ಫ್ಯಾಕ್ಟ್‌ಚೆಕ್: ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಯ ವಿಡಿಯೊ ಎಂದು ತಪ್ಪಾದ ವಿಡಿಯೋ ಹಂಚಿಕೆ

29 ಮೇ 2022 ರಂದು, ಪಂಜಾಬಿ ಗಾಯಕ ಮತ್ತು ರಾಜಕಾರಣಿ ಸಿಧು ಮೂಸೆವಾಲ ಅವರನ್ನು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ಕೆನಡಾದ ದರೋಡೆಕೋರ ಗೋಲ್ಡಿ ಬ್ರಾರ್ ಈ ಹತ್ಯೆಯ ಹೊಣೆಗಾರಿಕೆ ಹೊತ್ತುಕೊಂಡಿದ್ದಾರೆ. ಮೂಸೆವಾಲ ಹತ್ಯೆಯ ದೃಶ್ಯಾವಳಿಗಳನ್ನು ಎಂದು ಹೇಳುವ ವಿಡಿಯೊ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಪೋಸ್ಟ್‌ನಲ್ಲಿ ಮಾಡಲಾದ  ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ವೀಡಿಯೊದ ಸ್ಪಷ್ಟ ಆವೃತ್ತಿಯನ್ನು ಹಂಚಿಕೊಳ್ಳುವ ಹಲವಾರು ಹಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ನಾವು ಕಂಡುಕೊಂಡಿದ್ದೇವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ‘MKV ಆರ್ಟ್ಸ್ ಫಿಲ್ಮ್’ ಹೆಸರಿನ ಯೂಟ್ಯೂಬ್ ಚಾನೆಲ್ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನು ಪ್ರಕಟಿಸಿದೆ ಮತ್ತು MX ಪ್ಲೇಯರ್ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ವೆಬ್ ಸರಣಿಯಾದ ‘ಶುಕ್ಲಾ ದಿ ಟೈಗರ್’ ನ ಮೇಕಿಂಗ್ ವೀಡಿಯೊ ಎಂದು ವಿವರಿಸಿದೆ.

ಈ ವೀಡಿಯೊದ ಮತ್ತಷ್ಟು ವಿಶ್ವಾಸಾರ್ಹ ಮೂಲಗಳನ್ನು ಹುಡುಕಿದಾಗ, ನಟ ರವಿ ಭಾಟಿಯಾ ಅವರ ಫೇಸ್‌ಬುಕ್ ಪುಟದಲ್ಲಿ ಅದೇ ವೀಡಿಯೊ ಕಂಡುಬಂದಿದೆ. ರವಿ ಭಾಟಿಯಾ ಅವರು ಈ ವೀಡಿಯೊವನ್ನು 23 ಅಕ್ಟೋಬರ್ 2019 ರಂದು ಪೋಸ್ಟ್ ಮಾಡಿದ್ದಾರೆ, “ಒಟಿಟಿಗಾಗಿ ನನ್ನ ಮುಂಬರುವ ವೆಬ್ ಸರಣಿ ‘ಶುಕ್ಲಾ-ದಿ ಟೆರರ್’ ನ ದೃಶ್ಯ”. ಎಂದು ನಟ ರವಿ ಭಾಟಿಯಾ ವಿಡಿಯೊ ಪೋಸ್ಟ್‌ ಮಾಡಿದ್ದಾರೆ

‘ಶುಕ್ಲಾ ದಿ ಟೈಗರ್’ ವೆಬ್ ಸೀರೀಸ್‌ನಲ್ಲಿ  ಈ ಗುಂಡಿನ ಚಕಮಕಿಯ ದೃಶ್ಯವನ್ನು ಹುಡುಕಿದಾಗ, ‘ಶುಕ್ಲಾ ದಿ ಟೈಗರ್’ ವೆಬ್ ಸೀರೀಸ್‌ನ ಮೊದಲ ಸೀಸನ್‌ನ ಎಂಟನೇ ಸಂಚಿಕೆಯಲ್ಲಿ , ಶೂಟೌಟ್ ದೃಶ್ಯವನ್ನು ಕಾಣಬಹುದಾಗಿದೆ. ಈ ಎಪಿಸೋಡ್‌ನ 6:12 ನಿಮಿಷಗಳವರೆಗೆ,  ವೆಬ್ ಸರಣಿಯಲ್ಲಿ ಶೂಟೌಟ್ ದೃಶ್ಯವನ್ನು ನೋಡಬಹುದು. ‘ಶುಕ್ಲಾ ದಿ ಟೈಗರ್’ ವೆಬ್ ಸರಣಿಯು 1990 ರ ದಶಕದಲ್ಲಿ ಗೂರ್ಖಾಪುರದ ಗ್ಯಾಂಗ್‌ಸ್ಟರ್‌ನ ಕಥೆಯಿಂದ ಪ್ರೇರಿತವಾಗಿದೆ. ಈ ವೆಬ್ ಸರಣಿಯನ್ನು ಮೇ 2021 ರಲ್ಲಿ MX ಪ್ಲೇಯರ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಮತ್ತೊಂದೆಡೆ, ಸಿಧು ಮೂಸ್ ವಾಲಾ ಅವರ ಹತ್ಯೆಗೆ ಕೆಲವೇ ನಿಮಿಷಗಳ ಮೊದಲು ಎರಡು ಕಾರುಗಳು ಮೂಸೆವಾಲ ಕಾರನ್ನು ಹಿಂಬಾಲಿಸುತ್ತಿರುವ ದೃಶ್ಯಗಳನ್ನು ತೋರಿಸುವ ಸಿಸಿಟಿವಿ ದೃಶ್ಯಗಳನ್ನು ಇಲ್ಲಿ ನೋಡಬಹುದು. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ‘ಶುಕ್ಲಾ ದಿ ಟೈಗರ್’ ವೆಬ್ ಸರಣಿಯ ಶೂಟೌಟ್ ದೃಶ್ಯವನ್ನು ತೋರಿಸುತ್ತದೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ದೃಶ್ಯಾವಳಿಗಳು ಸಿದ್ದು ಮೂಸ್ ವಾಲಾ ಹತ್ಯೆಯ ವಿಡಿಯೊ ಅಲ್ಲ ಎಂದು ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ‘ಶುಕ್ಲಾ ದಿ ಟೈಗರ್’ ವೆಬ್ ಸರಣಿಯ ಗುಂಡಿನ ಚಕಮಕಿಯ ದೃಶ್ಯವನ್ನು ಸಿಧು ಮೂಸ್ ವಾಲಾ ಅವರ ಹತ್ಯೆಯ ಸಂದರ್ಭದಲ್ಲಿ ಮಾಡಲಾದ ವಿಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋ ಸಿಧು ಮೂಸೆವಾಲಾ ಅವರ ಹತ್ಯೆಗೆ ಸಂಬಂಧಿಸಿಲ್ಲ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಾರ್ದಿಕ್ ಪಟೇಲ್ ಕಾಂಗ್ರೆಸ್ ತೊರೆದು BJP ಸೇರಿದಕ್ಕೆ ಕಪಾಳಕ್ಕೆ ಹೊಡೆಯಲಾಯಿತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights