ಅಗ್ನಿ ಅವಘಡ – ಹೊತ್ತಿ ಉರಿದ ಗೂಡ್ಸ್ ಬೋಗಿ – ತಪ್ಪಿದ ಭಾರಿ ಅನಾಹುತ..!

ಕಲಬುರ್ಗಿ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದ ಗೂಡ್ಸ್ ನ ಬೋಗಿಯೊಂದು ಹೊತ್ತಿ ಉರಿದಿದೆ. ಅದರಲ್ಲಿದ್ದ ಆರು ಸಿಬ್ಬಂದಿ ಅದೃಷ್ಟವಶಾತ್ ಪಾರಾಗಿದ್ದಾರೆ. ಬೋಗಿಯಲ್ಲಿದ್ದ ಎರಡು ಸಿಲಿಂಡರ್ ಗಳು ಬ್ಲಾಸ್ಟ್ ಆಗಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಗೂಡ್ಸ್ ವಾಹನದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ, ಬೋಗಿ ಹೊತ್ತಿ ಉರಿದ ಘಟನೆ ಕಲಬುರ್ಗಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಗೂಡ್ಸ್ ವಾಹನದ ಸಿಬ್ಬಂದಿ ಕೂಡುವ ವಿಶೇಷ ಬೋಗಿಯಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ತಡರಾತ್ರಿ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಕಲಬುರ್ಗಿ ರೈಲ್ವೆ ನಿಲ್ದಾಣದ ಪಿಡಿಎ ಎಂಜಿನಿಯರಿಂಗ್ ಗೇಟ್ ಬಳಿ ಗೂಡ್ಸ್ ರೈಲನ್ನು ನಿಲ್ಲಿಸಲಾಗಿತ್ತು. ಘಟನೆ ನಡೆದ ವೇಳೆ ಬೋಗಿಯಲ್ಲಿ 6 ಜನ ಸಿಬ್ಬಂದಿಯಿದ್ದರು.

 

ಬೆಂಕಿ ಹತ್ತಿದ ತಕ್ಷಣವೇ ಬೋಗಿಯಲ್ಲಿ ಮಲಗಿದ್ದ ಸಿಬ್ಬಂದ ಹೊರಗೆ ಓಡಿ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಅಡುಗೆ ಮಾಡಿಕೊಳ್ಳಲು ಬೋಗಿಯಲ್ಲಿ ಎರಡು ಸಿಲಿಂಡರ್ ಗಳನ್ನು ಸಹ ಇಡಲಾಗಿತ್ತು. ಅಗ್ನಿ ದುರಂತದಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿದ್ದೇ ಆದಲ್ಲಿ ಭಾರಿ ದುರಂತವೇ ಸಂಭವಿಸುತ್ತಿತ್ತು. ಪಕ್ಕದಲ್ಲಿಯೇ ಕಾಲೇಜು, ಜನವಸತಿ ಪ್ರದೇಶಗಳು ಇದ್ದುದ್ದರಿಂದ ಹಾನಿಯಾಗೋ ಆತಂಕವಿತ್ತು. ಬ್ಲಾಸ್ಟ್ ಆಗದೇ ಇದ್ದುದರಿಂದ ಭಾರಿ ದುರಂತ ತಪ್ಪಿದಂತಾಗಿದೆ. ಗೂಡ್ಸ್ ಬೋಗಿಯಲ್ಲಿದ್ದ ಕೆಲ ವಸ್ತುಗಳು ಸುಟ್ಟು ಕರಲಕಲಾಗಿದ್ದು, ಬೋಗಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ಅಗ್ನಿ ಆಕಸ್ಮಿಕದ ವೇಳೆ ಗೂಡ್ಸ್ ವಾಹನ ಚಲನೆಯಲ್ಲಿರಲಿಲ್ಲದಿದ್ದುದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ರೈಲ್ವೆ ಇಲಾಖೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ವಾಡಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights