ಫ್ಯಾಕ್ಟ್‌ಚೆಕ್: ಪಾಕಿಸ್ತಾನ ಮತ್ತು ಚೀನಾ ಅಸ್ತಮಾ ಹರಡುವ ಪಟಾಕಿಗಳನ್ನು ಮಾರುತ್ತಿದ್ದಾರೆ ಎಂಬುದು ನಿಜವೇ?

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ದೀಪಾವಳಿ ಎಂದರೆ ಬೆಳಕಿನ ಹಬ್ಬ. ಈ ಹಬ್ಬದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವುದು ಸಾಮಾನ್ಯ. ಈಗಾಗಲೇ ದೀಪಾವಳಿ ಹಬ್ಬಕ್ಕೆ ಸಂದೇಶಗಳು ವಾಟ್ಸಾಪ್ ಮತ್ತು ಮೆಸೇಂಜರ್‌ಗಳಲ್ಲಿ ಬರಲಾರಂಭಿಸಿವೆ. ಇದೇ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ದೀಪಾವಳಿ ಹಬ್ಬಕ್ಕೆ ಪಾಕಿಸ್ತಾನ ಭಾರತದ ವಿರುದ್ದ ಸಂಚು ರೂಪಿಸಿ ಭಾರತದ ನಾಗರೀಕರನ್ನು ಗುರಿಯಾಗಿಸಿಕೊಂಡಿದೆ ಎಂದು ಪ್ರತಿಪಾದಿಸಲಾಗಿದೆ.

'फर्जी' शब्द की मुहर लगा WhatsApp के एक वायरल मैसेज का स्क्रीनशॉट जिसमें दावा किया जा रहा है कि चीन भारत में अस्थमा फैलाने और नेत्र रोग उत्पन्न करने के लिए विशेष किस्म के पटाखे और सजावटी लाइट्स भेज रहा है

ಪಾಕಿಸ್ತಾನವು ನೇರವಾಗಿ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲದ ಕಾರಣ ಚೀನಾ ಮೂಲಕ ಅದು ಸಂಚು ರೂಪಿಸುತ್ತಿದೆ. ಹಾಗಾಗಿ ಈ ಬಾರಿಯ ದೀಪಾವಳಿಗೆ ಚೀನಾದ ವಸ್ತುಗಳನ್ನು ಬಳಸಬೇಡಿ. ಚೀನಾವು ಭಾರತದಲ್ಲಿ ಅಸ್ತಮಾ ಹರಡಲು ಮತ್ತು ಕಣ್ಣಿನ ಕಾಯಿಲೆಗಳನ್ನು ಉಂಟುಮಾಡಲು ವಿವಿಧ ರೀತಿಯ ಪಟಾಕಿಗಳು ಮತ್ತು ಅಲಂಕಾರಗಳಲ್ಲಿ ಬಳಸುವ ದೀಪಗಳನ್ನು ಕಳುಹಿಸುತ್ತಿದೆ. ಈ ಸಂದೇಶವನ್ನು ಎಲ್ಲ ಭಾರತೀಯರಿಗೂ ತಲುಪಿಸಿ ಎಂದು ಪೋಸ್ಟ್‌ನಲ್ಲಿ ವಿನಂತಿಸಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಅನ್ನು ಪರಿಶೀಲಿಸಲು ಸಂದೇಶದ ಸ್ಕ್ರೀನ್‌ಶಾಟ್‌ಅನ್ನು ಗೂಗಲ್ ರಿವರ್ಸ್ ಇಮೇಜ್‌ ನಲ್ಲಿ ಸರ್ಚ್‌ ಮಾಡಿದಾಗ ಇದೊಂದು ಸುಳ್ಳು ಸುದ್ದಿ ಎಂದು PIB ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.

ಗೃಹ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ ಎಂದು ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ಈ ಸಂದೇಶವನ್ನು ಪಿಐಬಿ ಫ್ಯಾಕ್ಟ್ ಚೆಕ್ ಮಾಡಿದೆ. ಪಿಐಬಿ ಫ್ಯಾಕ್ಟ್ ಚೆಕ್‌ನ ಈ ಬಗ್ಗೆ ಟ್ವೀಟ್ ಮಾಡಿದ್ದು ಈ ವೈರಲ್ ಸಂದೇಶವು ನಕಲಿ ಎಂದಿದೆ. ಭಾರತದಲ್ಲಿ ಚೀನಾ ಅಸ್ತಮಾವನ್ನು ಹರಡಲು ಮತ್ತು ಕಣ್ಣಿನ ಕಾಯಿಲೆಗಳನ್ನು ಉಂಟುಮಾಡಲು ವಿಶೇಷ ರೀತಿಯ ಪಟಾಕಿ ಮತ್ತು ಅಲಂಕಾರ ದೀಪಗಳನ್ನು ಮಾರುಕಟ್ಟೆಗೆ ತಂದಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದಿದೆ.

Fact Check ಪಾಕ್ ಸಂಚಿನ ಭಾಗವಾಗಿ ಭಾರತದಲ್ಲಿ ರೋಗ ಉಂಟುಮಾಡಲು ಅಪಾಯಕಾರಿ ಪಟಾಕಿಗಳನ್ನು ತಯಾರಿಸಿದೆಯೇ ಚೀನಾ?

ಗೃಹ ಸಚಿವಾಲಯವು ಅಂತಹ ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ ಎಂದು PIB ಫ್ಯಾಕ್ಟ್‌ಚೆಕ್ ಸ್ಪಷ್ಟಪಡಿಸಿದ್ದು, ಇಂತಹ ಸುಳ್ಳು ಸುದ್ದಿಗಳ್ನು ಹರಡದಂತೆ ವಿನಂತಿಸಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಬಳ್ಳಾರಿಯಲ್ಲಿನ ಕಾಂಗ್ರೆಸ್ ಸಮಾವೇಶ ಎಂದು ನೈಜೀರಿಯಾದ ಪೋಟೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights