ಫ್ಯಾಕ್ಟ್‌ಚೆಕ್: ಪ್ರವಾಹದಲ್ಲಿ ಸಿಲುಕಿದ್ದವರನ್ನು ಹೆಲಿಕ್ಯಾಪ್ಟರ್ ಹಗ್ಗದ ಮೂಲಕ ರಕ್ಷಿಸಿದ ರೋಚಕ ದೃಶ್ಯಗಳು ಇತ್ತೀಚಿನದಲ್ಲ

ಗೋದಾವರಿ ನದಿಯಿಂದ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲಾಯಿತು ಎಂಬುದನ್ನು ಬಿಂಬಿಸುವ ವಿಡಿಯೊವೊಂದು ಇತ್ತೀಚೆಗೆ ಕೆಲವು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಯಿತು. ಪ್ರವಾಹದಲ್ಲಿ ಸಿಲುಕಿದ್ದ JCB ಯಂತ್ರದ ಮೇಲೆ ಕೆಲ ಜನರು ರಕ್ಷಣೆ ಪಡೆದಿದ್ದರು. ಸಂತ್ರಸ್ತರ ನೆರವಿಗೆ ಧಾವಿಸಿದ ವಾಯುಪಡೆಯ ಎರಡು ವಿಶೇಷ ಹೆಲಿಕಾಪ್ಟರ್‌ಗಳು ಹಗ್ಗದ ಮೂಲಕ ಜನರನ್ನು ರಕ್ಷಿಸಿದ ರೋಚಕ ವಿಡಿಯೊ ಸಾಕಷ್ಟು ವೈರಲ್ ಆಗಿತ್ತು. ಇದು ತೆಲಂಗಾಣದಲ್ಲಿ ಉಂಟಾದ ಪ್ರವಾಹದ ಇತ್ತೀಚಿನ ವಿಡಿಯೊ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಪೋಸ್ಟ್‌ನ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ವೈರಲ್ ವಿಡಿಯೊದ ಸ್ಕ್ರೀನ್‌ಶಾಟ್‌ಅನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ  ಅದೇ ವಿಡಿಯೊವನ್ನು ವಿವಿಧ ಮಾಧ್ಯಮಗಳು ಹಂಚಿಕೊಂಡಿರುವುದು ಕಂಡುಬಂದಿದೆ. 20 ನವೆಂಬರ್ 2021 ರಂದು ಬಳಕೆದಾರ Sadu Vamsii ಅವರು ಇದೇ ವಿಡಿಯೊವನ್ನು YouTube ಗೆ ಅಪ್‌ಲೋಡ್  ಮಾಡಿರುವುದು ಕಂಡುಬಂದಿದೆ.

ಭಾರತೀಯ ವಾಯುಪಡೆಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಮಾಡಲಾಗಿರುವ  ಟ್ವೀಟ್‌ಗಳು ಲಭ್ಯವಾಗಿದ್ದು, ಟ್ವೀಟ್‌ನಲ್ಲಿ ಆಂಧ್ರಪ್ರದೇಶದ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸುತ್ತಿರುವ  ರೆಸಲ್ಯೂಶನ್ ಇರುವ ವಿಡಿಯೊಗಳನ್ನು ಹಂಚಿಕೊಂಡಿದೆ.

ಸುದ್ದಿವಾಹಿನಿಗಳು ಪ್ರಸಾರ ಮಾಡಿದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದ ವಿಡಿಯೊ ತೆಲಂಗಾಣದಲ್ಲಿ ಈ ಬಾರಿ ಉಂಟಾದ ಪ್ರವಾಹಕ್ಕೆ ಸಂಬಂಧಿಸಿದ್ದಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. 2021ರ ನವೆಂಬರ್ 20ರಂದು ಯೂಟ್ಯೂಬ್‌ನಲ್ಲಿ ಈ ವಿಡಿಯೊ ಅಪ್‌ಲೋಡ್ ಆಗಿದೆ. ಆಂಧ್ರ ಪ್ರದೇಶದ ಚಿತ್ರಾವತಿ ನದಿಯ ಪ್ರವಾಹದಲ್ಲಿ ಸಿಲುಕಿದ ಜನರನ್ನು ರಕ್ಷಿಸಲಾದ ವಿಡಿಯೊ ಇದಾಗಿದೆ. ಕಳೆದ ವರ್ಷ ಉಂಟಾಗಿದ್ದ ಪ್ರವಾಹದ ಕುರಿತು ಎನ್‌ಡಿಟಿವಿ ಸೇರಿದಂತೆ ಹಲವು ಸುದ್ದಿವಾಹಿನಿಗಳು ವರದಿ ಮಾಡಿದ್ದವು.

Image Credit: NDTV

ಒಟ್ಟಾರೆಯಾಗಿ ಹೇಳುವುದಾದರೆ  ಆಂಧ್ರ ಪ್ರದೇಶದ ಚಿತ್ರಾವತಿ ನದಿಯ ಪ್ರವಾಹದಲ್ಲಿ ಸಿಲುಕಿದ ಜನರನ್ನು ರಕ್ಷಿಸಲಾದ ಹಳೆಯ ವಿಡಿಯೊವನ್ನು, ಗೋದಾವರಿ ನದಿಯಿಂದ ಉಂಟಾದ ಇತ್ತೀಚಿನ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಗುಜರಾತ್‌ನ ಶಿವಘಾಟ್‌ ಜಲಪಾತವನ್ನು ಅಂಬೋಲಿಘಾಟ್‌ ಎಂದು ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights