಿಕ್ಕಿ ಅತ್ತ ಸಮಾಜವಾದಿ ಪಕ್ಷದ ನಾಯಕ; ವಿಡಿಯೋ ವೈರಲ್
ಗಾಂಧಿ ಜಯಂತಿಯ ದಿನದಂದು ಎಲ್ಲಾ ರಾಜಕೀಯ ನಾಯಕರು ಗಾಂಧಿಯನ್ನು ಸ್ಮರಿಸಿದ್ದಾರೆ. ಈ ನಡುವೆ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕರೊಬ್ಬರು ಗಾಂಧಿ ಪ್ರತಿಮೆ ಬಳಿ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ಸಮಾಜವಾದಿ ಪಕ್ಷದ ನಾಯಕ ಗಾಲಿಬ್ ಖಾನ್ ಅವರು ಬೆಂಬಲಿಗರ ಜೊತೆ ಗಾಂಧಿ ಜಯಂತಿ ಆಚರಿಸುವ ವೇಳೆ ಭಾವುಕರಾಗಿದ್ದಾರೆ.
ಗಾಂಧೀಜಿ ಪ್ರತಿಮೆಯನ್ನು ಹಿಡಿದು ಅವರು ಬಾಪು-ಬಾಪು ಎಂದು ಭಾವುಕರಾದ್ರು. ಅವರ ಬೆಂಬಲಿಗರು, ಅವರಿಗೆ ಸಮಾಧಾನ ಹೇಳುವ ಪ್ರಯತ್ನ ಮಾಡಿದ್ರು. ಕೆಲವೇ ಕ್ಷಣಗಳಲ್ಲಿ ಗಾಲಿಬ್ ಖಾನ್ ಅವರ ಈ ವಿಡಿಯೋ ವೈರಲ್ ಆಗಿದೆ. ಜನರು ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಮಾಡಿದ್ದಾರೆ.
ಗಾಲಿಬ್ ಖಾನ್, ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಗಾಂಧಿ ಪ್ರತಿಮೆ ಬಳಿ ಭಾವುಕರಾಗಿದ್ದಾರೆ. ಗಾಲಿಬ್ ಖಾನ್ ವಿಡಿಯೋಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಅತಿಯಾಗಿ ಆಡುವುದು ಇಡೀ ಆಟವನ್ನು ಹಾಳು ಮಾಡುತ್ತದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ‘ಬಾಪು ತನ್ನ ಮಗುವನ್ನು ಏಕೆ ಬಿಟ್ಟು ಹೋದರು.. ವಿಡಿಯೋವನ್ನು ಆಸ್ಕರ್‌ಗೆ ಕಳುಹಿಸಬೇಕು’ ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನೊಬ್ಬರು, ಅತಿಯಾಗಿ ನಟನೆ ಮಾಡಿದ್ದಕ್ಕೆ ಗಾಲಿಬ್ ಖಾನ್ ಗೆ 50 ರೂಪಾಯಿ ಕಟ್ ಎಂದು ಇನ್ನೊಬ್ಬರು ಬರೆದಿದ್ದಾರೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:
https://twitter.com/maro_attitude/status/1444263259733835778?s=19
2019 ರಲ್ಲಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಫಿರೋಜ್ ಖಾನ್ ವಿಡಿಯೋ ವೈರಲ್ ಆಗಿತ್ತು. ಅವರು ಗಾಂಧಿಜೀಯವರನ್ನು ನೆನೆದು ಅಳುತ್ತಿರುವ ವಿಡಿಯೋ ಚರ್ಚೆಗೆ ಕಾರಣವಾಗಿತ್ತು. ಈ ವೇಳೆ ಫಿರೋಜ್ ಖಾನ್, ಬಾಪು ನೀವು ಎಲ್ಲಿಗೆ ಹೋಗಿದ್ದೀರಿ. ನೀವು ಇಷ್ಟು ದೊಡ್ಡ ದೇಶವನ್ನು ಉದ್ಧಾರ ಮಾಡಿ ನಮ್ಮನ್ನು ಅನಾಥರನ್ನಾಗಿ ಮಾಡಿ ಹೋಗಿದ್ದೀರೆಂದು ಅತ್ತಿದ್ದರು.