ಫ್ಯಾಕ್ಟ್‌ಚೆಕ್: ಬೆತ್ತಲೆ ಪ್ರತಿಭಟನೆಗೂ, ಇರಾನ್‌ನ ಹಿಜಾಬ್‌ ವಿರುಧ್ದದ ಹೋರಾಟಕ್ಕೂ ಸಂಬಂಧವಿಲ್ಲ

” ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆ, ಈಗ ಟಾಪ್‌ಲೆಸ್ ಪ್ರತಿಭಟನೆಗೆ ವರೆಗೆ ಬಂದಿದೆ. ಹಿಜಾಬ್ ಅನ್ನು ತೆಗೆಯುವುದರಿಂದ ಹಿಡಿದು ಹಿಜಾಬ್ ಅನ್ನು ಎಸೆಯುವವರೆಗೆ, ಹಿಜಾಬ್ ಅನ್ನು ಸುಡುವುದರಿಂದ ಹಿಡಿದು ಹಿಜಾಬ್‌ನಿಂದ ಶೂಗಳನ್ನು ಸ್ವಚ್ಛಗೊಳಿಸುವವರೆಗೆ ನಡೆದಿತ್ತು. ಈಗ ಬೀದಿಯಲ್ಲಿ ಬಟ್ಟೆಯನ್ನು ಕಳಚಿ ಬೆತ್ತಲೆ ಪ್ರತಿಭಟನೆ ಮಾಡುವವರೆಗೂ ಬಂದಿದೆ ಹಿಜಾಬ್ ವಿರೋಧಿ ಹೋರಾಟ” ಎಂಬ ಸಾಲುಗಳೊಂದಿಗೆ ಮಹಿಳೆಯರ ಗುಂಪು ಬೆತ್ತಲೆ ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ವಾಟ್ಸಾಪ್‌ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.

ಇರಾನ್ ನಾಯಕಿಯರು ವಿಶ್ವದ ಮುಸ್ಲಿಂ ಮಹಿಳೆಯರನ್ನು ಹಿಜಾಬ್ ಸೆ ಆಜಾದಿ, ಬುರ್ಖಾ ಸೆ ಆಜಾದಿ ವರಗೆ ಕರೆದೊಯ್ಯಲಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಈ ವಿಡಿಯೋ ಪೋಸ್ಟ್‌ನ ಸತ್ಯಾಸತ್ಯತೆಯನ್ನುತಿಳಿಸುವಂತೆ ಏನ್‌ಸುದ್ದಿ.ಕಾಂನ ವಾಟ್ಸಾಪ್‌ ಸಂಖ್ಯೆಗೆ ವಿನಂತಿಗಳು ಬಂದಿದ್ದು, ಈ ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಇರಾನ್‌ನಲ್ಲಿ ಹಿಜಾಬ್ ಧರಿಸದ ಕಾರಣಕ್ಕಾಗಿ ಯುವತಿ ಮಹ್ಸಾ ಅಮಿನಿ ಅವರ ಜೀವ ಸಾವಿನಲ್ಲಿ ಅಂತ್ಯಗೊಂಡಿತ್ತು. ಈ ಘಟನೆಯಿಂದ  ಇರಾನ್‌ನಾದ್ಯಂತ ಹಿಜಾಬ್ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಇರಾನ್ ಸರ್ಕಾರದ ಹಿಜಾಬ್ ನೀತಿಯ ವಿರುದ್ಧ ಪ್ರತಿಭಟಿಸುತ್ತಿರುವ ಇರಾನ್ ಮಹಿಳೆಯರಿಗೆ ವಿಶ್ವದ ಮಹಿಳೆಯರ ಬೆಂಬಲವೂ ದೊರೆತಿತ್ತು.

ಮಹಿಳೆಯರ ಹಕ್ಕುಗಳ ವಿರುದ್ಧ ಡ್ರೆಸ್ ಕೋಡ್‌ಗಳನ್ನು ಅನುಸರಿಸಲು ಹೇರುವ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಹಲವಾರು ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿ ಮತ್ತು  ತಲೆಯ ಸ್ಕಾರ್ಫ್‌ಗಳನ್ನು ಸುಟ್ಟುಹಾಕುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದರು.

ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಇರಾನ್‌ನ ಹಿಜಾಬ್ ವಿರುದ್ದ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ ಎಂದು ಬೂಮ್ ವರದಿ ಮಾಡಿದೆ.

ಬೆತ್ತಲೆ ಪ್ರತಿಭಟನೆಗೂ ಇರಾನ್‌ನ್ಲಿ ನಡೆದ ಹಿಜಾಬ್ ವಿರುದ್ದದ್ದ ಹೋರಾಟಕ್ಕೂ ಸಂಬಂಧವಿಲ್ಲ:

ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ ಚಿಲಿ ದೇಶದಲ್ಲಿ ಅಕ್ಟೋಬರ್ 18, 2019 ರಲ್ಲಿ ಚಿಲಿಯ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ಮತ್ತು ರಾಷ್ಟ್ರೀಯ ಕಾನೂನನ್ನು ಜಾರಿಗೊಳಿಸುವ ಪೋಲೀಸ್ ಕ್ಯಾರಬಿನೆರೋಸ್ ವಿರುದ್ಧ ಪ್ರದರ್ಶಿಸಿದ ಫ್ರತಿಭಟನೆ ಎಂದು ಸುದ್ದಿ ವರದಿಯೊಂದು ಲಭ್ಯವಾಗಿದೆ.

ಲೇಖನಗಳ ಪ್ರಕಾರ, ಚಿಲಿಯಲ್ಲಿ ಅಕ್ಟೋಬರ್ 18, 2019 ರ ಪ್ರತಿಭಟನೆಯ 59 ದಿನಗಳ ನಂತರ, ಒಂದು ಗುಂಪು ‘ಕ್ಯಾರಬಿನೆರೋಸ್ ಮಾಡಿದ ದುರುಪಯೋಗಗಳ ವಿರುದ್ದ ನಡೆದ ಪ್ರಬಲ ಹೋರಾಟ ಎಂದು ವರದಿಯಾಗಿದೆ. ಲೇಖನಗಳನ್ನು ಓದಲು ಇಲ್ಲಿ ಮತ್ತು ಇಲ್ಲಿ ಕ್ಲಿಕ್ ಮಾಡಿ.

2019 ರಲ್ಲಿ ಚಿಲಿಯ ಸ್ಯಾಂಟಿಯಾಗೊದ ಪೊಂಟಿಫಿಯಾ ಯೂನಿವರ್ಸಿಡಾಡ್ ಕ್ಯಾಟೋಲಿಕಾ ಡಿ  ಮುಂದೆ ಪ್ರತಿಭಟನಾ ಪ್ರದರ್ಶನವು ನಡೆಯಿತು ಎಂದು ಲೇಖನಗಳಲ್ಲಿ ತಿಳಿಸಲಾಗಿಸದೆ.  ನಂತರ ಗೂಗಲ್ ನಕ್ಷೆಗಳಲ್ಲಿ ವಾರ್ಸಿಟಿಯನ್ನು ಸರ್ಚ್ ಮಾಡಿದಾಗ ವಿಡಿಯೋದಲ್ಲಿರುವ ಅದೇ ಪ್ರದೇಶವನ್ನು ಕಂಡುಹಿಡಿಯಲು  ಸಾಧ್ಯವಾಯಿತು. ಮೂರು ವರ್ಷಗಳ ಹಿಂದೆ ಸರ್ಕಾದ ವಿರುದ್ದ ಪ್ರತಿಭಟನೆ ನಡೆದಿದೆ ಎಂಬುದು ಸ್ಪಷ್ಟವಾಗಿತ್ತು.

ಪ್ರತಿಭಟನಾ ಪ್ರದರ್ಶನ ನಡೆದ ಪ್ರದೇಶದ ರಸ್ತೆಯನ್ನು ಗೂಗಲ್ ಮ್ಯಾಪ್‌ನಲ್ಲಿ ಸರ್ಚ್ ಮಾಡಲಾಗಿದ್ದು ಅದನ್ನು ನೋಡಲು ಇಲ್ಲಿ ಕ್ಲಿಕ್ ಮಾಡಬಹುದು. ಅದೇ ಹೋಲಿಕೆ ಇಲ್ಲಿದೆ. 2019 ರಲ್ಲಿ ಚಿಲಿಯಲ್ಲಿ ನಡೆಯುತ್ತಿದ್ದ ಅಸಮಾನತೆ ಮತ್ತು ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ನೇತೃತ್ವದ ಸರ್ಕಾರದ ವಿರುದ್ಧ ತಿಂಗಳುಗಳ ಕಾಲ ಸಾಮಾಜಿಕ ಹೋರಾಟಗಳು, ಪ್ರತಿಭಟನೆಗಳಿಗೆ ಈ ಜಾಗ ಸಾಕ್ಷಿಯಾಗಿದೆ.

ಆಗಿನ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ಮತ್ತು ರಾಷ್ಟ್ರೀಯ ಕಾನೂನು ಜಾರಿ ಪೊಲೀಸರ ದಮನದ ವಿರುದ್ಧ ಪ್ರತಿಭಟಿಸಲು ಚಿಲಿಯಲ್ಲಿ ಮಹಿಳೆಯರ ನಗ್ನ ಪ್ರದರ್ಶನಗಳ ಹಳೆಯ ವೀಡಿಯೊ ವಾಟ್ಸಾಪ್‌ನಲ್ಲಿ ಇರಾನ್‌ನ ಟಾಪ್‌ಲೆಸ್ ಹಿಜಾಬ್ ವಿರೋಧಿ ಪ್ರತಿಭಟನೆ ಎಂಬ ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಮಗಳಲ್ಲಿ ವೈರಲ್ ಆಗಿರುವ ಚಿಲಿ ದೇಶದಲ್ಲಿ 2019ರಲ್ಲಿ ಸರ್ಕಾರದ ವಿರುದ್ದ ನಡೆಸಿದ ನಗ್ನ ಪ್ರತಿಭಟನೆಯನ್ನು ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ಧರಿಸುವುದರ ವಿರುದ್ದ ನಡೆಯುತ್ತಿರುವ ಹೋರಾಟ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೂರು ಹೆಡೆ ಸರ್ಪ ಇರುವುದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights