ಫ್ಯಾಕ್ಟ್‌ಚೆಕ್ : ಕುಡಿದ ಅಮಲಿನಲ್ಲಿ ವಧು ಬದಲಿಗೆ ಅತ್ತಿಗೆಯ ಕೊರಳಿಗೆ ಹಾರ ಹಾಕಿದ ವರ! ವಾಸ್ತವವೇನು ?

ಮದುವೆ ಸಮಾರಂಭದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ, ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಕಂಡುಬರುವ ವರನು ವಧುವಿಗೆ ಹಾಕಬೇಕಿರುವ ಹಾರವನ್ನು ವಧುವಿನ ಪಕ್ಕದಲ್ಲಿ ನಿಂತಿರುವ ಅತ್ತಿಗೆಯ ಕೊರಳಿಗೆ ಹಾಕಿಬಿಡುತ್ತಾನೆ . ತಕ್ಷಣ ಆ ಮಹಿಳೆ ಕೋಪದಿಂದ ವರನಿಗೆ ಕಪಾಳಮೋಕ್ಷ ಮಾಡುತ್ತಾಳೆ. ಎಂದು  Asianet News Kannada ವರದಿ ಮಾಡಿದೆ.

ಸ್ಕ್ರಿಪ್ಟ್‌ ವಿಡಿಯೊವನ್ನು ನೈಜ ಘಟನೆ ಎಂದು ವರದಿ ಮಾಡಿದ ಸುವರ್ಣ ನ್ಯೂಸ್
ಸ್ಕ್ರಿಪ್ಟ್‌ ವಿಡಿಯೊವನ್ನು ನೈಜ ಘಟನೆ ಎಂದು ವರದಿ ಮಾಡಿದ ಸುವರ್ಣ ನ್ಯೂಸ್

ಹಲವು ಬಳಕೆದಾರರು ಈ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಬಿಹಾರದಲ್ಲಿ ಮದ್ಯಪಾನ ನಿಷೇಧದ ಹೊರತಾಗಿಯೂ, ವರನು ಕುಡಿದು ಹಸೆಮಣೆ ಏರಿದ್ದಾನೆ ಮತ್ತು ವಧುವಿನ ಬದಲಿಗೆ ಆಕೆಯ ಅತ್ತಿಗೆಗೆ ಮಾಲೆಯನ್ನು ಹಾಕಿದ್ದಾನೆ ಎಂದು ಹೇಳಲಾಗಿದೆ. ಟ್ವಿಟ್ಟರ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು “ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಲಾಗಿದೆ” ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. (ಆರ್ಕೈವ್ ಮಾಡಿದ ಲಿಂಕ್).

ಟೈಮ್ಸ್ ನೌ ವೈರಲ್ ವೀಡಿಯೊವನ್ನು ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ “ಓಹ್! ಕುಡುಕ ವರ ಅತ್ತಿಗೆಯ ಕೊರಳಿಗೆ ಮಾಲೆ ಹಾಕಿ ಕಪಾಳಮೋಕ್ಷ ಮಾಡಿಸಿಕೊಂಡಿದ್ದಾನೆ ”. ದೈನಿಕ್ ಜಾಗರಣ್ ಮತ್ತು ಇಂಡಿಯಾ ಟೈಮ್ಸ್ ಕೂಡ ತಮ್ಮ ವರದಿಯಲ್ಲಿ ಇದೇ ರೀತಿಯ ಪ್ರತಿಪಾದನೆಯನ್ನು ಮಾಡಿವೆ.

ಇತರ ಹಲವು ಮಾಧ್ಯಮಗಳು ಅದೇ ಪ್ರತಿಪಾದನೆಯೊಂದಿಗೆ ವೀಡಿಯೊವನ್ನು ಪ್ರಸಾರ ಮಾಡಿವೆ. ಅವುಗಳಲ್ಲಿ Asianet News KannadaFree Press JournalTelugu StopNational DastakiDiva and Pakistan’s Geo TV ಸೇರಿವೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಕ್ಲಿಪ್ ಅನ್ನು ಇದೇ ಹೇಳಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್ :

ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಸ್ಕ್ರಿಪ್ಟ್ (ನಟಿಸಲಾಗಿದೆ) ಮಾಡಲಾಗಿದೆ ಎಂದು ಆಲ್ಟ್ ನ್ಯೂಸ್ ಸ್ಪಷ್ಟಪಡಿಸಿದೆ. ಮೇ 16, 2022 ರಂದು ಮಿಥಿಲಾ ಬಜಾರ್ ಎಂಬ YouTube ಚಾನೆಲ್‌ನಿಂದ ಅಪ್‌ಲೋಡ್ ಮಾಡಲಾದ ಮೂಲ ವೀಡಿಯೊವನ್ನು ಕಂಡುಹಿಡಿದಿದೆ. ವೀಡಿಯೊದ ವಿವರಣೆಯಲ್ಲಿ “ಈ ವೀಡಿಯೊದಲ್ಲಿನ ಎಲ್ಲಾ ಪಾತ್ರಗಳು ಮತ್ತು ಕಥೆಗಳು ಕಾಲ್ಪನಿಕವಾಗಿವೆ ಮತ್ತು ಮನರಂಜನೆ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂದು ಬರೆಯಲಾಗಿದೆ” .

ವಿವರಣೆಯಲ್ಲಿ ಕಲಾವಿದರ ಹೆಸರನ್ನು ಸಹ ಉಲ್ಲೇಖಿಸಲಾಗಿದ್ದು, ಈ ಚಾನಲ್‌ನ ಟೈಮ್‌ಲೈನ್ ಅನ್ನು ಪರಿಶೀಲಿಸಿದಾಗ, ಸಾಮಾನ್ಯವಾಗಿ ಮನರಂಜನೆಗಾಗಿ ಸ್ಕ್ರಿಪ್ಟ್‌ ವೀಡಿಯೊಗಳನ್ನು ಮಾಡುತ್ತಾರೆ ಎಂದು ತಿಳಿದು ಬಂದಿದೆ. ಇದೇ ನಟರನ್ನು ಬೇರೆ ಬೇರೆ ವೀಡಿಯೊದಲ್ಲಿ ಕಾಣಬಹುದು. ಅವರ ಬಟ್ಟೆ ಮತ್ತು ಚಿತ್ರೀಕರಣದ ಸ್ಥಳವೂ ಒಂದೇ ಆಗಿರುವುದನ್ನು ಆಲ್ಟ್ ನ್ಯೂಸ್ ಕಂಡುಹಿಡಿದಿದೆ. ಆದರೂ, ಈ ವೀಡಿಯೊದ ಸ್ಕ್ರಿಪ್ಟ್ ವಿಭಿನ್ನವಾಗಿದೆ. ಇಲ್ಲಿ, ವರನು ವಧುವಿಗೆ ಸಿಹಿತಿಂಡಿಗಳನ್ನು ಬಲವಂತವಾಗಿ ತಿನ್ನಿಸಿದ ಕಾರಣ ಮದುವೆ ಮುರಿದು ಬೀಳುತ್ತದೆ. ಹೀಗಾಗಿ, ವೈರಲ್ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಮನೋರಂಜನೆಗಾಗಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವರನೊಬ್ಬ ‘ಕುಡಿದ ಮತ್ತಿನಲ್ಲಿ ವಧುವಿನ ಪಕ್ಕದಲ್ಲಿ ನಿಂತಿರುವ ಅತ್ತಿಗೆಯ ಕೊರಳಿಗೆ ಮಾಲೆಯನ್ನು ಹಾಕಿದ್ದಾರೆ’ ಎಂದು  ನಟಿಸಿದ ವೀಡಿಯೊವನ್ನು ಏಷಿಯಾನೆಟ್ ಸುವರ್ಣ ನ್ಯೂಸ್‌ ಸೇರಿದಂತೆ ಹಲವು ಮಾಧ್ಯಮಗಳು ಬಿಹಾರದಲ್ಲಿ ನಡೆದ ನೈಜ ಘಟನೆ ಎಂದು ತಪ್ಪಾಗಿ ವರದಿ ಮಾಡಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ :  ಫ್ಯಾಕ್ಟ್‌ಚೆಕ್ : ವಿಚಿತ್ರ ಮಗು ಜನಿಸಿದ್ದು ಉತ್ತರಪ್ರದೇಶದಲ್ಲಿ ಅಲ್ಲ, ಮಧ್ಯಪ್ರದೇಶದಲ್ಲಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights