ಸದನದಿಂದ 12 ಸಂಸದರ ಅಮಾನತು: ಸಂಸದ್ ಟಿವಿ ನಿರೂಪಕಿ ಸ್ಥಾನಕ್ಕೆ ಸಂಸದೆ ಪ್ರಿಯಾಂಕ ಚತುರ್ವೇದಿ ರಾಜೀನಾಮೆ!

ಸಂಸತ್‌ನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಶಿವಸೇನೆ ಸಂಸದೆ ಪ್ರಿಯಾಂಕ ಚತುರ್ವೇದಿ ಸೇರಿದಂತೆ 12 ರಾಜ್ಯಸಭಾ ಸದಸ್ಯರನ್ನು ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. ಈ ಕ್ರಮವನ್ನು ಖಂಡಿಸಿರುವ ಪ್ರಿಯಾಂಕ ಚತುರ್ವೇದಿ ಅವರು ಸಂಸದ್ ಟಿವಿ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರಿಗೆ ತಮ್ಮ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿರುವ ಚತುರ್ವೇದಿ ಅವರು, “ಸದನದಿಂದ ನಮ್ಮನ್ನು ಅಮಾನತು ಮಾಡಿರುವುದು, ಸದನದೊಳಗೆ ನಮ್ಮ ಧ್ವನಿಯನ್ನು ಹತ್ತಿಕ್ಕುವ ಕ್ರಮವಾಗಿದೆ. ಸಂಸದೀಯ ವ್ಯವಸ್ಥೆಯಲ್ಲಿ ನನ್ನ ಪ್ರಾಥಮಿಕ ಹಕ್ಕುಗಳನ್ನು ನಿರಾಕರಿಸಲಾಗಿದೆ. ಹೀಗಾಗಿ, ಸಂಸದ್ ಟಿವಿಯಲ್ಲಿ ನಿರೂಪಕಿಯಾಗಿ ಮುಂದುವರಿಯಬೇಕು ಎಂದು ನನಗೆ ಅನಿಸುತ್ತಿಲ್ಲ” ಎಂದು ಬರೆದಿದ್ದಾರೆ.

ಈ ದೇಶದ ಜನರ ಪರವಾಗಿ ಮಾತನಾಡುತ್ತಿರುವ ಸಂದರ್ಭದಲ್ಲಿ ಅತಿ ಹೆಚ್ಚು ಸಂಖ್ಯೆಯ ಮಹಿಳಾ ಸಂಸದರು ಅಮಾನತುಗೊಂಡಿರುವುದು ರಾಜ್ಯಸಭೆಯ ಅಧಿವೇಶನದ ಇತಿಹಾಸದಲ್ಲಿ ಮೊದಲಾಗಿರಬಹುದು. ಆದರೆ ಜನರ ಪರವಾಗಿ ಮಾತನಾಡುವುದು, ಜನರ ಪರವಾಗಿ ನಿಲ್ಲುವುದು, ಅವರಿಗೆ ಬೆಂಬಲ ನೀಡುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಸದನದಿಂದ ಅಮಾನತು ಮಾಡಿರುವುದು ಸಂಸದೆಯಾಗಿ ನನಗೆ ಅನ್ಯಾಯ ಮತ್ತು ಅಗೌರವವಾಗಿದೆ. ಮಹಿಳಾ ಸಂಸದರಿಗೆ ತಮ್ಮ ಹಕ್ಕು-ಕರ್ತವ್ಯಗಳನ್ನು ತೋರಿಸಿಕೊಳ್ಳಲು ಇರುವ ವೇದಿಕೆ ಸಂಸದ್ ಟಿವಿಯ ಶೋ ಆಗಿದೆ. ಇಲ್ಲಿ ನನ್ನ ಕೊಡುಗೆಯನ್ನು ನಿರ್ಲಕ್ಷಿಸಿ ಅನ್ಯಾಯ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಸಂಸದ ಟಿವಿಯಲ್ಲಿ ಮೇರಿ ಕಹಾನಿ ಶೋ ನಡೆಸಿ ಜನಪ್ರಿಯರಾಗಿರುವ ಪ್ರಿಯಾಂಕ ಚತುರ್ವೇದಿ ತಮಗೆ ಟಿವಿ ಶೋ ನಿರೂಪಕಿಯಾಗಿ ಜವಾಬ್ದಾರಿ ನೀಡಿದ್ದಕ್ಕೆ ರಾಜ್ಯಸಭಾ ಸಭಾಪತಿ ಮತ್ತು ಲೋಕಸಭಾ ಸ್ಪೀಕರ್ ಅವರಿಗೆ ಮತ್ತು ಸಂಸದ್ ಟಿವಿ ತಂಡಕ್ಕೆ ತಮ್ಮ ಪತ್ರದಲ್ಲಿ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗ ಕೇಳಿದ್ದಕ್ಕೆ ಜನರ ಮೇಲೆ ಲಾಠಿಚಾರ್ಜ್‌; ಬಿಜೆಪಿ ಮತಯಾಚನೆಗೆ ಬಂದಾಗ ಇದನ್ನು ನೆನಪಿಸಿಕೊಳ್ಳಿ: ರಾಹುಲ್‌ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights