Categories
Breaking News District Political State

ಸಿಎಂ ಮತ್ತು ಸಂತೋಶ್ ಜಗಳ್ ಬಂದಿ – ರಾಜ್ಯಕ್ಕೆ ತಗುಲಿದ ಕುಷ್ಠರೋಗ – ಮಾನ್ಪಡೆ ಕಿಡಿ

ಬಿಜೆಪಿ ನಡುವಿನ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಸಿಎಂ ಯಡಿಯೂರಪ್ಪ ಮತ್ತು ಸಂತೋಶ್ ಜಗಳ್ ಬಂದಿಯಿಂದ ರಾಜ್ಯದ ಅಭಿವೃದ್ಧಿಗೆ ಕುಷ್ಟರೋಗ ತಗುಲಿದೆ. ಈಗಲಾದ್ರೂ ಅಭಿವೃದ್ಧಿ ಮಾಡಿ, ರೈತರ ಹಿತ ಕಾಪಾಡಿ ಅಂತ ರೈತ ಮುಖಂಡ ಮಾರುತಿ ಮಾನ್ಪಡೆ ಆಗ್ರಹ.

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂತೋಶ್ ಜಗಳ್ ಬಂದಿಯಿಂದಾಗಿ ರಾಜ್ಯಕ್ಕೆ ಕುಷ್ಠರೋಗ ತಗಲುವಂತೆ ಮಾಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪಗೆ ಮುಕ್ತವಾಗಿ ಕೆಲಸ ಮಾಡಲು ಬಿಡ್ತಿಲ್ಲ. ಯಡಿಯೂರಪ್ಪ ಮತ್ತು ಸಂತೋಶ್ ಗುಂಪುಗಳ ನಡುವೆ ಕಿತ್ತಾಟ ನಡೆದೇ ಇದ್ದು, ರಾಜ್ಯದ ಅಭಿವೃದ್ಧಿ ಕುಷ್ಠರೋಗ ತಗುಲಿದ ಸ್ಥಿತಿಯಲ್ಲಿದೆ ಎಂದು ಕಿಡಿಕಾರಿದರು.

ಹೈಕಮಾಂಡ್ ಸಹ ಯಡಿಯೂರಪ್ಪ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಬಿಜೆಪಿ ಹಿರಿಯ ನಾಯಕರೂ ಯಡಿಯೂರಪ್ಪಗೆ ತೊಂದರೆ ಕೊಡ್ತಿದಾರೆ. ಮತ್ತೊಂದೆಡೆ ಸಂತೋಷ್ ಸರ್ಕಾರ ನಡೆಯಲು ಬಿಡ್ತಿಲ್ಲ. ಇಬ್ಬರ ಜನಗಳದ ನಡುವೆ ಕೂಲಿಕಾರರು, ಜನಸಾಮಾನ್ಯರು ಬಡವಾಗುವಂತಾಗಿದೆ. ರೈತರಿಗೂ ಪದೇ ಪದೇ ಅನ್ಯಾಯವಾಗುತ್ತಿದೆ. ಕೂಡಲೇ ಜಗಳವಾಡೋದನ್ನು ಬಿಟ್ಟು ಸರಿಯಾದ ಆಡಳಿತ ಕೊಡಿ ಎಂದು ಮಾನ್ಪಡೆ ಆಗ್ರಹಿಸಿದ್ದಾರೆ.

ತೊಗರಿ ಖರೀದಿ ಆರಂಭಿಸದಿರೋದಕ್ಕೆ ಕಿಡಿ….
ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ತೊಗರಿ ಖರೀದಿ ಪ್ರಕ್ರಿಯೆ ಆರಂಭಿಸುತ್ತಿಲ್ಲ ಎಂದು ಇದೇ ವೇಳೆ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ. ರೈತ ಸಂಘಟನೆಗಳ ಪರ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ತೊಗರಿ ದರ ಕುಸಿಯುತ್ತಿದ್ದರೂ ರಾಜ್ಯ ಸರ್ಕಾರದಿಂದ ಬೇಜವಾಬ್ದಾರಿ ವರ್ತನೆ ಮಾಡುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ತೊಗರಿ ಖರೀದಿ ವಿಳಂಬ ಮಾಡುತ್ತಿದೆ. ರೈತರು ತಮ್ಮ ಬಳಿಯಿದ್ದ ತೊಗರಿ ಮಾರಿದ ಮೇಲೆ ಸರ್ಕಾರ ತೊಗರಿ ಖರೀದಿಸಿ ಪ್ರಕ್ರಿಯೆ ಆರಂಭಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.

ಪ್ರೋತ್ಸಾಹ ಧನ ವರ್ಷದಿಂದ ವರ್ಷಕ್ಕೆ ಇಳಿಕೆ ಮಾಡಲಾಗುತ್ತಿದೆ. ಇದರಿಂದ ರೈತ ಸಮುದಾಯ ಕಂಗಾಲಾಗಿದೆ. ಕೂಡಲೇ ಪ್ರೋತ್ಸಾಹ ಧನ ಹೆಚ್ಚಿಸಬೇಕು. ಜೊತೆಗೆ ಪ್ರತಿ ರೈತನಿಗೆ 10 ಕ್ವಿಂಟಲ್ ತೊಗರಿ ಖರೀದಿ ಮಿತಿಯನ್ನು ತೆಗೆಯಬೇಕು. ಪ್ರತಿ ರೈತನಿಂದ ಕನಿಷ್ಠ 25 ಕ್ವಿಂಟಲ್ ಖರೀದಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಎಂ.ಪಿ. ಕಛೇರಿ ಎದುರು ಅನಿರ್ಧಿಷ್ಟ ಧರಣಿ….
ತೊಗರಿ ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಳೆಯಿಂದ(ಜನವರಿ 16) ಕಲಬುರ್ಗಿ ಸಂಸದ ಉಮೇಶ್ ಜಾಧವ್ ಕಛೇರಿ ಎದುರು ಹೋರಾಟ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ. ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರಾಜ್ಯ ರೈತ ಸಂಘ, ರೈತ, ಕೃಷಿ ಕೂಲಿಕಾರರ ಸಂಘ ಮತ್ತಿತರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಾಳೆಯಿಂದ ಅನಿರ್ಧಿಷ್ಟ ಧರಣಿ ಆರಂಭಿಸಲಾಗುವುದು. ಈ ಮುಂಚೆ ಸಂಸದರ ನಿವಾಸದ ಎದುರು ಪ್ರತಿಭಟನೆ ನಡೆಸಿದಾಗ, ಉದ್ದೇಶಪೂರ್ವಕವಾಗಿಯೇ ಉಮೇಶ್ ಜಾಧವ್ ಹೋರಾಟಗಾರರನ್ನು ಭೇಟಿ ಮಾಡಿರಲಿಲ್ಲ. ಈಗ ಮಾತ್ರ ಬೇಡಿಕೆ ಈಡೇರುವವರೆಗೂ ಹೋರಾಟ ಹಿಂಪಡೆಯೋದಿಲ್ಲ ಎಂದು ರೈತ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Categories
Breaking News District Political State

ರಾಜ್ಯದಲ್ಲಿನ ಎಲ್ಲ ಬೆಳವಣಿಗೆಗಳಿಗೂ ಸಿಎಂ, ಗೃಹ ಸಚಿವರೇ ಜವಾಬ್ದಾರಿ ಹೊರಬೇಕು: ಡಿಕೆಶಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ಆಗುತ್ತಿರುವ ಎಲ್ಲ ಪರಿಣಾಮಗಳಿಗೂ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೇ ಜವಾಬ್ದಾರಿ ಹೊರಬೇಕು. ಪ್ರತಿಭಟನಾಕಾರರ ಧ್ವನಿ ಹತ್ತಿಕ್ಕಲು ಸರ್ಕಾರ ಮುಂದಾಗಿದ್ದು, ನಾವು ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹರಿಹಾಯ್ದಿದ್ದಾರೆ.

ನಿನ್ನೆ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಪರಿಣಾಮ ಹಾಗೂ ಮಾಧ್ಯಮಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಧ್ಯಾಹ್ನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್, ‘ಈ ಕಾಯ್ದೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವರು ದೇಶದ ಐಕ್ಯತೆ, ಬಾಂದವ್ಯವನ್ನು ಹಾಳುಮಾಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ವಿನಾಕಾರಣ 144 ಸೆಕ್ಷನ್ ಜಾರಿ ಮಾಡಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪ್ರಯತ್ನಿಸಿದ್ದೀರಿ. ಬಿಜೆಪಿ ನಾಯಕರು ಪ್ರಚೋದನಾಕಾರಿ ಹೇಳಿಕೆ ನೀಡಿ ಪ್ರತಿಭಟನೆ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು…

‘ದೇಶದಲ್ಲಿ ಹಾಗೂ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ಮಾಧ್ಯಮಗಳು ತೋರಿಸುತ್ತಿವೆ. ನಿನ್ನೆ ಮಂಗಳೂರು ಸೇರಿದಂತೆ ಬೇರೆಬೇರೆ ಕಡೆ ಏನಾಗುತ್ತಿದೆ ಎಂಬುದನ್ನು ನೀವೇ ವಿವರವಾಗಿ ತೋರಿಸುತ್ತಿದ್ದೀರಿ. ನಾವು ಇದನ್ನು ನಂಬಬೇಕಾ? ಅಥವಾ ಬಿಜೆಪಿ ನಾಯಕರ ವಾದ, ಮಂಡನೆ, ಹೇಳಿಕೆಗಳನ್ನು ನಂಬಬೇಕಾ ಎಂಬುದನ್ನು ನೀವೇ ವಿಶ್ಲೇಷಣೆ ಮಾಡುವುದು ಸೂಕ್ತ. ಗೌರವಾನ್ವಿತ ಮುಖ್ಯಮಂತ್ರಿ ಯಡಿಯೂರಪ್ಪನವರು ಬಹಳ ಮಾರ್ಮಿಕವಾಗಿ ತಮ್ಮ ಪಕ್ಷದ ನಾಯಕರುಗಳಿಗೆ ನೀವ್ಯಾರು ಹೇಳಿಕೆಗಳನ್ನು ನೀಡಬಾರದು ಅಂತಾ ಸೂಚನೆ ನೀಡಿದ್ದಾರೆ. ಅದರ ಅರ್ಥ ಈ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ನಡೆಯುತ್ತಿರುವ ಎಲ್ಲ ಘಟನೆಗಳಿಗೆ ಪ್ರಚೋದನೆ ಕೊಟ್ಟಿದ್ದು ಬಿಜೆಪಿ ನಾಯಕರುಗಳೇ ಎಂಬುದನ್ನು ಯಡಿಯೂರಪ್ಪನವರೇ ನಮ್ರತೆಯಿಂದ ಒಪ್ಪಿಕೊಂಡಿದ್ದಾರೆ.

ಅಲ್ಲಾ ಸ್ವಾಮಿ, ನೀವು 45 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೀರಿ. ರಾಜ್ಯದಲ್ಲಿ ಏನಾಗಿದೆ ಅಂತಾ ರಾಜ್ಯದ ಉದ್ದಗಲಕ್ಕೂ 144 ಸೆಕ್ಷನ್ ಜಾರಿ ಮಾಡಿದ್ದೀರಿ? ಯಾರು ಕೂಡ ತಮ್ಮ ಧ್ವನಿ ಎತ್ತಬಾರದಾ? ಯಾರೂ ಸಾಮಾಜಿಕವಾಗಿ ತಮ್ಮ ಚಿಂತನೆ ಚರ್ಚೆ ಮಾಡಬಾರದಾ? ಸಾರ್ವಜನಿಕರು ಅಧಿಕಾರವನ್ನು ಬಯಸದೇ, ತಮ್ಮ ಮನಸಲ್ಲಿ ಆಗುತ್ತಿರುವ ದುಗುಡವನ್ನು ಹೇಳಿಕೊಳ್ಳುವುದಕ್ಕೆ ಅವಕಾಶವಿಲ್ಲವೇ? ಈ ಧ್ವನಿಗಳನ್ನು ನಿಲ್ಲಿಸಲು ನೀವು ಏನು ಪ್ರಯತ್ನ ಮಾಡುತ್ತಿದ್ದೀರಿ, ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ. ಬ್ರಿಟೀಷರ ಕಾಲದಲ್ಲಾದರೂ ಅಷ್ಟೋ ಇಷ್ಟು ಸ್ವಾತಂತ್ರ್ಯ ಇತ್ತು. ನಿಮ್ಮ ಆಡಳಿತದಲ್ಲಿ ಅದೂ ಇಲ್ಲವಲ್ಲಾ. ಸಾರ್ವಜನಿಕರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ನೀವು ಎಲ್ಲ ಪ್ರತ್ನ ಮಾಡುತ್ತಿದ್ದೀರಿ. ಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ ರಾಷ್ಟ್ರದಲ್ಲಿ ಪ್ರತಿಯೊಬ್ಬರು ತಮ್ಮ ಧ್ವನಿ ಎತ್ತಲು ಅವಕಾಶವಿದೆ. ಅದಕ್ಕೆ ಬೆಂಬಲವಾಗಿ ನಾವು ನಿಲ್ಲುತ್ತೇವೆ. ಅದನ್ನು ಕಸಿಯಲು ನಿಮ್ಮಿಂದ ಸಾಧ್ಯವಿಲ್ಲಾ ಎಂಬುದನ್ನು ಈ ಸಂದರ್ಭದಲ್ಲಿ ಹೇಳಲು ಬಸುತ್ತೇನೆ.

ಯುವಕರು, ಸಾರ್ವಜನಿಕರು ಸರ್ಕಾರಕ್ಕೆ ತಮ್ಮ ಧ್ವನಿಯನ್ನು ಮುಟ್ಟಿಸಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಆ ಧ್ವನಿಯನ್ನು ಮುಚ್ಚಲು ಪ್ರಯತ್ನಿಸುತ್ತಿದ್ದೀರಿ. ಈ ಪ್ರಕರಣದಲ್ಲಿ ನಾನು ಯಾವುದೇ ಅಧಿಕಾರಿಗಳನ್ನು ದೂರುವುದಿಲ್ಲ. ಅಧಿಕಾರಿಗಳು ಏನು ಮಾಡುತ್ತಾರೆ? ಸರ್ಕಾರ, ಸಚಿವರು ಏನು ಹೇಳುತ್ತಾರೋ ಅದನ್ನು ಪಾಲಿಸುತ್ತಾರೆ. ಹೀಗಾಗಿ ನಾನು ಯಾವುದೇ ಪೊಲೀಸರನ್ನು ದೂರುವುದಿಲ್ಲ, ರಾಜ್ಯದಲ್ಲಿ ಏನೇ ಅಹಿತಕರ ಘಟನೆಗಳು ನಡೆದಿದ್ದರೆ ಅದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹ ಸಚಿವರೇ ಜವಾಬ್ದಾರಿ.

ನಾವು ಅಧಿಕಾರದಲ್ಲಿದ್ದಾಗಲೂ ಈ ದೇಶದ ಯುವಕರು, ನಾಗರೀಕರು ನಮ್ಮ ವಿರುದ್ಧವೂ ಧ್ವನಿ ಎತ್ತಿದ್ದಾರೆ. ಪಾಪ ರಾಮಚಂದ್ರ ಗುಹಾ ಅವರು ಏನು ಮಾಡಿದದ್ರು. ಅವರು ಕೂಡ ನಮ್ಮ ವಿರುದ್ಧ ಮಾತನಾಡಿದ್ದರು. ನಾವು ಅದನ್ನು ಸಹಿಸಿಕೊಂಡಿದ್ದೇವೆ. ನೀವು ಅದನ್ನು ಸಹಿಸಿಕೊಳ್ಳಿ. ಅಧಿಕಾರದಲ್ಲಿರುವವರು ಇದನ್ನೆಲ್ಲ ಸಹಿಸಿಕೊಳ್ಳಲು ಸಿದ್ಧರಿರಬೇಕು. ಪ್ರತಿಭಟನೆ ಮಾಡುತ್ತಿರುವ ಆ ಯುವಕರನ್ನು ಯಾಕೆ ಹೊಡೆಯುತ್ತಿದ್ದೀರಿ, ಅವರಿಗೆ ಅನಿಸಿದ್ದನ್ನು ಅವರು ಹೇಳಬಾರದೇ?

ಜನರು ಶಾಂತಿಯುತವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದರು. ಅವರು 10 ನಿಮಿಷವೋ, 1 ಗಂಟೆಯೋ, ಮೂರು ಗಂಟೆಯೋ ತಮ್ಮ ಅಭಿಪ್ರಾಯವನ್ನು ಹೇಳಿ ನಂತರ ಅವರು ವಾಪಸ್ ಹೋಗುತ್ತಿದ್ದರು. ವಿನಾಕಾರಣ ಸೆಕ್ಷನ್ 144 ಜಾರಿ ಮಾಡಿದ್ದಲ್ಲದೇ, ಪ್ರತಿಭಟನಾಕಾರರನ್ನು ಪೊಲೀಸರ ಮೂಲಕ ಪ್ರಚೋದಿಸಿ, ಲಾಠಿ ಪ್ರಹಾರ ಮಾಡಿಸಿ, ಅವರನ್ನು ಸಾಯಿಸಿದ್ದೀರಿ. ಇವತ್ತು ಕೇಸ್ ದಾಖಲಾಗಬೇಕಾದರೆ ಅದು ಮುಖ್ಯಮಂತ್ರಿಗಳು, ಗೃಹ ಸಚಿವರ ಮೇಲೆ ದಾಖಲಾಗಬೇಕು. ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ನಿಮ್ಮ ನಾಯಕರ ವಿರುದ್ಧ ಪ್ರಕರಣ ದಾಖಲಾಗಬೇಕೇ ಹೊರತು ಪೊಲೀಸ್ ಅಧಿಕಾರಿಗಳ ಮೇಲಲ್ಲ.

ನಿಮಗೆ 300 ಸಂಸದರನ್ನು ಆಯ್ಕೆ ಕಳುಹಿಸಲಾಗಿದೆ. ಮಿತ್ರ ಪಕ್ಷದವರೂ ಸೇರಿದರೆ 400 ದಾಟುತ್ತದೆ. ಈಗ ಯಾವುದೇ ಚುನಾವಣೆಯೂ ಇಲ್ಲ. ಇಂತಹ ಸಂದರ್ಭದಲ್ಲೂ ನೀವು ಯಾಕೆ ಈ ರೀತಿ ಸಮಾಜದಲ್ಲಿ ಸಮಸ್ಯೆ ಸೃಷ್ಟಿಸುತ್ತಿದ್ದೀರಿ? ನಾನು ಶಾಸಕನಾಗಿದ್ದೇನೆ, ಮಂತ್ರಿಯಾಗಿದ್ದೆ, ನನ್ನ ಬಳಿ ಸ್ವಲ್ಪ ಆಸ್ತಿ ಇದೆ. ನಾನು ಬೇಕಾದರೆ ದಾಖಲೆ ತೋರಿಸುತ್ತೇನೆ. ಬಡವರು, ಹಳ್ಳಿಗರಿಗೆ ದಾಖಲೆ ತೋರಿಸು ಎಂದರೆ ಅವರು ಎಲ್ಲಿಂದಾ ತೋರಿಸುತ್ತಾರೆ? ಬೆಂಗಳೂರಿನಲ್ಲೇ ಲಕ್ಷಾಂತರ ಜನ ಹಳ್ಳಿಗಳು, ಹೊರಗಿನಿಂದ ಬಂದು ಕೆಲಸ ಮಾಡಿ ನೆಲೆಸಿದ್ದಾರೆ. ಇವರಿಗೆ ದಾಖಲೆ ತೋರಿಸು ಎಂದರೆ ಅವರು ಎಲ್ಲಿಂದಾ ದಾಖಲೆ ತೋರಿಸುತ್ತಾರೆ?

ಯುವಕರಿಗೆ ಶಾಲೆ ಸರ್ಟಿಫಿಕೇಟ್ ತೆಗೆದುಕೊಂಡು ಬಾ ಎಂದರೆ ತಂದು ತೋರಿಸುತ್ತಾರೆ. ಅದನ್ನು ಬಿಟ್ಟು ನಿಮ್ಮ ತಂದೆಯ ದಾಖಲೆ ತೆಗೆದುಕೊಂಡು ಬಾ ಎಂದರೆ ಅವರು ಎಲ್ಲಿಂದಾ ತರ್ತಾರೆ? ಇದು ಹೇಗೆ ಸಾಧ್ಯ? ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವನ್ನು ಮುಗಿಸಲು, ಬದಲಾವಣೆ ಮಾಡಲು ನಿಮ್ಮ ಚಿಂತನೆ ಇದೆ. ಅಂದಿನ ಕಾಲದಲ್ಲಿ ಅಂಬೇಡ್ಕರ್, ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು ಅವರ ನಾಯಕತ್ವದಲ್ಲಿ ಸ್ವಾತಂತ್ರ್ಯ ತಂದುಕೊಟ್ಟ ನಾಯಕರು ದೇಶ ಯಾವ ರೀತಿ ಸಾಗಬೇಕು ಎಂದು ಹಾಕಿ ಕೊಟ್ಟ ಸಂವಿಧಾನ ಅಡಿಪಾಯ ಇದ್ದಂತೆ. ಇಂದು ಆ ಅಡಿಪಾಯವನ್ನೇ ನೀವು ಅಲುಗಾಡಿಸುತ್ತಿದ್ದೀರಿ. ನೀವು ತಂದಿರುವ ಮಸೂದೆಗಳು ಅಸಂವಿಧಾನಿಕ. ಇದು ಸಂವಿಧಾನ ಬಾಹೀರ, ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ, ಸಮಾನತೆಯ ಕೊರತೆಯಿಂದ ಕೂಡಿದೆ. ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಕಾಯ್ದೆ ತರುವ ಮೂಲಕ ಇಡೀ ದೇಶ ಹೊತ್ತಿಕೊಂಡು ಉರಿಯುವಂತೆ ಮಾಡಿದೆ.

ನೀವು ಬಡವರಿಗೆ ಅನ್ನ ಕೊಡಿ, ಉದ್ಯೋಗ ಕೊಡಿ, ಅಂಗಡಿಗಳು, ಕಾರ್ಖಾನೆಗಳು ಮುಚ್ಚುತ್ತಿವೆ. ಕೈಗಾರಿಕೆ ಸಂಸ್ಥೆಗಳಲ್ಲಿ ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸಿ. ಅವರ ಬದುಕನ್ನು ನೀವು ಕಟ್ಟುಕೊಡಿ. ಅದನ್ನು ಬಿಟ್ಟು ದೇಶದಲ್ಲಿ ಅಶಾಂತಿ ಮೂಡಿಸುವಂತಹ ಕೆಲಸಕ್ಕೆ ಮುಂದಾಗುತ್ತಿದ್ದೀರ. ಇದು ಕೇವಲ ಅಲ್ಪಸಂಖ್ಯಾತರ ವಿಷಯವಲ್ಲ. ನೀವು ತಂದಿರುವ ಕಾಯ್ದೆ ಇಡೀ ದೇಶದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿ, ಬದುಕನ್ನು ಹಾಳು ಮಾಡುತ್ತಿದೆ. ನಾನು ನಮ್ಮ ತಂದೆ ತಾಯಿಗಳು ಅಜ್ಜ ಅಜ್ಜಿಯರು ಈ ದೇಶದಲ್ಲಿ ಹುಟ್ಟಿದ್ದೇವೆ ಎಂದು ನಿಮಗೆ ಪ್ರಮಾಣತ್ರ ಕೊಡಬೇಕಾ? ಕೊಡದಿದ್ರೆ ಜೈಲಿಗೆ ಹಾಕ್ತೀರಾ? ಹಾಕಿ, ಎಷ್ಟು ಜನರನ್ನು ಹಾಕ್ತೀರಾ?

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಚರಿತ್ರೆ ಈ ಪಕ್ಷಕ್ಕೆ ಇದೆ. ಈ ದೇಶವನ್ನು ಅಭಿವೃದ್ಧಿಶೀಲವನ್ನಾಗಿ ಮಾಡಲು ಒಂದು ಅಡಿಪಾಯ ಹಾಕಿಕೊಟ್ಟಿದ್ದೇವೆ. ಈ ದೇಶದಲ್ಲಿ ಎಲ್ಲ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಅಂತಾ ನಾವು ಹೊರಟಿದ್ದೇವೆ. ಇಡೀ ಪ್ರಪಂಚ ನೋಡುತ್ತಿದೆ. ಇ ಭಾರತ ಇಷ್ಟು ದಿನ ಒಗ್ಗಟ್ಟಾಗಿ ಬದುಕಿದೆ. ಆ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ. ಈ ಸಂದರ್ಭದಲ್ಲಿ ನೀವು ಇಂಟರ್ನೆಟ್ ಸೇವೆ ತೆಗೆಯುತ್ತಿದ್ದೀರಾ? ಇವತ್ತು ಇಡೀ ಪ್ರಪಂಚ, ಕರ್ನಾಟಕ ಮತ್ತು ದೇಶವನ್ನು ನೋಡುತ್ತಿದೆ. ಇದಕ್ಕೆ ಕಾರಣರಾಗಿರುವ ಪ್ರಧಾನ ಮಂರಿಗಳು, ಗೃಹ ಸಚಿವರು, ರಾಜ್ಯದ ಮುಖ್ಯಮಂತ್ರಿಗಳನ್ನು ಖಂಡಿಸುತ್ತೇನೆ.

ಬ್ರಿಟೀಷರನ್ನು ಹೋಡಿಸಲು ಎಷ್ಟು ಜನ ತ್ಯಾಗ ಮಾಡಿದ್ದಾರೆ. ಇವತ್ತು ಅದೇ ರೀತಿ ನಿಮ್ಮನ್ನು ಹೋಡಿಸಕ್ಕೆ ಈ ಜನ ದಂಗೆ ಆರಂಭಿಸಿದ್ದಾರೆ. ಶುಭ ಮುಹೂರ್ತ ಪ್ರಾರಂಭವಾಗಿದೆ ಎಂಬುದನ್ನು ಯಡಿಯರಪ್ಪನವರೆ ಮರೆಯಬೇಡಿ. ನಿಮ್ಮ ಅಂತ್ಯಕ್ಕೆ ಇದು ಪ್ರಾರಂಭ. ನಿಮ್ಮ ಮಕ್ಕಳಿಗೆ ನೀವು ಉದ್ಯೋಗ, ಅನ್ನ, ಶಿಕ್ಷಣ ನೀಡಲು ಆಗುತ್ತಿಲ್ಲ, ಕಾಪಾಡಲು ಆಗುತ್ತಿಲ್ಲ. ಅಂತಹುದರಲ್ಲಿ ನೆರೆ ದೇಶದಲ್ಲಿರುವವರನ್ನು ಅಲ್ಲಿಂದ ಹೋಡಿಸಿ ಕರೆದುಕೊಂಡು ಬಂದು ಇಲ್ಲಿ ಯಾವ ರೀತಿ ಸಾಕುತ್ತೀರಾ? ಇದು ಯಾವ ರೀತಿಯ ಸಿದ್ಧಾಂತ? ಇದನ್ನು ಯಾಕೆ ಹೇರುತ್ತಿದ್ದೀರಿ?

ಧರ್ಮ ಆಚರಣೆ ನಮ್ಮ ಸ್ವಾತಂತ್ರ್ಯ, ನಮ್ಮ ಹಕ್ಕು. ಯಾವ ದೇವರನ್ನು ಪೂಜಿಸಬೇಕು ಎಂಬುದು ನಮ್ಮ ಆಯ್ಕೆ, ನಿಮ್ಮದಲ್ಲ. ಈ ವಿಚಾರದಲ್ಲಿ ನೀವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಯಾವ ಧರ್ಮದಲ್ಲಿ ಹುಟ್ಟಬೇಕು, ಯಾವ ಜಾತಿಯಲ್ಲಿ ಹುಟ್ಟಬೇಕು ಅಂತಾ ಯಾರೂ ಅರ್ಜಿ ಹಾಕೊಂಡು ಹುಟ್ಟುವುದಿಲ್ಲ. ಹೀಗಾಗಿ ಇವತ್ತು ದೇಶದಲ್ಲಿ ಏನೇನು ಆಗುತ್ತಿದೆಯೋ ಅದಕ್ಕೆಲ್ಲಾ ನೀವೇ ಕಾರಣ, ನೀವೇ ನೈತಿಕ ಹೊಣೆ ಹೊರಬೇಕು. ದೇಶದಲ್ಲಿ ಸುಳ್ಳಿನ ಕಂತೆ ಸೃಷ್ಟಿಸುವ ನಿಮ್ಮ ಸಾಮಾಜಿಕ ಜಾಲತಾಣದ ಕಾರ್ಖಾನೆ ಇದೆಯಲ್ಲಾ ಅದನ್ನು ಮೊದಲು ಮುಚ್ಚಿಸಿ. ಇದು ದೇಶವನ್ನು ಕೊಲ್ಲುತ್ತಿದೆ. ದೇಶದಲ್ಲಿ ಜನ ಕೆಲಸ ಇಲ್ಲದೇ ಬೀದಿಗೆ ಬೀಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆರ್ಥಿಕ ವ್ಯವಸ್ಥೆಯನ್ನು ನೀವು ಸರಿ ಮಾಡಿ.

ಯುಟಿ ಖಾದರ್ ಅವರು ಯಾವುದೇ ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ. ಯಡಿಯೂರಪ್ಪನವರೆ ತಮ್ಮ ನಾಯಕರಿಗೆ ಹೇಳಿಕೆ ನೀಡಬೇಡಿ ಎಂದು ಹೇಳುವ ಮೂಲಕ ತಮ್ಮ ಪಕ್ಷದವರೇ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆ ಭಾಗದಲ್ಲಿ ನಮ್ಮ ಪಕ್ಷದಲ್ಲಿ ಕೇವಲ ಖಾದರ್ ಮಾತ್ರ ಶಾಸಕನಾಗಿದ್ದಾರೆ. ಹೀಗಾಗಿ ಅವರ ಮೇಲೆ ಆರೋಪ ಮಾಡಬೇಡಿ. ನೀವು, ನಿಮ್ಮ ನಾಯಕರು, ನಿಮ್ಮ ಸಚಿವರು ಯಾವ ರೀತಿಯ ಹೇಳಿಕೆ ಕೊಟ್ಟಿದ್ದಾರೆ ಎಂಬುದನ್ನು ನೋಡಿ. ರಾಜ್ಯದಲ್ಲಿ ಏನಾಗಿದೆ ಎಂದು 144 ಸೆಕ್ಷನ್ ಹಾಕಿದ್ದೀರಿ? ನೀವೇನು ತುರ್ತುಪರಿಸ್ಥಿತಿ ತರಲು ಹೊರಟಿದ್ದೀರಾ?

Categories
Breaking News International Political State

ರಾಜ್ಯದಲ್ಲಿ ಸರ್ಕಾರವನ್ನು ಅಸ್ಥರಿಗೊಳಿಸುವ ಬಿಜೆಪಿ ಪ್ರಯತ್ನ ನಿರಂತರ ಹಗಲುಗನಸು – ಸಿಎಂ

ರಾಜ್ಯದ ವಿದ್ಯಮಾನವನ್ನು ಇಲ್ಲಿಂದಲೇ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ ನಿರಂತರ ಹಗಲುಗನಸು ಎಂದು ಸಿಎಂ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿದ್ದಾರೆ.

ಅಮೇರಿಕದ ನ್ಯೂ ಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಸ್ಥಾನದ ಭೂಮಿ ಪೂಜೆ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದಿದೆ. ರಾಜ್ಯದ ಎಲ್ಲ ವಿದ್ಯಮಾನಗಳನ್ನು ಇಲ್ಲಿಂದಲೇ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಪ್ರಯತ್ನ ನಿರಂತರ ಹಗಲುಗನಸು ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ವಿರುದ್ಧ ಸಿಎಂ ಆಕ್ರೋಶ ಹೊರ ಹಾಕಿದ್ದಾರೆ.

ಈ ಬಗ್ಗೆ ರಾಜಭವನದ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಆನಂದ್ ಸಿಂಗ್, ನಾನು ಈಗಾಗಲೇ ಸ್ಪೀಕರ್ ಅವರಿಗೆ ರಾಜೀನಾಮೆಯನ್ನು ನೀಡಿದ್ದು, ಬೇಕಾದರೆ ಮತ್ತೊಮ್ಮೆ ರಾಜೀನಾಮೆ ನೀಡುತ್ತೇನೆ ಎಂದರು. ಈ ವೇಳೆ ತಮ್ಮ ರಾಜೀನಾಮೆ ನಿರ್ಧಾರದ ಕಾರಣವನ್ನು ತಿಳಿಸಲು ಇಚ್ಛಿಸದ ಅವರು, ನಾನು ಸದ್ಯ ರಾಜ್ಯಪಾಲರ ಭೇಟಿಗೆ ಆಗಮಿಸಿದ್ದೇನೆ. ಅವರ ಭೇಟಿಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ ಎಂದರು.

ಸಿಎಂ ನ್ಯೂಜೆರ್ಸಿಯಲ್ಲಿ ಇರುವ ಸಾಮರ್ಸೇಟ್‍ನಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ನಿರ್ಮಿಸಲಾಗುತ್ತಿರುವ ಶ್ರೀ ಕಾಲಭೈರವೇಶ್ವರ ದೇವಾಲಯದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಗುಜರಾತಿನ ಶ್ರೀ ಅರ್ಷ ವಿದ್ಯಾಮಂದಿರದ ಶ್ರೀ ಪರಮಾತ್ಮಾನಂದ ಸ್ವಾಮೀಜಿ ಹಾಗೂ ಮೈಸೂರಿನ ಶ್ರೀ ಸಚ್ಚಿದಾನಂದ ಗಣಪತಿ ಸ್ವಾಮೀಜಿ ಉಪಸ್ಥಿತರಿದ್ದರು.

Categories
Breaking News District Political State

ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ತೆಗೆದುಕೊಂಡ ಕ್ರಮಗಳ ಕುರಿತು ಪತ್ರಿಕಾ ಪ್ರಕಟಣೆ

2018-19ನೇ ಸಾಲಿನಲ್ಲಿ ರಾಜ್ಯದ್ಯಾಂತ ತೀವ್ರ ಮಳೆಕೊರತೆಯಿಂದ, ಮುಂಗಾರು ಹಂಗಾಮಿನಲ್ಲಿ 100 ತಾಲ್ಲೂಕುಗಳನ್ನು ಹಾಗೂ ಹಿಂಗಾರು ಋತುವಿನಲ್ಲಿ 156 ತಾಲ್ಲೂಕುಗಳನ್ನು ಬರ-ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ.
ಸನ್ಮಾನ್ಯ ಮುಖ್ಯ ಮಂತ್ರಿಗಳು ದಿನಾಂಕ:15-5-2019ರಂದು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಪ್ರಸ್ತುತ ಬರ-ಪರಿಸ್ಥಿತಿಯನ್ನು ಸಮಪರ್ಕವಾಗಿ ಎದುರಿಸಲು ಸಲಹೆ ಸೂಚನೆಗಳನ್ನು ನೀಡಲಾಗಿದೆ.
*ರಾಜ್ಯ ಸರ್ಕಾರದಿಂದ ಬರ ನಿರ್ವಹಣೆಗೆ ತೆಗೆದುಕೊಂಡ ಕ್ರಮಗಳು:
ರಾಜ್ಯ ಸರ್ಕಾರವು ಮುಖ್ಯವಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಮೇವು ಲಭ್ಯತೆಯಾಗುವಂತೆ ಮಾಡುವುದರ ಜೊತೆಗೆ  ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉದ್ಯೋಗ ನೀಡುವ ಮೂಲಕ ಗುಳೆ ಹೋಗುವುದನ್ನು ನಿವಾರಿಸಲಾಗಿದೆ.
*ಕುಡಿಯುವ ನೀರಿನ ಪರಿಸ್ಥಿತಿ:
·  ಪ್ರಸ್ತುತ ಟ್ಯಾಂಕರ್ ಹಾಗೂ ಖಾಸಗಿ ಬೋರ್‍ವೆಲ್‍ಗಳ ಮೂಲಕ 2,999 ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ, ಇದರ ಪೈಕಿ 1,632 ಗ್ರಾಮಗಳಿಗೆ 2,322 ಟ್ಯಾಂಕರ್‍ಗಳ ಮೂಲಕ ಹಾಗೂ 1,367 ಗ್ರಾಮಗಳಿಗೆ 1,873 ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ. ನಗರ ಪ್ರದೇಶದಲ್ಲಿ 440 ವಾರ್ಡ್‍ಗಳಿಗೆ 271 ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆ ಆಧಾರದ ಮೇರೆಗೆ ಪಡೆದುಕೊಳ್ಳಲಾಗಿದೆ.
· 24×7 ಮಾದರಿಯಲ್ಲಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕಂಟ್ರೋಲ್ ರೂಂ ತೆರೆದು 1077/1070 ಉಚಿತ ದೂರವಾಣಿ ಮೂಲಕ ಕುಡಿಯುವ ನೀರಿನ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲಾಗುತ್ತಿದ್ದು, ಸದರಿ ಉಚಿತ ದೂರವಾಣಿ ಸಂಖ್ಯೆಗೆ ಯಾವುದೇ ನೆಟ್‍ವರ್ಕ್‍ನಿಂದ ಕರೆ ಮಾಡಬಹುದಾಗಿರುತ್ತದೆ.
·  ಬರ ಪರಿಸ್ಥಿತಿ ಮತ್ತು ಹವಾಮಾನ ಪರಿಸ್ಥಿತಿಗೆ ಸಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ 10 ಸಚಿವ ಸಂಪುಟದ ಉಪ ಸಮಿತಿ ಸಭೆಗಳನ್ನು ನಡೆಸಲಾಗಿದೆ (ದಿನಾಂಕ:02.07.2018, 21.08.2018, 11.09.2018, 12.10.2018, 25.11.2018, 12.12.2018, 26.12.2018, 18.01.2019 ಮತ್ತು 01.03.2019).
·  ಬರ ಪರಿಹಾರ ಕಾರ್ಯಗಳ ಪ್ರಗತಿ ಮತ್ತು ನಿರ್ವಹಣೆಯ ಅವಲೋಕನಕ್ಕೆ ಸಂಬಂಧಿಸಿದಂತೆ ಕಂದಾಯ ವಿಭಾಗದ ಮಟ್ಟದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆಯನ್ನು ರಚಿಸಲಾಗಿದ್ದು, ಸದರಿ ಸಚಿವ ಸಂಪುಟ ಸಮಿತಿಗಳು ಬರ ಪೀಡಿತ ತಾಲ್ಲೂಕುಗಳಿಗೆ ಪ್ರವಾಸ ಕೈಗೊಂಡು ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳನ್ನು ಅವಲೋಕಿಸಿರುತ್ತಾರೆ.
·    ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರತಿನಿತ್ಯ ಪರಿಶೀಲಿಸುವುದು ಹಾಗೂ ತೊಂದರೆ ಇದ್ದಲ್ಲಿ ಕೂಡಲೇ ದುರಸ್ಥಿ ಕೈಗೊಳ್ಳುವುದು. ಒಂದು ವೇಳೆ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರಿನ ಲಭ್ಯತೆ ಇಲ್ಲದಿದ್ದಲ್ಲಿ, ಟ್ಯಾಂಕರ್ ಮೂಲಕ ಪೂರೈಕೆ ಮಾಡುವುದು. ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಪ್ರತಿ ನಿತ್ಯ ಪರಿಶೀಲನೆ ಮಾಡಿ ದುರಸ್ಥಿಗೊಳಗಾದ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ .
·   ಪ್ರತಿ ಹೋಬಳಿಗೆ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಿ ಹೋಬಳಿ ಹಂತದ ಎಲ್ಲಾ ಕುಡಿಯುವ ನೀರಿನ ವ್ಯವಸ್ಥೆ, ಉದ್ಯೋಗ ಸೃಜನೆ, ಮೇವು ಪರಿಸ್ಥಿತಿ ಇತ್ಯಾದಿ ಎಲ್ಲಾ ಸಮಸ್ಯೆಗಳ ಬಗ್ಗೆ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ.
· ಕುಡಿಯುವ ನೀರು ಸರಬರಾಜಿನ ಬಾಕಿ ಬಿಲ್ಲುಗಳ ಮೊತ್ತವನ್ನು ಪ್ರತಿ 15 ದಿವಸದೊಳಗೆ ಪಾವತಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
·  ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಗತಿ ಪರಿಶೀಲನೆಗಾಗಿ ಜಿಲ್ಲಾದ್ಯಂತ ಪ್ರವಾಸ ಕೈಗೊಂಡು, ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುವಂತೆ ಸೂಚಿಸಲಾಗಿದೆ.
· ಕುಡಿಯುವ ನೀರು ಪೂರೈಸುತ್ತಿರುವ ಟ್ಯಂಕರ್‍ಗಳಿಗೆ ವಿಳಂಬವಿಲ್ಲದೇ ಜಿ.ಪಿ.ಎಸ್ ಅಳವಡಿಸಲು ಸೂಚಿಲಾಗಿದೆ.
*ಮೇವು ಪರಿಸ್ಥಿತಿ:
·   ರಾಜ್ಯದಲ್ಲಿ 1,29,08,292 ಜಾನುವಾರುಗಳಿದ್ದು, ಪ್ರಸ್ತುತ 62,48,640 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಇದು ಮುಂದಿನ 12 ವಾರಗಳಿಗೆ ಸಾಕಾಗುತ್ತದೆ. ಪ್ರಸ್ತುತ 165 ಮೇವು ಬ್ಯಾಂಕ್‍ಗಳನ್ನು ತೆರೆಯಲಾಗಿದ್ದು, ಸದರಿ ಮೇವು ಬ್ಯಾಂಕ್‍ಗಳಲ್ಲಿ ಪ್ರತಿ ಕೆ.ಜಿಗೆ ರೂ.2.00 ರಂತೆ ಮೇವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
16 ಗೋಶಾಲೆಗಳನ್ನು ತೆರೆಯಲಾಗಿದ್ದು, ಇದರಲ್ಲಿ 14,054 ಜಾನುವಾರುಗಳನ್ನು ಸಂರಕ್ಷಿಸಲಾಗಿದೆ. ಅಗತ್ಯತೆಯನುಸಾರ ಗೋಶಾಲೆ ಹಾಗೂ ಮೇವಿನ ಬ್ಯಾಂಕ್‍ಗಳನ್ನು ತೆರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
  
·  ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಹಸಿರು ಮೇವು ಬೆಳೆಯಲು ರೂ.42.7 ಕೋಟಿಗಳ ವೆಚ್ಚದಲ್ಲಿ 16.80 ಲಕ್ಷ ಮಿನಿಕಿಟ್‍ಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗಿದೆ. ಇದರಿಂದಾಗಿ 63.00 ಲಕ್ಷ ಮೆಟ್ರಿಕ್ ಟನ್ ಹಸಿರು ಮೇವು ಇಲ್ಲಿಯವರೆಗೆ ಉತ್ಪಾದನೆಯಾಗಿದೆ.
·  ನೀರಾವರಿ ಪ್ರದೇಶಗಳಾದ ರಾಯಚೂರು, ಮಂಡ್ಯ, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭತ್ತದ ಮೇವನ್ನು ಬೇಲಿಂಗ್ ಮಾಡಿ ಕ್ರಮವಹಿಸಲಾಗಿದ್ದು, ಮುಂದಿನ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ  ಒಣ ಮೇವನ್ನು ಮೇವಿನ ಕೊರತೆ ಇರುವ ಜಿಲ್ಲೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.ಅಂತರ್ ರಾಜ್ಯ ಮೇವು ಸಾಗಾಣಿಕೆಯನ್ನು ನಿರ್ಬಂಧಿಸಲಾಗಿದೆ.
*ಬರ ಪರಿಹಾರ ಕಾರ್ಯಗಳಿಗಾಗಿ ಬಿಡುಗಡೆ ಮಾಡಲಾದ ಹಾಗೂ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಲಭ್ಯವಿರುವ ಅನುದಾನದ ವಿವರ:
ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) – ಬರಪೀಡಿತ ತಾಲ್ಲೂಕುಗಳಿಗೆ ತಲಾ ರೂ.2.00 ಕೋಟಿಯಂತೆ ರೂ.324 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. – ಪ್ರತಿ ತಾಲ್ಲೂಕಿಗೆ ತಲಾ ರೂ.1.00 ಕೋಟಿಯಂತೆ ಎರಡು ಬಾರಿ ಬಿಡುಗಡೆ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ  – ಬಿಡುಗಡೆಯಾದ ಅನುದಾನ : ರೂ.201.4 ಕೋಟಿ – ಟಾಸ್ಕ್‍ಫೋರ್ಸ್ ಅಡಿಯಲ್ಲಿ.
ನಗರಾಭಿವೃದ್ಧಿ ಇಲಾಖೆ –  ಬಿಡುಗಡೆಯಾದ ಅನುದಾನ : ರೂ.50.00 ಕೋಟಿ – ತುರ್ತು ಕುಡಿಯುವ ನೀರು ಪೂರೈಕೆ.
ಪಶುಸಂಗೋಪನೆ ಇಲಾಖೆ – ರೂ.42.70 ಕೋಟಿಗಳು ಮಿನಿಕಿಟ್‍ಗಾಗಿ – ಕಂದಾಯ ಇಲಾಖೆಯಿಂದ
ಬಿಡುಗಡೆಯಾದ ಅನುದಾನ ಒಟ್ಟು – ರೂ. 618.10 ಕೋಟಿ
ಬರ ಮತ್ತು ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು ರೂ.713.76 ಕೋಟಿಗಳು ಲಭ್ಯವಿದೆ.
*ಚುನಾವಣಾ ನೀತಿ ಸಂಹಿತೆಯ ಸಂದರ್ಭದಲ್ಲಿ ನಿರ್ವಹಿಸಿದ ಕ್ರಮಗಳು:
·  ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಇತರೆ ಜಿಲ್ಲಾ ಅಧಿಕಾರಿಗಳೊಂದಿಗೆ ಬರ ನಿರ್ವಹಣೆಗೆ ಸಂಬಂಧಿಸಿದಂತೆ 4 ವೀಡಿಯೋ ಸಂವಾದಗಳನ್ನು ನಡೆಸಿರುತ್ತಾರೆ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಬರ ನಿರ್ವಹಣೆಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ದಿನಾಂಕ:27.04.2019 ರಂದು ಸಭೆಯನ್ನು ನಡೆಸಿರುತ್ತಾರೆ.
·  ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು ನಿಯಮಿತವಾಗಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆ ನಡೆಸಿರುತ್ತಾರೆ. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ (ವಿ.ನಿ) ಇವರು ಪರಿಸ್ಥಿತಿಯನ್ನು ದಿನಂಪ್ರತಿ ಪರಿಶೀಲಿಸುತ್ತಿದ್ದಾರೆ. ಇದಲ್ಲದೇ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಅವಲೋಕಿಸಿ ಸಲಹೆ/ಸೂಚನೆಗಳನ್ನು ನೀಡಿರುತ್ತಾರೆ.
·  ಕುಡಿಯುವ ನೀರಿನ ಸಮಸ್ಯೆಗಳನ್ನು ತಕ್ಷಣ ಇತ್ಯರ್ಥಗೊಳಿಸುವ ಸಲುವಾಗಿ ಕಂಟ್ರೋಲ್ ರೂಂ ತೆರೆದು ದಿನದ 24 ಗಂಟೆಗಳಲ್ಲೂ ಕುಂದು-ಕೊರತೆಗಳನ್ನು ಆಲಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಾಗೂ ಕಂಟ್ರೋಲ್ ರೂಂ ಸಮರ್ಪಕವಾಗಿ ಜಿಲ್ಲಾಡಳಿತದ ವತಿಯಿಂದ ಕಾರ್ಯ ನಿರ್ವಹಿಸುತ್ತಿದೆ.
·  ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಪ್ರತಿ ನಿತ್ಯ ಪರಿಶೀಲನೆ ಮಾಡಿ ದುರಸ್ಥಿಗೊಳಗಾದ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
*ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಉದ್ಯೋಗ ಸೃಜನೆ:
·  ಉದ್ಯೋಗ ಸೃಜನೆ ಕಾಮಗಾರಿಯಡಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಸಮುದಾಯ ಮಟ್ಟದ ಹಾಗೂ ಜಲ ಸಂರಕ್ಷಣೆ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ತೆಗದುಕೊಳ್ಳಲು ಸೂಚಿಸಲಾಗಿದೆ. ಮಾರ್ಚ್ 31, 2019ರ ಅವಧಿಯವರೆಗೆ ನಿಗದಿಪಡಿಸಿರುವ ಒಟ್ಟು 10.00 ಕೋಟಿ ಮಾನವ ದಿನಗಳ ಗುರಿಗೆ ಎದುರಾಗಿ 10.47 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. 21.11 ಲಕ್ಷ ಕುಟಂಬಗಳಿಗೆ ಉದ್ಯೋಗ ಒದಗಿಸಿ ರೂ.3821.46 ಕೋಟಿ ವೆಚ್ಚ ಮಾಡಲಾಗಿದೆ.
Image result for ಉದ್ಯೋಗ
· ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕನಿಷ್ಟ ಒಂದು ಸಾಮೂಹಿಕ ಕೆಲಸವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೈಗೊಳಲಾಗಿದೆ.
·  2018-19ನೇ ಸಾಲಿನಲ್ಲಿ ಒಟ್ಟು 8.10 ಕೋಟಿ ವೈಯಕ್ತಿಕ ಕಾಮಗಾರಿಗಳನ್ನು ಹಾಗೂ 3.03 ಲಕ್ಷ ಸಮುದಾಯ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ.
·  ನರೇಗಾ ಯೋಜನೆಯಡಿ ಬಿಸಿಲಿನ ತಾಪಮಾನ ಮತ್ತು ಉಷ್ಣಾಂಶದ ಪ್ರಖಾರತೆ ಹೆಚ್ಚಾಗಿರುವುದರಿಂದ ಕಾಮಗಾರಿಗಳ ಸ್ಥಳದಲ್ಲಿ ಶುದ್ದಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇನ್ನೂ ಮುಂತಾದ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
·   ಶೇ.98 ರಷ್ಟಿನ ಪ್ರಮಾಣದಲ್ಲಿ ಕೂಲಿ ಕಾರ್ಮಿಕರ ಕೂಲಿ ಹಣ ಪಾವತಿಯನ್ನು 15 ದಿನಗೊಳಗೆ ಪಾವತಿಸಲಾಗಿದೆ.
Categories
Breaking News District Political State

‘ರಾಜ್ಯದಲ್ಲಿ 22 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಭರವಸೆ ಇದೆ’ – ಬಿಎಸ್ ಯಡಿಯೂರಪ್ಪ

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ.  ವಿವಿಧ ಪಕ್ಷಗಳಲ್ಲಿ ನಾಯಕರು ಗೆಲುವಿಗಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾತನಾಡಿ ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.  ಅಲ್ಲದೇ ಕಳೆ ಬಾರಿಗಿಂತ ಈ ಬಾರಿ ಮೋದಿ ಅಲೆ ಹೆಚ್ಚಾಗಿದ್ದು, ದೇಶದಲ್ಲಿ 300 ಕ್ಕಿಂತ ಹೆಚ್ಚು ಸ್ಥಾನದಲ್ಲಿ ಗೆಲ್ಲಲಿದೆ. ರಾಜ್ಯದಲ್ಲಿ 22 ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲುವು ಪಡೆಯಲಿದೆ ಎಂದು ಹೇಳಿದ್ದಾರೆ.

ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ ಸಾಲಮನ್ನಾ ಯೋಜನೆ ಇನ್ನು ಜಾರಿಗೆ ಬಂದಿಲ್ಲ.  ಸಾಲಮನ್ನಾದಲ್ಲಿ ಸತ್ಯಾಂಶವನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ  ಹಂತಕ್ಕೆ ಅವರು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 18 ಸ್ಥಾನಗಳನ್ನು ಪಡೆದುಕೊಂಡಿದ್ದು, ದೇಶದಲ್ಲಿ 282 ಸ್ಥಾನಗಳಲ್ಲು ಗೆಲುವು ಪಡೆದಿತ್ತು. ಹೆಚ್ಚು ಬಹುಮತಗಳ ಮೂಲಕ ಸರ್ಕಾರ ರಚಿಸಿದ್ದು, ಇದೀಗ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಗದ್ದುಗೆಗೆ ಏರಲಿದೆ ಎಂದು ನಾಯಕರು ಭರವಸೆ ವ್ಯಕ್ತಪಡಿಸಿದ್ದಾರೆ.