ಫ್ಯಾಕ್ಟ್‌ಚೆಕ್: ಪ್ರಮಾಣ ವಚನ ಸ್ವೀಕಾರಕ್ಕೆ ಕೇಸರಿ ಶಾಲು ಧರಿಸಿದ್ದರೆ ಆಸ್ಟ್ರೇಲಿಯಾದ ನೂತನ ಪ್ರಧಾನಿ?

ಆಸ್ಟ್ರೇಲಿಯಾದ ನೂತನ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೇಸರಿ ಶಾಲನ್ನು ತೊಟ್ಟು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಆಸ್ಟ್ರೇಲಿಯಾ ಪ್ರಧಾನಿ ಕೇಸರಿ ಶಾಲು ಧರಿಸಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದಾಗ , ಇದೇ ಫೋಟೋವನ್ನು ‘ಎಬಿಸಿ ನ್ಯೂಸ್’ ಪ್ರಕಟಿಸಿದ ಲೇಖನದಲ್ಲಿ ಈ ಕೆಳಗಿನ ವಿವರಣೆಯೊಂದಿಗೆ ಪ್ರಕಟಿಸಿರುವುದು ಕಂಡುಬಂದಿದೆ – “ಮೇ 6ರಂದು ಪರಮಟ್ಟಾದಲ್ಲಿ ನಡೆದ ಹಿಂದೂ ಕೌನ್ಸಿಲ್ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಆಂಟನಿ ಅಲ್ಬನೀಸ್ ಕೇಸರಿ ಸ್ಕಾರ್ಫ್ ಧರಿಸಿದ್ದರು”.  ಎಂದು ವಿವರಣೆ ನೀಡಿದೆ.

ಆಂಥೋನಿ ಅಲ್ಬನೀಸ್ ಅವರು 6 ಮೇ 2022 ರಂದು ಅದೇ ಕೇಸರಿ ಸ್ಕಾರ್ಫ್‌ನೊಂದಿಗೆ ಇದೇ ರೀತಿಯ ಫೋಟೋಗಳನ್ನು ಪೋಸ್ಟ್ ಮಾಡಿ, ಹೀಗೆ ಬರೆದಿದ್ದಾರೆ – “ಹಿಂದೂ ನಂಬಿಕೆ ಮತ್ತು ಉಪಖಂಡದ ಸಮುದಾಯಗಳ ನಾಯಕರೊಂದಿಗೆ ಇಂದು ರಾತ್ರಿ ಪರಮಟ್ಟಾದಲ್ಲಿ ಬೆಚ್ಚಗಿನ ಸ್ವಾಗತ. ಇಂದು ರಾತ್ರಿಯ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕಾಗಿ ಹಿಂದೂ ಕೌನ್ಸಿಲ್ ಆಸ್ಟ್ರೇಲಿಯಾಕ್ಕೆ ಬಳಗಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಬರೆದಿದ್ದಾರೆ. ಈ ಕಾರ್ಯಕ್ರಮವು ಆಂಟನಿ ಅಲ್ಬನೀಸ್ ಪ್ರಧಾನಿಯಾಗಿ ಆಯ್ಕೆಯಾಗುವ ಮೊದಲು ನಡೆದಿರುವ ಕಾರ್ಯಕ್ರಮ ಆಗಿದೆ.

6 ಮೇ 2022 ರಂದು ನಡೆದ ಈವೆಂಟ್‌ಗೆ ಸಂಬಂಧಿಸಿದ ಹೆಚ್ಚಿನ ದೃಶ್ಯಗಳನ್ನು ‘ಹಿಂದೂ ಕೌನ್ಸಿಲ್ ಆಸ್ಟ್ರೇಲಿಯಾ’ ಫೇಸ್‌ಬುಕ್ ಪುಟದಲ್ಲಿ ಕಾಣಬಹುದು. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವಾಸ್ತವವಾಗಿ ಈ ಕಾರ್ಯಕ್ರಮದ ಸಂದರ್ಭದಲ್ಲಿ ಆಂಥೋನಿ ಅಲ್ಬನೀಸ್ ಆಸ್ಟ್ರೇಲಿಯಾದ ಪ್ರಧಾನಿಯಾಗಿರಲೇ ಇಲ್ಲ.

ಈ ಕಾರ್ಯಕ್ರಮಕ್ಕೆ ಆಂಥೋನಿ ಅಲ್ಬನೀಸ್ ಮಾತ್ರವಲ್ಲದೆ, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಸ್ಕಾಟ್ ಮಾರಿಸನ್ ಕೂಡ (ಅಂದಿನ ಪ್ರಧಾನಿ) ‘ಹಿಂದೂ ಕೌನ್ಸಿಲ್ ಆಸ್ಟ್ರೇಲಿಯಾ’ ಆಯೋಜಿಸಿದ್ದ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಇದೇ ರೀತಿಯ ಕೇಸರಿ ಸ್ಕಾರ್ಫ್ ಧರಿಸಿದ್ದರು. ಎಂದು ‘ಎಬಿಸಿ ನ್ಯೂಸ್’ ಬರೆದಿದೆ – ಮೇ 6ರ ಕಾರ್ಯಕ್ರಮಕ್ಕೆ “ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕರು ಆಸ್ಟ್ರೇಲಿಯಾದ ಭಾರತೀಯ ವಲಸೆ ಮತದಾರರ ಬೆಂಬಲವನ್ನು ಕೋರುವ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ” ಫೋಟೋಗಳನ್ನು ತೆಗೆದುಕೊಳ್ಳಲಾಗಿದೆ.

ನೂತನವಾಗಿ ಆಯ್ಕೆಯಾದ ಆಸ್ಟ್ರೇಲಿಯಾದ ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದೃಶ್ಯಾವಳಿಗಳನ್ನು ಇಲ್ಲಿ ನೋಡಬಹುದು. ಆಂಥೋನಿ ಅಲ್ಬನೀಸ್ ಅವರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೇಸರಿ ಸ್ಕಾರ್ಫ್ ಧರಿಸಿರಲಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ನೂತನವಾಗಿ ಆಯ್ಕೆಯಾದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಫೋಟೋವನ್ನು ಸೆರೆಹಿಡಿಲಾಗಿದೆ ಎಂಬುದು ಸುಳ್ಳು. ಆಂಥೋನಿ ಅಲ್ಬನೀಸ್ ಅವರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೇಸರಿ ಸ್ಕಾರ್ಫ್ ಧರಿಸಿರಲಿಲ್ಲ. ಪೋಸ್ಟ್ ಮಾಡಲಾದ ಫೋಟೋವನ್ನು ‘ಹಿಂದೂ ಕೌನ್ಸಿಲ್ ಆಸ್ಟ್ರೇಲಿಯಾ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತೆಗೆದುಕೊಳ್ಳಲಾಗಿದೆ. ಹಿಂದಿನ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಕೂಡ ‘ಹಿಂದೂ ಕೌನ್ಸಿಲ್ ಆಸ್ಟ್ರೇಲಿಯಾ’ ಆಯೋಜಿಸಿದ್ದ ಇದೇ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಇದೇ ರೀತಿಯ ಕೇಸರಿ ಸ್ಕಾರ್ಫ್ ಧರಿಸಿದ್ದರು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಹೀಗೆ ಮಾಡಿದ್ದು ನಿಜವೇ? ಈ ಸ್ಟೋರಿ ನೋಡಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights