ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ..!
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ಇಂದು ಐಟಿ ದಾಳಿ ಮಾಡಿದೆ. ಬೆಳಿಗ್ಗೆ 5 ಗಂಟೆಯಿಂದ ಉಮೇಶ್ ಮನೆಯಲ್ಲಿ ಐಟಿ ಅಧಿಕಾರಿಗಳ ತಲಾಶ ನಡೆಯುತ್ತಿದ್ದಾರೆ. 300 ಅಧಿಕಾರಿಗಳು 50 ಕಡೆ ದಾಳಿ ಮಾಡಿ ದೊಡ್ಡ ಕುಳಗಳಿಗೆ ಶಾಕ್ ಕೊಟ್ಟಿದ್ದಾರೆ.
ತೆರಿಗೆ ವಂಚನೆ ಆಧಾರದ ಮೇಲೆ ಉಮೇಶ್ ಮನೆ ಮೇಲೆ ಐಟಿ ರೇಡ್ ಮಾಡಿದೆ. ಉಮೇಶ್ ಶಿವಮೊಗ್ಗದ ಆಯನೂರು ಮೂಲದವರು. ಬೆಂಗಳೂರಿನ ಭಾಷ್ಯಂ ಸರ್ಕಲ್ ನಲ್ಲಿರುವ ಬಾಡಿಗೆ ಮನೆಯಲ್ಲಿ ಇವರು ವಾಸವಿದ್ದಾರೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಏನೇ ಕೆಲಸಗಳಿದ್ದರೂ ಇವರ ಮೂಲಕವೇ ಆಗ್ತಾಯಿತ್ತು. ಯಾರೂ ಕೂಡ ಊಹೆ ಕೂಡ ಮಾಡಲಾಗದಷ್ಟು ಹಳೆಯ, ಪುಟ್ಟ ಬಾಡಿಗೆ ಮನೆಯಲ್ಲಿ ಇವರು ವಾಸವಾಗಿದ್ದಾರೆ. ಆದರೆ ಇದೇ ಪುಟ್ಟ ಮನೆಯಲ್ಲಿ ಉದ್ಯಮಿಗಳೊಂದಿಗೆ ಹಲವಾರು ವ್ಯವಹಾರಗಳನ್ನು ಮಾಡ್ತಾಯಿದ್ದರು.
2008ರಿಂದಲೂ ಉಮೇಶ್ ಮಾಜಿ ಸಿಎಂ ಯಡಿಯೂರಪ್ಪ ಪಿಎ ಆಗಿದ್ದಾರೆ. ಕೆಲವೇ ವರ್ಷದಲ್ಲಿ ಆದಾಯವನ್ನು ದುಪ್ಪಟ್ಟು ಮಾಡಿಕೊಂಡಿದ್ದರು. ಮಾತ್ರವಲ್ಲದೇ ಇವರು ಪ್ರಭಾವಿ ವ್ಯಕ್ತಿಯಾಗಿದ್ದು ಯಾವುದೇ ಅಧಿಕಾರಿಗಳು, ಕೆಎಎಸ್- ಐಎಎಸ್ ಅಧಿಕಾರಿಗಳ ವರ್ಗಾವಣೆ ಕೂಡ ಉಮೇಶ್ ಮಾಡ್ತಾಯಿದ್ದರು. ಸರ್ಕಾರಿ ಕಾರಿನ್ನು ಉಮೇಶ್ ಹಣದ ವ್ಯವಹಾರ ಮಾಡುಲು ಬಳಿಸಿಕೊಂಡಿದ್ದಾರೆ.
ಹೀಗೆ ಏಕಾಏಕಿ ಉಮೇಶ್ ಆದಾಯ ಹೆಚ್ಚಾಗಿದ್ದು ನಾಗಸಂದ್ರದಲ್ಲಿ ಸ್ವಂತ ಮನೆ, ವಿದ್ಯಾರಣ್ಯಪುರದಲ್ಲಿ ಫ್ಲ್ಯಾಟ್ ಹೊಂದಿದ್ದಾರೆ. ಹೀಗಾಗಿ ರಾಜಕೀಯ ವಲಯದಲ್ಲಿ ಉಮೇಶ್ ವಿರುದ್ಧ ದೊಡ್ಡಮಟ್ಟದ ಆರೋಪಗಳು ಇವೆ. ಇದರ ಸಂಪೂರ್ಣ ಮಾಹಿತಿ ತೆಗೆದುಕೊಂಡ ಐಟಿ ಅಧಿಕಾರಿಗಳು ಉಮೇಶ್ ಮನೆ, ಆಪ್ತರ ಮನೆ, ಕಚೇರಿಯಲ್ಲಿ ಶೋಧ ಕಾರ್ಯ ಮಾಡುತ್ತಿದ್ದಾರೆ.