ಫ್ಯಾಕ್ಟ್‌ಚೆಕ್: ಚಿತ್ತೋರಗಢ ಕೋಟೆಯ ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ಸುಳ್ಳು ಹೇಳಿದ BJP ಮುಖಂಡರು

“ದೇವಾಸ್ಥಾನವನ್ನು ಮಸೀದಿಯನ್ನಾಗಿ ಪರಿವರ್ತಸಿಲಾಗಿದೆ, “ಮೊಘಲರು ಮತ್ತು ಉಳಿದ ಆಕ್ರಮಣಕಾರ ರಾಜರ ವಾಸ್ತುಶಿಲ್ಪವು ತುಂಬಾ ವಿಶಿಷ್ಟ ಮತ್ತು ವಿಚಿತ್ರವಾಗಿತ್ತು, ಅವರು ನಿರ್ಮಿಸಿದ ಪ್ರತಿ ನೆಲಮಾಳಿಗೆಯಲ್ಲಿ ದೇವಸ್ಥಾನವನ್ನು ಇಟ್ಟುಕೊಂಡಿದ್ದರು” ಎಂದು ಬಿಜೆಪಿ ಸದಸ್ಯ ಸುರೇಂದ್ರ ಪೂನಿಯಾ ತಮ್ಮ ಟ್ವಿಟರ್ ಅಕೌಂಟ್‌ನಿಂದ ಫೋಟೋವನ್ನು ಹಿಂದಿಯ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಪೋಸ್ಟ್‌ ಮಾಡಲಾಗಿರುವ ಫೋಟೋದಲ್ಲಿ ಕಟ್ಟಡದ ಮೇಲ್ಭಾಗದಲ್ಲಿ ಗುಮ್ಮಟದ ಆಕಾರವಿದ್ದು ದೇವಾಲಯದಂತೆ ಕಂಡುಬರುವ ರಚನೆಯಂತಿದೆ, ಇದನ್ನು ಮಸೀದಿಯನ್ನಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿ ಪೋಸ್ಟ್‌ ಮಾಡಲಾಗಿದೆ.

 

ಸಾಮಾಜಿಕ ಮಾಧ್ಯಮದ ಬಳಕೆದಾರರಾದ @SujinEswar1 ಮತ್ತು @Chetankumar_111 ಅವರು ಚಿತ್ತೋರ್‌ನಲ್ಲಿರುವ ಹಿಂದೂ ದೇವಾಲಯವನ್ನು ಮೊಘಲರು ಮಸೀದಿಯಾಗಿ ಪರಿವರ್ತಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

https://twitter.com/SujinEswar1/status/1523519450393169920?ref_src=twsrc%5Etfw%7Ctwcamp%5Etweetembed%7Ctwterm%5E1523519450393169920%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fno-this-temple-in-chittor-was-not-converted-into-a-mosque%2F

ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಇದೇ ಹೇಳಿಕೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಸ್ಟಾಕ್ ಫೋಟೋ ವೆಬ್‌ಸೈಟ್ ಅಲಾಮಿಯಲ್ಲಿ ಈ ಕೆಳಗಿನ ಪೋಟೋ ಕಂಡುಬಂದಿದೆ. “ಹಳೆಯ ದೇವಾಲಯದ ಅವಶೇಷಗಳು. ರತ್ತನ್ ಸಿಂಗ್ ಅರಮನೆ. ಚಿತ್ತೋರಗಢ ಕೋಟೆ. ಭಾರತ” ಎಂಬ ಶೀರ್ಷಿಕೆಯನ್ನು ಹೊಂದಿದೆ.

2011 ರ ಫೋರಮ್  ಅಲ್ಲಿ ಸುದೀಪ್ತೋ ರೇ ಅವರು ಕೋಲ್ಕತ್ತಾದಿಂದ ರಾಜಸ್ಥಾನಕ್ಕೆ ತಮ್ಮ  ಪ್ರವಾಸದ ಸಂದರ್ಭದಲ್ಲಿ ಸೆರೆಹಿಡಿದ ಫೋಟೋಗಳನ್ನು ಪ್ರಕಟಿಸಿದ್ದಾರೆ. ಅವರ ಪೋಸ್ಟ್‌ಗಳಲ್ಲಿ, ಸುದೀಪ್ತೋ ವೈರಲ್ ಚಿತ್ರವನ್ನು “ಒಂದು ಸ್ಪಷ್ಟವಾದ ದೇವಸ್ಥಾನ, ಮಸೀದಿಯಾಗಿ ಪರಿವರ್ತಿಸಲಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ವೈರಲ್ ಚಿತ್ರವು Alamy ನಲ್ಲಿ ಅದೇ ರಚನೆಯನ್ನು ಸೂಚಿಸುವ ಫೋಟೋ ಲಭ್ಯವಾಗಿದೆ. ಅಲಾಮಿಯಲ್ಲಿನ ವಿವರಣೆಯ ಪ್ರಕಾರ, ರಾಜಸ್ಥಾನದ ಚಿತ್ತೋರ್‌ಗಢ ಕೋಟೆಯ ರತ್ತನ್ ಸಿಂಗ್ ಅರಮನೆಯಲ್ಲಿನ ರಚನೆಯು ಹಳೆಯ ದೇವಾಲಯವಾಗಿದೆ. ಈ  ಬ್ಲಾಗ್‌ನಲ್ಲಿ ಮತ್ತಷ್ಟು ಫೋಟೋವನ್ನು ಬೇರೆ ಬೇರೆ ಕೋನಗಳಿಂದ ರಚನೆಯ ಹಲವು ಚಿತ್ರಗಳ ಜೊತೆಗೆ ರಚನೆಯ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಬ್ಲಾಗ್ ರಚನೆಯನ್ನು ಒಂದು ಗುಮ್ಮಟವನ್ನು ಹೋಸ್ಟ್ ಮಾಡುವ ದೇವಾಲಯ ಎಂದು ವಿವರಿಸುತ್ತದೆ, ಅದರ ಮಧ್ಯದಲ್ಲಿ ಸಣ್ಣ ಬಲಿಪೀಠವನ್ನು ಹೊಂದಿರುವ ನಾಲ್ಕು ಕಂಬಗಳ ರಚನೆಯಿಂದ ಕೂಡಿದೆ. ಈ ರಚನೆಯು ಜೈನ ದೇವಾಲಯವಾಗಿದೆ ಎಂದು ತಿಳಿಸಲಾಗಿದೆ. ಈ ರಚನೆಯು ಎರಡು ಪ್ರವೇಶದ್ವಾರಗಳನ್ನು ಹೊಂದಿದೆ ಎಂದು ವಿವರಿಸಲಾಗಿದೆ, ಅದರ ಮೇಲೆ ಮಂಟಪಗಳನ್ನು ನಿರ್ಮಿಸಲಾಗಿದೆ, ಅದರ ಮುಂದೆ ಎರಡು ಕಲಾತ್ಮಕ ಕಂಬಗಳಿವೆ.

ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ (IGNCA) ವೆಬ್‌ಸೈಟ್‌ನಲ್ಲಿ ಲಭ್ಯವಿರುವ ASI ಯ ಅಧಿಕೃತ ದಾಖಲೆಯು ಶೃಂಗಾರ್ ಚೌರಿಯನ್ನು 1448 ರಲ್ಲಿ ಮಹಾರಾಣಾ ಕುಂಭದ ಖಜಾಂಚಿಯಾಗಿದ್ದ ಕೋಲಾ ಅವರ ಮಗ ವೇಲಾಕ ನಿರ್ಮಿಸಿದ ಜೈನ ದೇವಾಲಯ ಎಂದು ವಿವರಿಸುತ್ತದೆ.

ಲೇಖಕ A. ಕನ್ನಿಂಗ್‌ಹ್ಯಾಮ್ ಅವರು ಬರೆದಿರುವ “ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಪ್ರಕಾರ ರಿಪೋರ್ಟ್ ಆಫ್ ಎ ಟೂರ್ ಇನ್ ದಿ ಪಂಜಾಬ್ ಅಂಡ್ ರಜಪೂತಾನಾ ಇನ್ 1883-84, ಸಂಪುಟ. XXIII ದಲ್ಲಿ” ಬುರುಜು ನಡುವಿನ ಮಧ್ಯಭಾಗವು ಈಗ ಶೃಂಗಾರ್-ಚೌರಿ ಎಂದು ಕರೆಯಲ್ಪಡುವ  ಕಲ್ಲಿನಿಂದ ಕೆತ್ತಿದ ದೇವಾಲಯವಾಗಿದೆ. ರಾಣಾ ಕುಂಭದ ಜೈನ ಖಜಾಂಚಿಯಿಂದ ನಿರ್ಮಿಸಲ್ಪಟ್ಟಿದೆ”. ಕೆಲವು ಸಮಯದಲ್ಲಿ, ಈ ದೇವಾಲಯವನ್ನು ಸ್ಥಳೀಯರು ಬೇರೆ ಹೆಸರಿನಿಂದ ಕರೆಯುತ್ತಿದ್ದರು ಎಂದು ಇದು ಸೂಚಿಸುತ್ತದೆ.

ಈ ಪ್ರದೇಶದಲ್ಲಿ ಗುಮ್ಮಟಗಳನ್ನು ಹೊಂದಿರುವ ಅನೇಕ ದೇವಾಲಯಗಳಿವೆ ಎಂಬುದು ಸಹ ಗಮನಿಸಬೇಕಾದ ಅಂಶವಾಗಿದೆ. ಗುಮ್ಮಟಗಳು ಈ ಪ್ರದೇಶದಲ್ಲಿನ ದೇವಾಲಯಗಳ ಸಾಮಾನ್ಯ ಲಕ್ಷಣವಾಗಿ ಕಂಡುಬರುತ್ತವೆ.

ಸಾಮಾಜಿಕ ಮಾಧ್ಯಮಗಳಲ್ಲಿ  ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯು ಸುಳ್ಳು ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ. IGNCA ಮತ್ತು ASI ಯ ದೃಶ್ಯ ಸಾಕ್ಷ್ಯ ಮತ್ತು ವರದಿಗಳ ಪ್ರಕಾರ, ಚಿತ್ರದಲ್ಲಿ ಚಿತ್ರಿಸಲಾದ ರಚನೆಯು ದೀರ್ಘಕಾಲದ ಇತಿಹಾಸವನ್ನು ಹೊಂದಿದೆ. ಈ ರಚನೆಯು ಜೈನ ದೇವಾಲಯವಾಗಿದ್ದು, ಇದನ್ನು ಮಹಾರಾಣಾ ಕುಂಭದ ಖಜಾಂಚಿಯಾಗಿದ್ದ ಕೋಲನ ಮಗ ವೆಲಕ ನಿರ್ಮಿಸಿದ್ದು. ಶೃಂಗಾರ ಚೌರಿಯನ್ನು ಮಸೀದಿಯಾಗಿ ಪರಿವರ್ತಿಸಿದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿದಂತೆ, ಹಿಂದೂ ದೇವಾಲಯವನ್ನು ಮೊಘಲ್ ಆಕ್ರಮಣಕಾರರಿಂದ ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು BJP ಸುಳ್ಳು ಹೇಳಿದೆ, ಆದರೆ ಅದು ಹಿಂದೂ ದೇವಾಲಯವೇ ಅಲ್ಲ ಅದೊಂದು ಜೈನ ದೇವಾಲಯ. ಹಾಗಾಗಿ BJP ಸದಸ್ಯರು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪ್ರಮಾಣ ವಚನ ಸ್ವೀಕಾರಕ್ಕೆ ಕೇಸರಿ ಶಾಲು ಧರಿಸಿದ್ದರೆ ಆಸ್ಟ್ರೇಲಿಯಾದ ನೂತನ ಪ್ರಧಾನಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ಚಿತ್ತೋರಗಢ ಕೋಟೆಯ ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ಸುಳ್ಳು ಹೇಳಿದ BJP ಮುಖಂಡರು

  • June 4, 2022 at 8:03 pm
    Permalink

    ಕುರುಡನಿಗೂ ತಿಳಿಯುತ್ತದೆ ಇದು ದೇವಾಲಯ ಎಂದು ಮಸೀದಿಗಳ ಮೇಲೆ ಇಷ್ಟೊಂದು ಚಿತ್ತಾರ ಕರಕುಶಲತೆ ಇರಲು ಸಾಧ್ಯವೇ ಇನ್ನೂ ಏಕೆ ಮೂರ್ಖ ಪ್ರಯತ್ನ ವಂದನೆಗಳು

    Reply

Leave a Reply

Your email address will not be published.

Verified by MonsterInsights