ಫ್ಯಾಕ್ಟ್‌ಚೆಕ್ : ಹಾವಿನ ಮರಿಗಳು ಬಿದ್ದಿದ್ದ ಹಾಲನ್ನು ಸೇವಿಸಿದ ಮಕ್ಕಳು ಸಾವನಪ್ಪಿವೆ ಎಂಬ ಸುದ್ದಿ ನಿಜವೇ?

ಸಾವು ಒಂದು ತಪ್ಪಿಸಿಕೊಳ್ಳಲಾಗದ ಸತ್ಯ. ಆದರೆ ಅಪರೂಪದ ಸಾವುಗಳು ಯಾವಾಗಲೂ ಎಲ್ಲೆಡೆ ಚರ್ಚೆಯಾಗುತ್ತವೆ. ಹಾವಿನ ವಿಷದಿಂದ ಈ ರೀತಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ

ಪಾಕಿಸ್ತಾನದ ಕ್ವೆಟ್ಟಾದಲ್ಲಿ ಹಾವು ಬಿದ್ದಿದ್ದ ಹಾಲು ಕುಡಿದ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮಕ್ಕಳ ಸಾವಿಗೆ ಕಾರಣವಾಗಿರುವ ಹಾವಿನ ಚಿತ್ರವಾಗಿ ಚಿಕ್ಕ ಹಾವಿನ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಅದರ ಜೊತೆಗಿನ ಶೀರ್ಷಿಕೆಯು ಹೀಗಿದೆ, “ಅವರ ಸಾವಿನ ಕಾರಣವನ್ನು ತನಿಖೆ ಮಾಡಿದ ನಂತರ, ಆಹಾರ ಮತ್ತು ಪಾನೀಯಗಳ ಬಗ್ಗೆ ಕೇಳಿದಾಗ, ಮಕ್ಕಳು ಹೊರಗಿನಿಂದ ಏನನ್ನೂ ತಿನ್ನಲಿಲ್ಲ, ಆದರೆ ಮಲಗಲು ಹೋಗುವಾಗ ಅವರಿಗೆ ಎಂದಿನಂತೆ ಒಂದು ಲೋಟ ಹಾಲು ನೀಡಲಾಯಿತು ಎಂದು ಮಕ್ಕಳ ತಾಯಿ ಹೇಳಿದರು”.

 

ಕ್ವೆಟ್ಟಾದಲ್ಲಿ, ಇಂದು ಬೆಳಿಗ್ಗೆ ಒಂದೇ ಕುಟುಂಬದ ಇಬ್ಬರು ಮಕ್ಕಳು ತಮ್ಮ ಹಾಸಿಗೆಯಲ್ಲಿ ಶವವಾಗಿ ಪತ್ತೆಯಾಗಿವೆ. ಅವರ ಸಾವಿಗೆ ಕಾರಣವನ್ನು ತನಿಖೆ ಮಾಡಿದ ನಂತರ, ಆಹಾರ ಮತ್ತು ಪಾನೀಯಗಳ ಬಗ್ಗೆ ಕೇಳಿದಾಗ, ಮಕ್ಕಳು ಹೊರಗಿನಿಂದ ಏನನ್ನೂ ತಿಂದಿರಲಿಲ್ಲ, ಆದರೆ ಮಲಗಲು ಹೋಗುವಾಗ ಅವರಿಗೆ ಎಂದಿನಂತೆ ಒಂದು ಲೋಟ ಹಾಲು ನೀಡಲಾಯಿತು ಎಂದು ಮಕ್ಕಳ ತಾಯಿ ಹೇಳಿದರು. ರೆಫ್ರಿಜರೇಟರ್‌ನಲ್ಲಿ ಹಾಲಿನ ಪಾತ್ರೆಯನ್ನು ಪರಿಶೀಲಿಸಿದಾಗ, ಪಾತ್ರೆಯ ಕೆಳಭಾಗದಲ್ಲಿ 3/4 ಇಂಚಿನ ವಿಷಕಾರಿ ಹಾವಿನ ಮರಿಗಳು ಸತ್ತಿರುವುದು ಕಂಡುಬಂದಿದೆ.

ಫ್ರಿಡ್ಜ್ ನ ಹಾಲಿನ ಪಾತ್ರೆಯಲ್ಲಿ ಹಾವಿನ ಮರಿಗಳು ಬಿದಿದ್ದು ಹೇಗೆ ?? ಎಂದು ಮನೆಯವರು ಚಿಂತಿಸುತ್ತಿದ್ದಾಗ, ಕಾರಣ ತಿಳಿದು ಬಂದಿದೆ ಮಾರುಕಟ್ಟೆಯಿಂದ ಪಾಲಕ್ ಸೊಪ್ಪನ್ನು ತಂದು ತೆರೆಯದೆ ಹಾಗೆಯೇ ಫ್ರಿಡ್ಜ್ ನಲ್ಲಿಟ್ಟಿದ್ದನ್ನು ಕುಟುಂಬಸ್ಥರು ನೆನಪಿಸಿಕೊಂಡರು. ಗಂಟುಬಿದ್ದು ಹೊರಬಂದದ್ದು ಪಾಲಿನ್ ಪೇಪರ್ ನಲ್ಲಿರುವ ಮರಿ ಹಾವುಗಳಾಗಿರಬಹುದು. ಮಕ್ಕಳ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ, ಆದರೆ ಕುಟುಂಬವು ಇಬ್ಬರು ಮಕ್ಕಳನ್ನು ಕಳೆದುಕೊಂಡಿದೆ. ಆದ್ದರಿಂದ ನಾವು ಎಲೆಗಳ ಸೊಪ್ಪುಗಳು ಮತ್ತು ಫ್ರಿಜ್‌ನಲ್ಲಿ ಮುಚ್ಚಿದ ವಸ್ತುಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ನಿಮ್ಮ ಫ್ರಿಜ್ ಅನ್ನು ಯಾವಾಗಲೂ ಸ್ವಚ್ಛವಾಗಿಡಿ ಮತ್ತು ಅಡುಗೆಮನೆಯಲ್ಲಿ ಯಾವುದೇ ಆಹಾರವನ್ನು ತೆರೆದಿಡಬೇಡಿ. ಈ ಅಪಘಾತದಿಂದ ಪಾಠ ಕಲಿಯಿರಿ, ಕೇವಲ ಈ ಸಂದೇಶವನ್ನು ಓದಬೇಡಿ, ಅದನ್ನು ಹಂಚಿಕೊಳ್ಳಿ

ಈ ಘಟನೆ ಎಲ್ಲಿಯೂ ನಡೆದಿದೆ ಎಂದು ಉಡಾಫೆಯನ್ನು ಮಾಡಬೇಡಿ, ಇಂದು ಅಲ್ಲಿ ನಾಳೆ ಇನ್ನೆಲ್ಲೋ ದಯವಿಟ್ಟು ಪೋಷಕರೇ ನೀವು ತಂದಂತಹ ಸೊಪ್ಪು ತರಕಾರಿಯನ್ನು ಫ್ರಿಡ್ಜ್ ನಲ್ಲಿ ಇಡುವಾಗ ಮುಂಜಾಗ್ರತ ಕ್ರಮವಾಗಿ ಸೊಪ್ಪನ್ನು ಬಿಡಿಸಿ ಇಡಿ. ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ಸ್ ಮೂಲಕ ಸರ್ಚ್ ಮಾಡಿದಾಗ, ಈ ಘಟನೆ ನಡೆದಿರುವ ಬಗ್ಗೆ ಯಾವುದೇ ವರದಿಯಾಗಲಿ, ಸುದ್ದಿಯಾಗಲಿ ಲಭ್ಯವಿಲ್ಲ.  ಮೊದಲನೆಯದಾಗಿ, ಪಾಕಿಸ್ತಾನದ ಕ್ವೆಟ್ಟಾದಲ್ಲಿ ಅಂತಹ ಯಾವುದೇ ಘಟನೆ ನಡೆದಿದೆಯೇ ಎಂದು ನಾವು ಕೀವರ್ಡ್‌ಗಳನ್ನು ಬಳಸಿ ಹುಡುಕಿದೆವು. ಆದರೆ ಮಾಧ್ಯಮಗಳಲ್ಲಿ ಅಂತಹ ಯಾವುದೇ ಸುದ್ದಿ ಕಂಡುಬಂದಿಲ್ಲ. 2015 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಇದೇ  ಸಂದೇಶವನ್ನು ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಹರಿಯಾಣದ ಗುರ್ಗಾಂವ್ ಮತ್ತು ಉತ್ತರ ಪ್ರದೇಶದದಲ್ಲಿ ಈ ಘಟನೆ ನಡೆದಿದೆ ಎಂದು ಹಂಚಿಕೊಳ್ಳಲಾಗಿದೆ.

ಈ ರೀತಿ ಹಾವಿನ ಮರಿಗಳ ವಿಷದಿಂದ ಸಾವು ಸಂಭವಿಸುವುದೇ ?

“ಬಾರ್ಬಡೋಸ್ ಥ್ರೆಡ್‌ನೇಕ್ (ಟೆಟ್ರಾಚಿಲೋಸ್ಟೋಮಾ ಕಾರ್ಲೇ) ಭೂಮಿಯ ಮೇಲಿನ ಅತ್ಯಂತ ಚಿಕ್ಕ ಹಾವು ಎಂದು ನಂಬಲಾಗಿದೆ. ಕುರುಡು ಹಾವುಗಳ Leptotyphlopidae ಕುಟುಂಬದ ಸದಸ್ಯ, ಈ ಸಣ್ಣ ಸರೀಸೃಪಗಳು ಮೆಕ್ಸಿಕೋ, ಮಧ್ಯ ಅಮೇರಿಕಾ, ದಕ್ಷಿಣ ಅಮೇರಿಕಾ, ಆಫ್ರಿಕಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ. ಅವುಗಳನ್ನು “ಸ್ಪಾಗೆಟ್ಟಿ ನೂಡಲ್ ತರಹ” ಎಂದು ವಿವರಿಸಲಾಗಿದೆ. ಒಂದು ದೊಡ್ಡ ದಾರದ ಹಾವು ಸಾಮಾನ್ಯವಾಗಿ 4 ಇಂಚುಗಳಿಗಿಂತ ಕಡಿಮೆ ಉದ್ದವಿರುತ್ತದೆ ಮತ್ತು ಸುಮಾರು 0.02116437717 ಔನ್ಸ್ ತೂಗುತ್ತದೆ.

ಈ ಜಾತಿಯ ಹಾವುಗಳು ವಿಷಕಾರಿಯಲ್ಲವೆಂದೂ ವಿವರಣೆಗಳು ಹೇಳುತ್ತವೆ

ಈ ಹಾವುಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಫ್ಯಾಕ್ಟ್‌ಲಿ ಫ್ಯಾಕ್ಟ್‌ಚೆಕ್ ತಂಡ ಕೇರಳ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರನ್ನು ಸಂಪರ್ಕಿಸಿದೆ, ತಜ್ಞರ ಪ್ರಕಾರ, ಚಿತ್ರದಲ್ಲಿ ಕಂಡುಬರುವ ಹಾವು ಭಾರತದಲ್ಲಿ ಕಂಡುಬರುವುದಿಲ್ಲ, ಇದು ದಕ್ಷಿಣ ಅಮೇರಿಕಾ ಮತ್ತು ಆಫ್ರಿಕಾದಂತಹ ಸ್ಥಳಗಳಲ್ಲಿ ಕಂಡುಬರುತ್ತದೆ. ಇದು ಏಷ್ಯಾದ ಕೆಲವು ಸ್ಥಳಗಳಲ್ಲಿ ವಾಸಿಸುತ್ತದೆ. ಈ ಹಾವು ವಿಷಕಾರಿಯಲ್ಲ. ಮೇಲಾಗಿ ಹಾವು ಕಚ್ಚಿದ ನಂತರ ರಕ್ತದಲ್ಲಿ ವಿಷ ಬೆರೆತ ನಂತರವೇ ದೇಹಕ್ಕೆ ಹಾನಿಯಾಗುತ್ತದೆ. ಇಲ್ಲಿಯವರೆಗೆ, ಹಾವಿನ ದೇಹದ ಭಾಗಗಳನ್ನು ಸೇವಿಸಿದರೆ ಸಾವಿಗೆ ಕಾರಣವಾಗಬಹುದು ಎಂದು ತೋರಿಸುವ ಯಾವುದೇ ಅಧ್ಯಯನಗಳಿಲ್ಲ. ಹಾವಿನ ವಿಷವು ಆಹಾರದಲ್ಲಿ ಬಿದ್ದರೆ ಅದರೊಂದಿಗೆ ಬೆರೆತುಹೋಗುತ್ತದೆ ಎಂಬುದಕ್ಕೆ ಇದುವರೆಗೆ ಯಾವುದೇ ಪುರಾವೆಗಳಿಲ್ಲ ಎಂದಿದ್ದಾರೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರು ಸಂದೇಶ ಆಧಾರ ರಹಿತ” ಎಂದು ವರದಿ ಮಾಡಿದೆ.

ವೈರಲ್ ಪೋಸ್ಟ್‌ ಬಗ್ಗೆ ಡಾ. ಆಲಪ್ಪುಳ ವೈದ್ಯಕೀಯ ಕಾಲೇಜು, ಟ್ರಾನ್ಸ್‌ಫ್ಯೂಷನ್ ಮತ್ತು ಇಮ್ಯುನೊಹೆಮಟಾಲಜಿ ವಿಭಾಗದ ತಜ್ಞರು ಹೇಳುವ ಪ್ರಕಾರ, “ಹಾವು ಕಡಿತಕ್ಕೆ ಒಳಗಾಗಿ ಹಲವರು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಹಾವುನ್ನು ತಿಂದ ಕಾರಣಕ್ಕೆ ಸಾವನಪ್ಪಿದ್ದಾರೆ ಎಂಬ ಘಟನೆ ಇಲ್ಲಿ ನಡೆದಿಲ್ಲ. ಹಾವಿನ ವಿಷವು ರಕ್ತದೊಂದಿಗೆ ಬೆರೆತರೆ ಅಪಾಯಕಾರಿ. ಈ ವಿಷವು ಮಾನವ ದೇಹದಲ್ಲಿನ ಎಲ್ಲಾ ಪ್ರಮುಖ ಅಂಗಗಳ ಕಾರ್ಯನಿರ್ವಹಣೆಯನ್ನು ಅತಿ ಕಡಿಮೆ ಅವಧಿಯಲ್ಲಿ ನಿಲ್ಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾವಿನ ವಿಷವನ್ನು ನೇರವಾಗಿ ಆಹಾರದೊಂದಿಗೆ ಬೆರೆಸಿದರೆ ಕೆಲವು ತೊಂದರೆಗಳು ಎದುರಾಗುತ್ತವೆ. ಆದರೆ ಹಾವು ಕಚ್ಚಿದಾಗ ವಿಷ ಬೀರುವ ಪರಿಣಾಮದಷ್ಟು ಮಾರಣಾಂತಿಕ ತೊಂದರೆಗಳು ಇರುವುದಿಲ್ಲ. ಅಥವಾ ಅಷ್ಟು ಪ್ರಮಾಣದ ವಿಷ ಸೇವಿಸಿದರೆ ಮಾತ್ರ ಪರಿಣಾಮ ಬೀರುತ್ತದೆ. ಆದರೆ ಅದು ಸಹ ಸಾವಿಗೆ ಕಾರಣವಾಗುವುದಿಲ್ಲ. ಕುದಿಯುವ ಹಾಲು ವಿಷವನ್ನು ನಾಶಪಡಿಸುತ್ತದೆ. ಹಾವು ಬಿದ್ದ ಹಾಲನ್ನು ಕುಡಿದು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬುದು ಕಟ್ಟುಕಥೆಯಾಗಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪಾಕಿಸ್ತಾನದ ಕ್ವೆಟ್ಟಾದಲ್ಲಿ ವಿಷಕಾರಿ ಹಾವು ಬಿದ್ದಿದ್ದ ಹಾಲು ಕುಡಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕೇವಲ ಸುಳ್ಳು ಪ್ರಚಾರವಾಗಿದೆ. 2015ರಿಂದಲೂ ಈ ಸಂದೇಶ ಬೇರೆ ಬೇರೆ ಪ್ರದೇಶದಲ್ಲಿ ನಡೆದಿದೆ ಎಂಬ ಹೆಸರಿನಲ್ಲಿ ಹರಿದಾಡುತ್ತಿದೆ. ಇದಲ್ಲದೆ, ಹಾವಿನ ವಿಷವು ನೇರವಾಗಿ ರಕ್ತದಲ್ಲಿ ಬೆರೆತಾಗ ಅದು ಸಾವಿಗೆ ಕಾರಣವಾಗುತ್ತದೆ ಎಂದು ಸಂಬಂಧಪಟ್ಟ ತಜ್ಞರು ಹೇಳಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕಿಟಕಿಯಿಂದ KSRTC ಬಸ್ ಹತ್ತಲು ಹೋದ ಮಹಿಳೆಯ ಕೈ ತುಂಡಾಗಿದೆ ಎಂಬುದು ಸುಳ್ಳು! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights