ಫ್ಯಾಕ್ಟ್‌ಚೆಕ್: ಕೇಂದ್ರ ಸರ್ಕಾರ 5 ಲಕ್ಷ ಜನರಿಗೆ ಉಚಿತ ಲ್ಯಾಪ್-ಟಾಪ್ ನೀಡುತ್ತಿದೆ ಎಂಬ ನಕಲಿ ಸಂದೇಶ ವೈರಲ್

ವಾಟ್ಸಾಪ್‌ನಲ್ಲಿ ಸಂದೇಶವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಕೇಂದ್ರ ಸರ್ಕಾರ ಜನರಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು (Free Laptop) ವಿತರಿಸುತ್ತಿದೆ ಎಂದು ಹೇಳಲಾಗಿದೆ. ಕೋವಿಡ್‌ ಕಾರಣಕ್ಕೆ ಆನ್‌ಲೈನ್ ತರಗತಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ರೂಪಿಸಿದ್ದು ದೇಶಾದ್ಯಂತ ಎಲ್ಲಾ ಜನರಿಗೆ 500,000 ಉಚಿತ ಲ್ಯಾಪ್‌ಟಾಪ್‌ಗಳನ್ನು ಒದಗಿಸಲು ಮುಂದಾಗಿದೆ ಎಂಬ ಶೀರ್ಷಿಕೆಯೊಂದಿಗೆ ವಾಟ್ಸಾಪ್‌ ಮತ್ತು  ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

 

ಆದರೆ ಪ್ರಶ್ನೆಯೆಂದರೆ, ಸರ್ಕಾರ ನಿಜವಾಗಿಯೂ ಅಂತಹ  ಯೋಜನೆಯನ್ನು ಘೋಷಿಸಿದೆಯೇ? ವೈರಲ್ ಸಂದೇಶದ ಸತ್ಯಾಸತ್ಯತೆ ಏನು ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ವೆಬ್‌ಸೈಟ್‌ ಅನ್ನು ಸರ್ಚ್‌ ಮಾಡಿ ವೈರಲ್ ಪೋಸ್ಟ್‌ನಲ್ಲಿ ಇರುವ ಯೋಜನೆಯನ್ನು ಕುರಿತು ಪರಿಶೀಲಿಸಿದಾಗ ಕೆಂದ್ರ ಸರ್ಕಾರ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಜಾರಿ ಮಾಡಿದೆ ಎನ್ನುವ ಬಗ್ಗೆ ಯಾವ ಸುಳಿವು ಲಭ್ಯವಾಗಿಲ್ಲ.

 

ವಾಟ್ಸಾಪ್ ಸಂದೇಶದಲ್ಲಿ ಲಭ್ಯವಾಗಿರುವ ಲಿಂಕ್‌ಅನ್ನು ಪರಿಶೀಲಿಸಲಾಗಿದ್ದು ಅದರ ಮೇಲೆ ಕ್ಲಿಕ್ ಮಾಡಿದಾಗ ಒಂದು ಪೇಜ್ ತೆರೆದುಕೊಳ್ಳುತ್ತದೆ ಅಲ್ಲಿ ನಿಮ್ಮ ಹೆಸರನ್ನು ದಾಖಲಿಸುವಂತೆ ಕೇಳುತ್ತದೆ, ಮುಂದುವರೆಯಲು ..

  1.  WhatsApp ನಲ್ಲಿ 5 ಗುಂಪುಗಳು ಅಥವಾ 15 ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಿ (ಕೆಳಗಿನ “SHARE” ಐಕಾನ್ ಮೇಲೆ ಕ್ಲಿಕ್ ಮಾಡಿ).
  2. ಹಸಿರು ಪರಿಶೀಲನಾ ಪಟ್ಟಿಯನ್ನು ಭರ್ತಿ ಮಾಡಿದ ನಂತರ ಶಿಕ್ಷಣ ಇಲಾಖೆ ಪುಟಕ್ಕೆ ಸ್ವಯಂಚಾಲಿತವಾಗಿ ಮರುನಿರ್ದೇಶಿಸಲಾಗುತ್ತದೆ.
  3. ನೀವು 15 ನಿಮಿಷಗಳಲ್ಲಿ SMS ಮೂಲಕ ದೃಢೀಕರಣವನ್ನು ಸ್ವೀಕರಿಸುತ್ತೀರಿ.

ಈ ಹಂತಗಳು ಮುಗಿದ ನಂತರ, ಅರ್ಜಿದಾರರ ವಯುಕ್ತಿಕ ವಿವರಗಳ್ನು ಕೇಳಲು ಪ್ರಾರಂಭಿಸುತ್ತದೆ. ವಾಸ್ತವವಾಗಿ ಯಾವುದೇ ಸರ್ಕಾರಿ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಯ ವಿವರವನ್ನು ಕೇಳಿದರೂ ಅದನ್ನು ಯೋಜನೆ ಬಗ್ಗೆ ಇತರೆ 5 ವಾಟ್ಸಾಪ್ ಗುಂಪುಗಳಿಗೆ ಹಂಚಿಕೆ ಮಾಡಿ ಎಂದು ಕೇಳುವುದಿಲ್ಲ. ಹಸಿರು ಪರಿಶೀಲನಾ ಪಟ್ಟಿಯನ್ನು ಭರ್ತಿ ಮಾಡಿದ ನಂತರ ಶಿಕ್ಷಣ ಇಲಾಖೆ ಪುಟಕ್ಕೆ ಸ್ವಯಂ ಚಾಲಿತವಾಗಿ ತೆರದುಕೊಳ್ಳುವುದಿಲ್ಲ.  ಹಾಗಾಗಿ ಇದು ಕೇಂದ್ರ ಸರ್ಕಾರ ನಿಗದಿ ಮಾಡಿರುವ ಯೋಜನಯೇ ಅಲ್ಲ ಎಂದು ಖಚಿತವಾಗಿದೆ.

ಈ ವೈರಲ್ ಸಂದೇಶದ ಬಗ್ಗೆ ತನಿಖೆ ನಡೆಸಿದ ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದು, ಪ್ರಧಾನಿ ಉಚಿತ ಲ್ಯಾಪ್‌ಟಾಪ್  ವಿತರಣಾ ಯೋಜನೆಯಡಿ ಎಲ್ಲರಿಗೂ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ ಎಂದು ಸಂದೇಶದಲ್ಲಿ ಹೇಳಲಾಗುತ್ತಿದೆ. ಆದರೆ ಇದು ನಕಲಿ ವಾಟ್ಸಾಪ್ ಸಂದೇಶ ಎಂದು ಪಿಐಬಿ ಹೇಳಿದೆ.

ಹಾಗಾಗಿ ಇಂತಹ ನಕಲಿ ಸಂದೇಶಗಳ  ಬಗ್ಗೆ ಎಚ್ಚರದಿಂದಿರಿ. ಈ ನಕಲಿ ಸಂದೇಶಗಳನ್ನು ಹಂಚಿಕೊಳ್ಳದಂತೆ ಅಥವಾ ಫಾರ್ವರ್ಡ್ ಮಾಡದಂತೆಯೂ ಕೇಳಲಾಗಿದೆ. ಇದರೊಂದಿಗೆ, ಅಂತಹ ಯಾವುದೇ ಲಿಂಕ್ ಮತ್ತು ವೆಬ್‌ಸೈಟ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಸೂಚಿಸಲಾಗಿದೆ.

ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್ ಫೋನ್ ನೀಡುತ್ತಿದೆ ಎಂದು  ಈ ಹಿಂದೆಯೂ ಇಂತಹದೇ ಪೋಸ್ಟ್‌  ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು ಅದನ್ನು ನಕಲಿ ಎಂದು ಏನ್‌ ಸುದ್ದಿ.ಕಾಂ ಫ್ಯಾಕ್ಟ್‌ಚೆಕ್ ಮಾಡಿ ಅದನ್ನು ನಕಲಿ ಎಂದು ನಿರೂಪಿಸಿತ್ತು. ಅದನ್ನು ಇಲ್ಲಿ ನೋಡಬಹುದು ಈ ಜಾಹೀರಾತನ್ನು ನೀವು ಎಲ್ಲೋ ನೋಡಿದ್ದರೆ ಅಥವಾ ವಾಟ್ಸಾಪ್‌ನಲ್ಲಿ ನಿಮಗೆ ಕಳುಹಿಸಿದರೆ, ಅದನ್ನು ನಂಬಬೇಡಿ ಎಂದು ಪಿಐಬಿ ಎಚ್ಚರಿಸಿದೆ. ಇದರಲ್ಲಿ ನೀಡಿರುವ ಸಂಖ್ಯೆಗೆ ಯಾವುದೇ SMS ಕಳುಹಿಸಬೇಡಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ನೀವು ವಂಚನೆಗೆ ಬಲಿಯಾಗಬಹುದು. ಇದರೊಂದಿಗೆ ಈ ವಂಚನೆಯ ಬಗ್ಗೆ ಇತರರಿಗೂ ಅರಿವು ಮೂಡಿಸಿ. ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಎಂದು ಹೇಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಕೇಂದ್ರ ಸರ್ಕಾರದಿಂದ ಉಚಿತ ಸ್ಮಾರ್ಟ್ ಫೋನ್! ಇದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights