ಫ್ಯಾಕ್ಟ್‌ಚೆಕ್: ‘ಈರುಳ್ಳಿ ತಿನ್ನುವುದಿಲ್ಲ’ ಎಂದಿದ್ದ ನಿರ್ಮಲ ಸೀತಾರಾಮನ್ ಚೆನ್ನೈ ಮಾರ್ಕೆಟ್‌ನಲ್ಲಿ ಕೊಂಡಿದ್ದು ಈರುಳ್ಳಿಯನ್ನೆ?

ನಿರ್ಮಲಾ ಸೀತಾರಾಮನ್ ಅವರು ಅಕ್ಟೋಬರ್ 8 ರಂದು ಚೆನ್ನೈನಲ್ಲಿ ತರಕಾರಿ ಶಾಪಿಂಗ್ ಮಾಡಲು ಹೋದಾಗ, ಈರುಳ್ಳಿ ಖರೀದಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.

ಮಹಾರಾಷ್ಟ್ರದ ಕಾಂಗ್ರೆಸ್‌ ಸೇವಾದಳ ಘಟಕ ಮಾಡಿರುವ ಟ್ವೀಟ್‌ನಲ್ಲಿ ನಿರ್ಮಲಾ ಅವರು ಈರುಳ್ಳಿ ಖರೀದಿಸುತ್ತಿರುವ ಚಿತ್ರವಿದೆ. ‘ಬೆಲೆ ಏರಿಕೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸುವಾಗ ಈರುಳ್ಳಿ ಸೇವಿಸುವುದಿಲ್ಲ ಎಂದು ಹೇಳಿದ್ದ ನಿರ್ಮಲಾ ಅವರು ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಸಿದ್ದಾರೆ’ ಎಂದು ಹೇಳಿದೆ.

https://twitter.com/anamikaa_143/status/1579862908686606336?ref_src=twsrc%5Etfw%7Ctwcamp%5Etweetembed%7Ctwterm%5E1579862908686606336%7Ctwgr%5E41aefc0522ac205e0ea1613ed2e67d03f3539f5d%7Ctwcon%5Es1_&ref_url=https%3A%2F%2Fthelogicalindian.com%2Ffact-check%2Fnirmala-sitharama-buying-onion-is-photoshopped-38076

ಹಲವು ಸಾಮಾಜಿಕ ಮಾಧ್ಯಮದ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ನಿರ್ಮಲ ಸೀತಾರಾಮನ್ ಚೆನ್ನೈ ಮಾರ್ಕೆಟ್‌ನಲ್ಲಿ ಈರುಳ್ಳಿಯನ್ನು ಕೊಂಡಿದ್ದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಚೆನ್ನೈ ಮಾರುಕಟ್ಟೆಯಲ್ಲಿ ಈರುಳ್ಳಿ ಕೊಂಡಿದ್ದು ನಿಜವೇ ಎಂದು ಪರಿಶೀಲಿಸಲು ಸರ್ಚ್ ಮಾಡಿದಾಗ, ಹಣಕಾಸು ಸಚಿವರ ಕಚೇರಿಯ ಟ್ವಿಟರ್ ಖಾತೆಯಲ್ಲಿ ಅವರು ಮಾಡಿದ ಶಾಪಿಂಗ್‌ನ ಹಲವಾರು ಫೋಟೋಗಳು ಲಭ್ಯವಾಗಿವೆ. ಇವುಗಳಲ್ಲಿ ಎಲ್ಲಿಯೂ ಅವರು ಈರುಳ್ಳಿ ಖರೀದಿಸುವುದು ಕಾಣುತ್ತಿಲ್ಲ. ವಿಡಿಯೊದಲ್ಲಿ ನಿರ್ಮಲಾ ಸೀತಾರಾಮನ್ ಅವಳು ಕಾಡು ಗೆಣಸುಗಳನ್ನು ಖರೀದಿಸುತ್ತಿರುವುದು ಕಾಣುತ್ತದೆ.

ವೈರಲ್ ಆಗಿರುವ ಚಿತ್ರವನ್ನು ತಿರುಚಲಾಗಿದೆ ಎಂದು ಲಾಜಿಕಲ್ ಇಂಡಿಯನ್ ಜಾಲತಾಣವು ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಸಚಿವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಲಾಗಿರುವ ಮೂಲ ವಿಡಿಯೊ ಪರಿಶೀಲಿಸಲಾಗಿದೆ. ನಿರ್ಮಲಾ ಅವರು ಕೆಸುವಿನ ಗೆಡ್ಡೆಯನ್ನು ಬುಟ್ಟಿಗೆ ಹಾಕುತ್ತಿರುವ ದೃಶ್ಯವನ್ನು ತಿರುಚಿ, ಅವರು ಈರುಳ್ಳಿ ಖರೀದಿಸಿದಂತೆ ತೋರುವ ಹಾಗೆ ಮಾರ್ಪಡಿಸಲಾಗಿದೆ ಎಂದು ವೆಬ್‌ಸೈಟ್ ತಿಳಿಸಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ಈ ಘಟನೆಯನ್ನು ವರದಿ ಮಾಡಿದ್ದು, ತರಕಾರಿ ಮಾರುಕಟ್ಟೆಯ ಮಾರಾಟಗಾರ ಒಬ್ಬರನ್ನು ಮಾತನಾಡಿಸಿದ್ದು  ವಿತ್ತ ಸಚಿವರು 200 ರೂಪಾಯಿಯ ತರಕಾರಿ ಖರೀದಿಸಿದ್ದಾರೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದು. ಸೀತಾರಾಮನ್ ಅವರು ಖರೀದಿಸಿದ ತರಕಾರಿಗಳ ಪಟ್ಟಿಯಲ್ಲಿ ಈರುಳ್ಳಿ ಇರಲಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ವೈರಲ್ ಆಗಿರುವ ಫೋಟೊ ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಕೃಪೆ: ದಿ ಲಾಜಿಕಲ್ ಇಂಡಿಯನ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಮೂರು ಹೆಡೆ ಸರ್ಪ ಇರುವುದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights