Fact Check: ಕ್ರಿಸ್ಮಸ್ ಹಬ್ಬಕ್ಕಾಗಿ ತೇಜಸ್ ಎಕ್ಸ್ಪ್ರೆಸ್ ರೈಲನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ಸತ್ಯವೇ?
ಝೇಂಕರಿಸುವ ಗಂಟೆಗಳಿಂದ ಹಿಡಿದು ಮಿನುಗುವ ಟ್ರೀಟಾಪ್ಗಳು ಮತ್ತು ಅಲಂಕೃತ ತೊಟ್ಟಿಲುಗಳು – ಎಲ್ಲಡೆ ಡಿ. 25ರಂದು ಕ್ರಿಸ್ಮಸ್ ಹಬ್ಬದ ಮೆರುಗು ತುಂಬಿತ್ತು. ಇದೇ ವೇಳೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದು ಭಾರೀ ವೈರಲ್ ಆಗುತ್ತಿತ್ತು. ಅದೇನೆಂದರೆ, ಮುಂಬೈ ಮತ್ತು ಗೋವಾ ನಡುವೆ ಚಲಿಸುವ ಸೆಮಿ-ಹೈ ಸ್ಪೀಡ್ ಐಷಾರಾಮಿ ರೈಲು, ತೇಜಸ್ ಎಕ್ಸ್ಪ್ರೆಸ್ ಕ್ರಿಸ್ಮಸ್ಗಾಗಿ ಸಂಪೂರ್ಣವಾಗಿ ಅಲಂಕಾರಗೊಂಡಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದು ಭಾರೀ ವೈರಲ್ ಆಗಿದೆ.
तेजस एक्स्प्रेस, मुंबई ते गोवा, कोंकण रेल्वे
नाताळ निमित्त दिव्यांची रोषणाई 👌👍Tejas Express Mumbai to Goa lit up for Christmas ❤️❤️ pic.twitter.com/wUrkykBquO
— #Bharat-Ek VishwaGuru🇮🇳 (@EkVishwa) December 27, 2021
ಎಲ್ಇಡಿಗಳಿಂದ ಮಿನುಗುತ್ತಿದ್ದ ಚಾಲನೆಯಲ್ಲಿರುವ ರೈಲಿನ 45-ಸೆಕೆಂಡ್ಗಳ ವೀಡಿಯೊದೊಂದಿಗೆ ಆ ಹೇಳಿಕೆಯನ್ನು ಹಂಚಿಕೊಳ್ಳಲಾಗಿದೆ.
ಪೋಸ್ಟ್ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
ಫ್ಯಾಕ್ಟ್ ಚೆಕ್:
ಈ ವಿಡಿಯೋದ ಹಿನ್ನೆಲೆ ಮತ್ತು ನಿಜಾಂಶವನ್ನು ಹುಡುಕಿದಾಗ ಇದು ಭಾರತದ ಮುಂಬೈ ಮತ್ತು ಗೋವಾ ನಡುವೆ ಸಂಚರಿಸುವ ತೇಜಸ್ ಎಕ್ಸ್ಪ್ರೆಸ್ ಅಲ್ಲ. ಬಲದಾಗಿ, ಇದು “ಕ್ರಿಸ್ಮಸ್ ಟ್ರೇನ್ ಆಫ್ ಲೈಟ್ಸ್” ಆಗಿದ್ದು, ಇದು ನೈಋತ್ಯ ಇಂಗ್ಲೆಂಡ್ನಲ್ಲಿ ಕ್ರಿಸ್ಮಸ್ ಸಮಯದಲ್ಲಿ ಸಂಚರಿಸುವ ಉತ್ಸವದ ರೈಲು ಎಂದು ತಿಳಿದು ಬಂದಿದೆ.
ತೇಜಸ್ ಎಕ್ಸ್ಪ್ರೆಸ್ ಸೆಮಿ-ಹೈ ಸ್ಪೀಡ್ ರೈಲು ಸಂಪೂರ್ಣ ಹವಾನಿಯಂತ್ರಿತ ರೈಲು ಆಗಿದ್ದು, 2017 ರಲ್ಲಿ ಭಾರತೀಯ ರೈಲ್ವೆಯು ಪರಿಚಯಿಸಿದ ಆಧುನಿಕ ಆನ್ಬೋರ್ಡ್ ಸೌಲಭ್ಯಗಳನ್ನು ಹೊಂದಿರುವ ರೈಲು ಇದಾಗಿದೆ.
ಆದರೆ, ವೈರಲ್ ವಿಡಿಯೋದಲ್ಲಿ ಕಂಡುಬರುವ ರೈಲಿನಲ್ಲಿ ಸ್ಟೀಮ್ ಎಂಜಿನ್ ಇದೆ. ಇದು ಈ ರೈಲು ತೇಜಸ್ ಎಕ್ಸ್ಪ್ರೆಸ್ ಅಲ್ಲ ಎಂಬುದಕ್ಕೆ ಮೊದಲ ಸುಳಿವನ್ನು ನೀಡುತ್ತದೆ.
ವೈರಲ್ ವೀಡಿಯೊದ ಕೀವರ್ಡ್ಗಳು ಮತ್ತು ಸ್ಕ್ರೀನ್ಶಾಟ್ಗಳನ್ನು ಬಳಸಿ ಹುಡುಕಿದಾಗ, ಅದೇ ವೀಡಿಯೊವನ್ನು ಡಿಸೆಂಬರ್ 2, 2021 ರಂದು YouTube ಚಾನಲ್ “SWNS” ನಲ್ಲಿ ಅಪ್ಲೋಡ್ ಮಾಡಲಾಗಿರುವುದು ಕಂಡುಬಂದಿದೆ.
ಈ ಚಾನೆಲ್ನಲ್ಲಿನ ವಿವರಣೆಯ ಪ್ರಕಾರ, ಇಂಗ್ಲೆಂಡ್ನ ಡೆವೊನ್ನಲ್ಲಿರುವ ಟಾರ್ ಬೇ ತೀರದ ಪಟ್ಟಣವಾದ ಪೈಗ್ಟನ್ ಬಳಿ ವೃತ್ತಿಪರ ಛಾಯಾಗ್ರಾಹಕ ಸ್ಕಾಟ್ ವಿಲಿಯಮ್ಸ್ ಅವರು ವೀಡಿಯೊವನ್ನು ಸೆರೆಹಿಡಿದಿದ್ದಾರೆ. ವೀಡಿಯೊದಲ್ಲಿ ಕಾಣಿಸಿಕೊಂಡಿರುವ ರೈಲು 2021 ರಲ್ಲಿ “ದಿ ಟ್ರೇನ್ ಆಫ್ ಲೈಟ್ಸ್” ಎಂಬ ರೈಲು ಮೊದಲ ಬಾರಿಗೆ ಸಂಚಾರವನ್ನು ಆರಂಭಿಸಿದೆ ಎಂದು ವಿವರಿಸಲಾಗಿದೆ.
ಈ ಆಧಾರವನ್ನು ಇಟ್ಟುಕೊಂಡು, ಸ್ಕಾಟ್ ವಿಲಿಯಮ್ಸ್ ಅವರ ಫೇಸ್ಬುಕ್ ಪುಟವನ್ನು ಮತ್ತಷ್ಟು ಪರಿಶೀಲಿಸಿದಾಗ, ಅದೇ ವೀಡಿಯೊವನ್ನು ನವೆಂಬರ್ 24, 2021 ರಂದು ಅವರು ಅಪ್ಲೋಡ್ ಮಾಡಿರುವುದು ಕಂಡುಬಂದಿದೆ.
ವೀಡಿಯೊದ ಶೀರ್ಷಿಕೆಯು ಹೀಗಿದೆ: “ದಿ ಟ್ರೇನ್ ಆಫ್ ಲೈಟ್ಸ್” ಇಂದು ಸಂಜೆ ಪೈಗ್ಟನ್ನ ಗುಡ್ರಿಂಗ್ಟನ್ ಮೂಲಕ ಸಂಚರಿಸುತ್ತಿದೆ. ಇದು ಕರಾವಳಿಯುದ್ದಕ್ಕೂ ಪ್ರಕಾಶಿಸುತ್ತಾ ಸಂಚರಿಸುವುದನ್ನು ನೋಡುವುದು ನಿಜವಾಗಿಯೂ ರಮಣೀಯ ದೃಶ್ಯವಾಗಿದೆ. ಕ್ರಿಸ್ಮಸ್ ಹಬ್ಬಕ್ಕೆ ಕ್ಷಣಗಣನೆ ಇರುವ ಸಂದರ್ಭದಲ್ಲಿ ರೈಲಿನ ಕೆಲವು ಫೋಟೋಗಳನ್ನು ಸೆರೆಹಿಡಿಯುವ ಆಶಯ” ಎಂದು ಅವರು ಬರೆದಿದ್ದಾರೆ.
ಡಿಸೆಂಬರ್ 7 ರಂದು, ಸ್ಕಾಟ್ ಫೇಸ್ಬುಕ್ನಲ್ಲಿ “ಟ್ರೇನ್ ಆಫ್ ಲೈಟ್ಸ್” ನ ಕೆಲವು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ಸ್ಕಾಟ್ಗೆ ಕ್ರೆಡಿಟ್ ಕೊಟ್ಟು ಇಂಗ್ಲೆಂಡ್ನಲ್ಲಿ ಅನೇಕ ಮಾಧ್ಯಮಗಳು ಅದೇ ವೀಡಿಯೊವನ್ನು ಸಹ ಹಂಚಿಕೊಂಡಿವೆ.
“ಕ್ರಿಸ್ಮಸ್ ಟ್ರೇನ್ ಆಫ್ ಲೈಟ್ಸ್”
“ಟ್ರೇನ್ ಆಫ್ ಲೈಟ್ಸ್” ಎಂಬುದು ಸೌತ್ ವೆಸ್ಟ್ ಇಂಗ್ಲೆಂಡ್ನಲ್ಲಿ ಡಾರ್ಟ್ಮೌತ್ ಸ್ಟೀಮ್ ರೈಲ್ವೇ ಮತ್ತು ರಿವರ್ ಬೋರ್ಡ್ ಕಂಪನಿಯ ವತಿಯುಂದ ಕ್ರಿಸ್ಮಸ್ ಸಮಯದಲ್ಲಿ ವಾರ್ಷಿಕವಾಗಿ ಸಂಚರಿಸುವ ವಿಶೇಷ ರೈಲು. ಈ ರೈಲು 2021ರ ನವೆಂಬರ್ 24 ರಿಂದ ಡಿಸೆಂಬರ್ 30 ರ ವರೆಗೆ ಕಾರ್ಯನಿರ್ವಹಿಸಿದೆ.
ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಡಾರ್ಟ್ಮೌತ್ ಸ್ಟೀಮ್ ರೈಲ್ವೇ ಅಪ್ಲೋಡ್ ಮಾಡಿದ ರೈಲಿನ ಪ್ರಯಾಣದ ವೀಡಿಯೊವನ್ನು ಕೆಳಗೆ ನೋಡಬಹುದು. ಡಾರ್ಟ್ಮೌತ್ ಸ್ಟೀಮ್ ರೈಲ್ವೆಯ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾದ “ಟ್ರೇನ್ ಆಫ್ ಲೈಟ್ಸ್” ನ ಈ ವೀಡಿಯೊ ಮತ್ತು ಇತರ ಚಿತ್ರಗಳು ವೈರಲ್ ವೀಡಿಯೊದಲ್ಲಿ ಕಂಡುಬರುವ ರೈಲಿನೊಂದಿಗೆ ಹೊಂದಿಕೆಯಾಗುತ್ತವೆ.
ಅಲ್ಲದೆ, ಕ್ರಿಸ್ಮಸ್ಗಾಗಿ ಸಿದ್ಧಪಡಿಸಲಾದ ತೇಜಸ್ ಎಕ್ಸ್ಪ್ರೆಸ್ ಕುರಿತ ಯಾವುದೇ ವಿಶ್ವಾಸಾರ್ಹ ವರದಿ ದೊರೆತಿಲ್ಲ.
ಆದ್ದರಿಂದ ವೈರಲ್ ಆಗುತ್ತಿರುವ ವೀಡಿಯೊ ಇಂಗ್ಲೆಂಡ್ನದ್ದೇ ಹೊರತು ಭಾರತದ ತೇಜಸ್ ಎಕ್ಸ್ಪ್ರೆಸ್ ರೈಲಿನದ್ದಲ್ಲ ಎಂಬುದು ಸ್ಪಷ್ಟವಾಗಿದೆ.
ಕೃಪೆ: ಇಂಡಿಯಾ ಟುಡೆ
ಇದನ್ನೂ ಓದಿ: Fact Check: ಗುಜರಾತ್ನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ‘ಪಾಕಿಸ್ತಾನ ಪರ’ ಘೋಷಣೆ ಕೂಗಿದ್ದು ಸತ್ಯವೇ?