ಫ್ಯಾಕ್ಟ್‌ಚೆಕ್: ಪಾಪ್ ಗಾಯಕಿ ರಿಹಾನ್ನಾ ತನ್ನ ಮಗುವಿಗೆ ರೈತ ನಾಯಕ ರಾಕೇಶ್ ಟಿಕಾಯತ್ ಹೆಸರಿಡುವುದಾಗಿ ಹೇಳಿದ್ದು ನಿಜವೆ?

ಅಮೇರಿಕಾದ ಪಾಪ್ ಗಾಯಕಿ ರಿಹಾನ್ನಾ ತನ್ನ ಮಗುವಿಗೆ ಭಾರತದ ರೈತ ನಾಯಕ ರಾಕೇಶ್ ಟಿಕಾಯತ್ ಅವರ ಹೆಸರನ್ನು ಇಡುವುದಾಗಿ ಹೇಳಿದ್ದಾರೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಯುಕೆ ಮೂಲದ ಸುದ್ದಿ ಸಂಸ್ಥೆ ‘ದಿ ಇಂಡಿಪೆಂಡೆಂಟ್’ ರಿಹಾನ ಅವರ ಫೋಟೋವನ್ನು ಟ್ವೀಟ್‌ ಮಾಡಿತ್ತು. ಟ್ವಿಟ್ ನಲ್ಲಿರುವ ಫೋಟೋವನ್ನು ಬಳಸಿಕೊಂಡು ‘ರಿಹಾನ್ನಾ ತನ್ನ ಮಗುವಿಗೆ  ರೈತ ನಾಯಕ ಟಿಕಾಯಿಟ್ ಹೆಸರಿಟ್ಟಿದ್ದಾಳೆ’ ಎಂದು ಪ್ರತಿಪಾದಿಸಲಾಗಿದೆ. ಅದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಗೂಗಲ್ ನಲ್ಲಿ ಕೀವರ್ಡ್ ಬಳಸಿಕೊಂಡು ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಸರ್ಚ್ ಮಾಡಿದಾಗ ಅಮೆರಿಕ ಖ್ಯಾತ ಪಾಪ್ ಗಾಯಕಿ ರಿಹಾನ್ನಾ ತನ್ನ ಮಗುವಿಗೆ ಭಾರತದ ರೈತ ನಾಯಕನಾದ ರಾಕೇಶ್ ಟಿಕಾಯತ್ ಅವರ ಹೆಸರನ್ನು ನಾಮಕರಣ ಮಾಡುವುದಾಗಿ ಹೇಳಿದ್ದಾರೆ ಎಂಬ ಯಾವ ವರದಿಗಳು ಲಭ್ಯವಾಗಿಲ್ಲ. ಒಂದು ವೇಳೆ ರಿಹಾನ್ನಾ ಈ ರೀತಿ ತೀರ್ಮಾನ ಮಾಡಿ ಹೇಳಿಕೆ ನೀಡಿದ್ದರೆ ಅದೊಂದು ಅಂತರಾಷ್ಟ್ರೀಯ ಸುದ್ದಿಯಾಗುತ್ತಿತ್ತು, ಆದರೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ.

ರೈತ ನಾಯಕ ರಾಕೇಶ್ ಟಿಕಾಯತ್
ರೈತ ನಾಯಕ ರಾಕೇಶ್ ಟಿಕಾಯತ್

‘ದಿ ಇಂಡಿಪೆಂಡೆಂಟ್’ ಟ್ವೀಟ್‌ನ ಸ್ಕ್ರೀನ್‌ಶಾಟ್‌ಗೆ ಸಂಬಂಧಿಸಿದಂತೆ, ಒಂದು ಲೇಖನವನ್ನು ಪ್ರಕಟಿಸಿದೆ ಅದನ್ನು ಇಲ್ಲಿ ನೋಡಬಹುದು. ಆ ದಿ ಇಂಡಿಪೆಂಡೆಂಟ್ ಲೇಖನದಲ್ಲಿ ರಿಹಾನ್ನಾ ತಾನು ಗರ್ಭಿಣಿಯಾಗಿರುವ ವೇಳೆ ಸಾಂಪ್ರದಾಯಿಕ ಉಡುಪುಗಳನ್ನು ತಿರಸ್ಕರಿಸಿ ತನಗೆ ಬೇಕಾದ ಮತ್ತು ಆರಾಮದಾಯಕ ಉಡುಗೆಗಳನ್ನು ತೊಡುವುದು ನನ್ನ ಆಯ್ಕೆ, ತನ್ನಿಚ್ಚೆಯಂತೆ ಇರಲು ನಾನು ಬಯಸುತ್ತೇನೆ ಎಂದಿದ್ದರು. ಈ ಹೇಳಿಕೆಯು ರಿಹಾನ್ನಾಳ ಸ್ವತಂತ್ರ ಗುಣವನ್ನು ಪ್ತತಿನಿಧಿಸುತ್ತದೆ, ಎಂದು ಟ್ವಿಟ್‌ನಲ್ಲಿ ಬರೆಯಲಾಗಿತ್ತು.

2022 ಮಾರ್ಚ್ 14 ರಂದು ‘ದಿ ಇಂಡಿಪೆಂಡೆಂಟ್’ ಪ್ರಕಟಿಸಿದ ಲೇಖನ ಮತ್ತು ಟ್ವೀಟ್ ನಲ್ಲಿ ಇರುವ ಫೋಟೋವನ್ನು ಸ್ಕ್ರೀನ್‌ಶಾಟ್ ತೆಗೆದುಕೊಂಡು ಎಡಿಟ್ ಮಾಡುವ ಮೂಲಕ ಡಿಜಿಟಲ್ ರೂಪದಲ್ಲಿ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಇದಲ್ಲದೆ, ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ಕಾಣುತ್ತಿರುವ ‘ದಿ ಇಂಡಿಪೆಂಡೆಂಟ್’  ನ ಲೋಗೋ ದ ವ್ಯತ್ಯಾಸವನ್ನು ಗಮನಿಸಬಹುದು.

02 ಫೆಬ್ರವರಿ 2021 ರಲ್ಲಿ ಕೃಷಿ ಕಾನೂನುಗಳ ವಿರುದ್ಧ ಭಾರತದಲ್ಲಿ ನಡೆಯುತ್ತಿದ್ದ ರೈತ ಹೋರಾಟದ  ಬಗ್ಗೆ ‘ನಾವು ಏಕೆ ಇದರ ಬಗ್ಗೆ ಮಾತನಾಡುತ್ತಿಲ್ಲ’ ಎಂದು ರಿಹಾನ್ನಾ ಟ್ವೀಟ್ ಮಾಡಿದ್ದರು. ರಿಹಾನ್ನಾ ಮಾಡಿದ್ದ ಟ್ವಿಟ್ ಗೆ ಭಾರತದ ಬಲಪಂಥೀಯರು ಬಹಳ ಕೆಟ್ಟದಾಗಿ ಪ್ರತಿಕ್ರಿಸಿದ್ದರು, ಈಗಲೂ ರಿಹಾನ್ನಾಳ ಕುರಿತು ಎಡಿಟ್ ಮಾಡಿದ ಫೋಟೋದೊಂದಿಗೆ ತಪ್ಪು ಹೇಳಿಕೆಯನ್ನು ನೀಡುವ ಮೂಲಕ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ರೈತರಿಗೆ ಬೆಂಬಲ ನೀಡಿದ ಹೇಳಿಕೆಯನ್ನು ಸಹಿಸದ ಗುಂಪೊಂದು ಆಕೆಯ ಮಗುವಿನ ಕುರಿತಾದ ಸುದ್ದಿಗೆ ರೈತ ನಾಯಕ ಟಿಕಾಯತ್ ಹೆಸರನ್ನು ತಳುಕುಹಾಕಲಾಗುತ್ತಿದೆ. ಆದಾಗ್ಯೂ,  ‘ದಿ ಇಂಡಿಪೆಂಡೆಂಟ್’ ಲೇಖನಗಳು (ಇಲ್ಲಿ ಮತ್ತು ಇಲ್ಲಿ) ಅಥವಾ ಯಾವುದೇ ಇತರ ಸುದ್ದಿ ಸಂಸ್ಥೆಯ ವರದಿಗಳು ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಲೇಖನಗಳಾಗಲಿ ವರದಿಗಳಾಗಲಿ ಲಭ್ಯವಿಲ್ಲ. ಆದ್ದರಿಂದ, ರಿಹಾನ್ನಾ ತನ್ನ ಮಗುವಿಗೆ ರಾಕೇಶ್ ಟಿಕಾಯತ್  ಹೆಸರನ್ನಿಡುತ್ತಾಳೆ ಎಂಬ ವೈರಲ್ ಸುದ್ದಿ ನಿಜವಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಅಮೆರಿಕಾದ ಖ್ಯಾತ ಪಾಪ್ ಗಾಯಕಿ ರಿಹಾನ್ನಾ ತನ್ನ ಮಗುವಿಗೆ ರಾಕೇಶ್ ಟಿಕಾಯತ್ ಎಂದು ನಾಮಕರಣ ಮಾಡುತ್ತೇನೆಂದು ಎಲ್ಲಿಯೂ ಹೇಳಿಲ್ಲ, ದಿ ಇಂಡಿಪೆಂಡೆಂಟ್ ಮಾಡಿದ ಟ್ವೀಟ್ ನ ಫೋಟೋವನ್ನು ಕದ್ದು ಎಡಿಟ್ ಮಾಡಿ ರಿಹಾನ್ನಾ ತನ್ನ ಮಗುವಿಗೆ ಟಿಕಾಯತ್ ಎಂದು ಹೆಸರಡಿಲಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮಮತಾ ಬ್ಯಾನರ್ಜಿಯವರ ಫೋಟೋವನ್ನು ಎಡಿಟ್ ಮಾಡಿ ಹಂಚಿದ ಕಿಡಿಗೇಡಿಗಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights