ಫ್ಯಾಕ್ಟ್‌ಚೆಕ್: ಕೆಲಸ ಮಾಡದ AAP ಶಾಸಕನಿಗೆ ಮಹಿಳೆಯೊಬ್ಬರು ಕೆನ್ನೆಗೆ ಬಾರಿಸಿದ್ದು ನಿಜವೆ?

ಜವಬ್ದಾರಿಯಿಂದ ಕೆಲಸ ನಿರ್ವಹಿಸದೆ, ಬೇಜವಬ್ದಾರಿ ಮಾತನಾಡಿದ ಪಂಜಾಬಿನ AAP ಶಾಸಕನಿಗೆ ಮಹಿಳೆಯೊಬ್ಬರು ಕಪಾಳಕ್ಕೆ ಹೊಡೆದಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ವೊಂದು ಪ್ರಸಾರವಾಗುತ್ತಿದೆ.

ಪಂಜಾಬ್‌ನ ಮಹಿಳೆಯೊಬ್ಬರು AAP ಶಾಸಕನಿಗೆ ಸಾರ್ವಜನಿಕವಾಗಿ ಕಪಾಳಕ್ಕೆ ಹೊಡೆದಿದ್ದಾರೆ. ಕೆಲಸ ಮಾಡದ AAP ಶಾಸಕನನ್ನು ಈ ರೀತಿ ಪ್ರಶ್ನಿಸುತ್ತಿರುವ ಮಹಿಳೆಯ ಧೈರ್ಯವನ್ನು ಮೆಚ್ಚಬೇಕು. AAP ಸರ್ಕಾರ ಮತ್ತು ಶಾಸಕರು ಕೆಲಸ ಮಾಡುತ್ತಿಲ್ಲ ಎಂಬುದನ್ನು ಜನರ ಈ ಆಕ್ರೋಶ ತೋರಿಸುತ್ತದೆ’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಈ ಪೋಸ್ಟ್‌ಗಳ ಜತೆಯಲ್ಲಿ ವಿಡಿಯೊವನ್ನೂ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಪಂಜಾಬ್‌ನ ಯುಟ್ಯೂಬ್‌ ಚಾನೆಲ್‌ ‘ಲೋಕ್ ಆವಾಜ್ ಪಂಜಾಬಿ’ ನಿರ್ಮಿಸಿರುವ ಕಿರುಚಿತ್ರದ ದೃಶ್ಯಗಳಿವು. ಈ ವಿಡಿಯೊವನ್ನು ಬಳಸಿಕೊಂಡು ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

Image Credit: YouTube

ವಿಸ್ತೃತ ವಿಡಿಯೊದ 21 ಸೆಕೆಂಡುಗಳ ಅವದಿಯಲ್ಲಿ ಡಿಸ್‌ಕ್ಲೈಮರ್‌ ನಲ್ಲಿ ತಿಳಿಸಿರುವಂತೆ ‘ಲೋಕ್ ಆವಾಜ್ ಟಿವಿ ಮಾಡಿದ ವೀಡಿಯೊವನ್ನು ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ. ಸಾಮಾಜಿಕ ಅನಿಷ್ಟಗಳಿಂದ ಜನರನ್ನು ಜಾಗೃತಗೊಳಿಸಲು ಮತ್ತು ಜಾಗೃತಿ ಉದ್ದೇಶಗಳಿಗಾಗಿ ಇದನ್ನು ರಚಿಸಲಾಗಿದೆ. ಎಲ್ಲಾ ಪಾತ್ರಗಳು ಮತ್ತು ಘಟನೆಗಳು ಕಾಲ್ಪನಿಕ ಮತ್ತು ಯಾವುದೇ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಯಾವುದೇ ಹೋಲಿಕೆಯು ಕೇವಲ ಕಾಕತಾಳೀಯವಾಗಿರುತ್ತದೆ. ಯಾವುದೇ ವ್ಯಕ್ತಿ, ವೃತ್ತಿ ಅಥವಾ ಸಮುದಾಯವನ್ನು ನೋಯಿಸುವ ಉದ್ದೇಶ ನಮಗಿಲ್ಲ’ ಎಂಬ ವಿವರಣೆಯನ್ನು ವಿಡಿಯೋದಲ್ಲಿ ನೀಡಲಾಗಿದೆ.

Image Credit: YouTube

ವಾಸ್ತವವಾಗಿ ಸಾಮಾಜಿಕ ಮಾಧ್ಯಮಗಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ನೈಜ ಘಟನೆಯಲ್ಲ, “ಲೋಕ್ ಆವಾಜ್ ಪಂಜಾಬಿ” ಟಿವಿ ಯೂಟೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ಕಿರು ಚಿತ್ರದ ದೃಶ್ಯಗಳ ತುಣುಕನ್ನು, ಕೆಲಸ ಮಾಡದ AAP ಶಾಸಕನ ಕಪಾಳಕ್ಕೆ ಮಹಿಳೆಯೊಬ್ಬರು ಹೊಡೆದಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಲಾಜಿಕಲ್ ಇಂಡಿಯನ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಆಶೀರ್ವಾದ್ ಆಟಾದ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶವಿದೆ ಎಂದು ಸುಳ್ಳು ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights