FACT CHECK | ಮಹಾ ಕುಂಭಮೇಳಕ್ಕೆ ಬಂದಿದ್ರಾ ಜಾನ್ ಸೀನಾ?
ಅಮೆರಿಕದ ಕುಸ್ತಿಪಟುಗಳಾದ ರೋಮನ್ ರೇನ್ಸ್, ಬ್ರಾಕ್ ಲೆಸ್ನರ್, ಜಾನ್ ಸೀನಾ ಮತ್ತು ಟೆಸ್ಲಾ ಮೋಟಾರ್ಸ್ ಸಿಇಒ ಎಲೋನ್ ಮಸ್ಕ್ ಅವರು ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸಟ್‌ಅನ್ನು ಹಂಚಿಕೊಂಡಿದ್ದಾರೆ.

ಜಾನ್ ಸೀನಾ ಸೇರಿದಂತೆ ಕೆಲವು ರಸ್ಲರ್‌ಗಳು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳಕ್ಕೆ ಬಾಗವಹಿಸಿ ಸ್ನಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಈ ವಾದ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಸ್ಕ್, ರೇನ್ಸ್, ಲೆಸ್ನರ್ ಮತ್ತು ಸೀನಾ ಅವರ ಅಧಿಕೃತ ಖಾತೆಗಳನ್ನು ಲಭ್ಯವಾಗಿವೆ, ಅವರು ಕುಂಭಮೇಳಕ್ಕೆ ಭೇಟಿ ನೀಡಿದ ಯಾವುದೇ ಪೋಟೋಗಳು ಲಭ್ಯವಾಗಿಲ. ಒಂದು ವೇಳೆ ಈ ಸೆಲೆಬ್ರಿಟಿಗಳು ಭಾರತಕ್ಕೆ ಭೇಟಿ ನೀಡಿದ್ದರೆ ಖಂಡಿತವಾಗಿಯೂ ಸುದ್ದಿಯಾಗುತ್ತಿತ್ತು. ಆದ್ದರಿಂದ ಎಲ್ಲಾ ಪೋಟೋಗಳು ನಕಲಿಯಾಗಿವೆ.

AI (Artificial intelligence) ಪತ್ತೆ ಸಾಧನಗಳಾದ, ಹೈವ್ ಮಾಡರೇಶನ್ ಮತ್ತು ಸೈಟ್‌ಇಂಜೈನ್ ಮೂಲಕ ಹುಡುಕಿದಾಗ, ಎಲ್ಲಾ ವೈರಲ್ ಪೋಟೋಗಳನ್ನು AIನಿಂದ ರಚಿಸಲಾಗಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ. ಹಾಗಾಗಿ ವೈರಲ್ ಪೋಟೋಗಳು ನೈಜವಲ್ಲ.ಸೀನಾ ಮತ್ತು ಲೆಸ್ನರ್ ಅವರ ಫೋಟೋಗಳು 99.9% AIನಿಂದ ರಚಿತವಾಗಿವೆ ಎಂದು ಸೈಟ್‌ಎಂಜಿನ್ ವರದಿಯನ್ನು ತಯಾರಿಸಿದೆ.

ಲೆಸ್ನರ್ ಅವರನ್ನೊಳಗೊಂಡ ಫೋಟೋಗಳನ್ನು ಎರಡೂ ಸಾಧನಗಳಲ್ಲಿ ರನ್ ಮಾಡಿದಾಗ 97 ರಿಂದ 99% AI ನಿಂದ ರಚಿಸಲ್ಪಟ್ಟಿವೆ ಎಂದು ಗುರುತಿಸಲಾಗಿದೆ. ಇತರ ಫೋಟೋಗಳನ್ನು ಮಿಡ್‌ಜರ್ನಿಯಲ್ಲಿ ಜನ್ ರೇಟಿಂಗ್ ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಮೇರಿಕದ WWE ಕುಸ್ತಿಪಟುಗಳಾದ ಜಾನ್ ಸೆನಾ, ರೋಮನ್ ರೇನ್ಸ್, ಬ್ರಾಕ್ ಲೆಸ್ನರ್ ಮತ್ತು ಎಲೋನ್ ಮಸ್ಕ್ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು AIನಿಂದ ರಚಿಸಲಾದ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹಾಆಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಂಜಾಬ್‌ನಲ್ಲಿ ನಡೆದ ಹತ್ಯೆಯನ್ನು ಮುಸ್ಲಿಂ ದ್ವೇಷದ ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೆ

