ಫ್ಯಾಕ್ಟ್‌ಚೆಕ್ : ಅತಿಕ್ ಹತ್ಯೆಯ ನಂತರ ಹಂತಕರು ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ್ದು ಸುಳ್ಳೆ? ಈ ಸ್ಟೋರಿ ಓದಿ

ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹಮದ್‌ ಮತ್ತು ಆತನ ಸಹೋದರ ಆಶ್ರಫ್‌ನನ್ನು ಹತ್ಯೆ ಮಾಡಲಾಗಿತ್ತು. ಪತ್ರಕರ್ತರ ವೇಶದಲ್ಲಿ ಬಂದಿದ್ದ ಸಂಚುಕೊರರು ಸಾರ್ವಜನಿಕವಾಗಿ ಪೊಲೀಸರ ಸಮ್ಮುಖದಲ್ಲೆ ಗುಂಡು ಹಾರಿಸಿ ಹತ್ಯಗೈದಿದ್ದರು. ತಕ್ಷಣ ಉತ್ತರ ಪ್ರದೇಶದ ಪೊಲೀಸರು ದಾಳಿಕೋರರನ್ನು ಸ್ಥಳದಲ್ಲೇ ಬಂಧಿಸಿ ಮೂರು ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಹತ್ಯೆ ಮಾಡಿ ಪೊಲೀಸರಿಂದ ಬಂಧನಕ್ಕೊಳಗಾದ ನಂತರ ದಾಳಿಕೋರರು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.

ಆದರೆ ಕೆಲವು ಸಮಾಜಿಕ ಮಾಧ್ಯಮ ಬಳಕೆದಾರರು ಮತ್ತು BJP ಬೆಂಬಲಿಗರು ಹಂತಕರು ಜೈಶ್ರೀರಾಮ್ ಘೋಷಣೆ ಕೋಗಿಲ್ಲ ಇದು ಸುಳ್ಳು, ‘ದಾಳಿಕೋರರು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ ಎಂದು ಐಎಸ್‌ಐ ಸುಳ್ಳು ಸುದ್ದಿ ಹಬ್ಬಿಸುತ್ತಿದೆ’ ಎಂದು ಅರುಣ್ ಪುದುರ್ ಎಂಬವರು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಸಹ ಸಂಚಾಲಕ ಶಶಿಕುಮಾರ್ ಟ್ವೀಟ್ ಮಾಡಿದ್ದು ಅತೀಕ್‌ ಅಹಮದ್‌ ಮತ್ತು ಆತನ ಸಹೋದರ ಆಶ್ರಫ್‌ನನ್ನು ಹತ್ಯೆ ಮಾಡಿದ ದಾಳಿಕೋರರು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ ಎಂದು ವಡಿಯೋವನ್ನು ತಿರುಚಲಾಗಿದೆ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

https://twitter.com/SaffronSunanda/status/1647315000707653633?ref_src=twsrc%5Etfw%7Ctwcamp%5Etweetembed%7Ctwterm%5E1647315000707653633%7Ctwgr%5E09c19b030f2d555bdcf42256bd8f691bb4658227%7Ctwcon%5Es1_&ref_url=https%3A%2F%2Fwww.altnews.in%2Fjai-sri-ram-slogan-was-raised-by-atiq-ahmeds-murderers-contrary-claims-are-false%2F

ಹಾಗಿದ್ದರೆ ಸಾರ್ವಜನಿಕವಾಗಿ ಹತ್ಯೆ ಮಾಡಿದ ನಂತರ ಪೊಲೀಸರ ಸಮ್ಮುಖದಲ್ಲಿ ಹಂತಕರು ಜೈಶ್ರೀರಾಮ್ ಘೋಷಣೆ ಕೂಗಲಿಲ್ಲವೇ? ಅಲ್ಲಿ ನಡೆದ ವಾಸ್ಯವವೇನು ಎಂಬುದನ್ನು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ.

ಫ್ಯಾಕ್ಟ್‌ಚೆಕ್ :

ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹಾಗೂ ಆತನ ಸೋದರನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದ ಸಮಯದಲ್ಲಿ ದಾಳಿ ಮಾಡಿದ ಮೂವರು ಅತೀಕ್‌ ಸೋದರರನ್ನು ಹತ್ಯೆ ಮಾಡಿದ್ದರು. ಅತೀಕ್ ಅಹ್ಮದ್ ಹತ್ಯೆ ಮಾಡಿದವರು ‘ಜೈಶ್ರೀರಾಮ್’ ಘೋಷಣೆ ಕೂಗಿದ್ದು ನಿಜ ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ.

ಹತ್ಯೆ ಮಾಡಿದ ತಕ್ಷಣ ದುಷ್ಕರ್ಮಿಗಳಾದ ಲವ್ಲೇಶ್ ತಿವಾರಿ, ಸನ್ನಿ ಸಿಂಗ್ ಮತ್ತು ಅರುಣ್ ಮೌರ್ಯ ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪತ್ರಕರ್ತರ ವೇಷದಲ್ಲಿ ಬಂದಿದ್ದ ಆರೋಪಿಗಳು ಹ್ತಯೆ ಮಾಡಿದ ಬಳಿಕ ‘ಜೈಶ್ರೀರಾಮ್’ ಘೋಷಣೆ ಕೂಗಿದ್ದನ್ನು ನ್ಯೂಸ್ 18 ವರದಿ ಮಾಡಿದೆ. ಪೊಲೀಸರು ಅಪರಾಧಿಗಳ ಹಿನ್ನೆಲೆ ಮತ್ತು ಪೂರ್ವಾಪರವನ್ನು ತಿಳಿಯಲು ತನಿಖೆ ಶುರು ಮಾಡಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಸುದ್ದಿ ವಾಹಿನಿಗಳಲ್ಲಿ ಇರುವ ವಿಡಿಯೊಗಳಲ್ಲಿ ಘೋಷಣೆ ಕೇಳಿಸುತ್ತದೆ. ಘಟನಾ ಸ್ಥಳದಲ್ಲಿದ್ದ PTI ವರದಿಗಾರರು ಸೇರಿದಂತೆ ಹಲವು ಪತ್ರಕರ್ತರು ಇದನ್ನು ಖಚಿತಪಡಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್, ನ್ಯೂಸ್ 18 ಸೇರಿದಂತೆ ಹಲವು ಸುದ್ದಿತಾಣಗಳು ಇದನ್ನು ವರದಿ ಮಾಡಿವೆ.

ಸ್ಥಳದಲ್ಲಿದ್ದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ(PTI) ಪತ್ರಕರ್ತ ಪಂಕಜ್ ಶ್ರೀವಾಸ್ತವ್ ಅವರು ಗುಂಡಿನ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ, ದಾಳಿಕೋರರು ಜೈ ಶ್ರೀ ರಾಮ್ ಘೋಷಣೆಗಳನ್ನು ಎತ್ತಿದ್ದಾರೆ ಎಂದು ಆಲ್ಟ್ ನ್ಯೂಸ್‌ಗೆ ಖಚಿತಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಅತೀಕ್ ಮತ್ತು ಅಶ್ರಫ್ ಅಹ್ಮದ್‌ಗೆ ಗುಂಡು ಹಾರಿಸಿದ ನಂತರ ದಾಳಿಕೋರರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದಾರೆ ಎಂಬುದು ನಿಜ. ಆದರೆ BJP ಬೆಂಬಲಿಗರು ಇದನ್ನು ನುಳ್ಳು ತ್ತು ತಿರುಚಲಾಗಿದೆ ಎಂದು ಸಾನಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಸುಳ್ಳು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ದೆಹಲಿಯ AAP ಆಡಳಿತದ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೀನಾಯವಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights