ರಾಜ್ಯದಲ್ಲಿ ಮತ್ತೆ 14 ದಿನ ಲಾಕ್ಡೌನ್ ವಿಸ್ತರಣೆ : ಜೂನ್ 7ರವರೆಗೆ ಕಠಿಣ ನಿರ್ಬಂಧ ಜಾರಿ!

ಕೊರೊನಾ ಅಬ್ಬರ ತಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಮತ್ತೆ 14 ದಿನಗಳ ಕಾಲ ಲಾಕ್ ಡೌನ್ ವಿಸ್ತರಿಸಿದ್ದಾರೆ.

ಸಿಎಂ ನಿವಾಸ ಕೃಷ್ಣದಲ್ಲಿ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೇ. 26ಕ್ಕೆ ಕೊನೆಗೊಳ್ಳಬೇಕಾಗಿದ್ದ ಲಾಕ್ಡೌನ್ ಅನ್ನೂ ಇನ್ನೂ 14 ದಿನಗಳ ಕಾಲ ಮುಂದುವರೆಸಲಾಗುತ್ತದೆ. ಜೂನ್ 7ರವರೆಗೆ ಪ್ರಸ್ತತ ಆದೇಶ ಜಾರಿಯಲ್ಲಿರುತ್ತದೆ. ಲಾಕ್ಡೌನ್ ನಿರ್ಬಂಧಗಳಲ್ಲೂ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆ ನಿರ್ಬಂಧಗಳು ಮುಂದುರೆಯುತ್ತವೆ ಎಂದು ಸಿಎಂ ಹೇಳಿದ್ದಾರೆ.

ಇನ್ನೂ ಬೆಳಿಗ್ಗೆ 6 ರಿಂದ ಬೆಳಿಗ್ಗೆ 9.45ರವರೆಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ ಬೆಳಿಗ್ಗೆ 10 ಗಂಟೆಯ ಬಳಿಕವೂ ಜನ ೋಡಾಡುತ್ತಿರುವುದು ಗಮನಕ್ಕೆ ಬಂದಿದೆ. ಇನ್ಮುಂದೆ ಅನಗತ್ಯೆ ಓಡಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚೀಸಲಾಗಿದೆ ಎಂದಿದ್ದಾರೆ.

ಇನ್ನೂ ಕೊರೊನಾ ತಡೆಗೆ ಜನ ಮಾಸ್ಕ್ ಧರಿಸಬೇಕು, ಸ್ಯಾನಿಟೈಜರ್ ಬಳಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights