ಫ್ಯಾಕ್ಟ್‌ಚೆಕ್ : ಇದು ಜಮ್ಮುವಿನಲ್ಲಿ ನಿರ್ಮಾಣಾಗಿರುವ ರಾಷ್ಟ್ರೀಯ ಹೆದ್ದಾರಿ 44ರ ಚಿತ್ರವೇ?
ಜಮ್ಮುವಿನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ 44ರ ವಿಹಂಗಮ ನೋಟ ಎಂದು ಪ್ರತಿಪಾದಿಸಿ, ಭವ್ಯವಾದ ಪರ್ವತಗಳ ನಡುವೆ ಹರಿಯುತ್ತಿರುವ ನದಿಗಳ ಮೇಲೆ ನಿರ್ಮಿಸಲಾದ ಎತ್ತರದ ರಸ್ತೆಯ ಚಿತ್ರವನ್ನುಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಇದು ಭಾರತದಲ್ಲಿ ಜಮ್ಮು ರಾಷ್ಟ್ರೀಯ ಹೆದ್ದಾರಿ 44 ಅನ್ನು ಪ್ರತಿನಿಧಿಸುತ್ತದೆ ಎಂಬ ಹೇಳಿಕೆಯೊಂದಿಗೆ ಫೋಟೊವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವೈರಲ್ ದೃಶ್ಯಗಳು ಕಮ್ಮು ರಾಷ್ಟ್ರೀಯ ಹೆದ್ದಾರೆ 44ಕ್ಕೆ ಸಂಬಂಧಿಸಿದ ಚಿತ್ರ ಎಂಬುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಚೀನಾ ಮೂಲದ ಸುದ್ದಿ ವೆಬ್‌ಸೈಟ್ ಕೈಕ್ಸಿನ್ ಗ್ಲೋಬಲ್‌ನಲ್ಲಿ ಅದೇ ಚಿತ್ರವನ್ನು ಒಳಗೊಂಡಿರುವ ಲೇಖನವೊಂದು ಲಭ್ಯವಾಯಿತು. ಲೇಖನವು ಛಾಯಾಚಿತ್ರವನ್ನು ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿ ನೆಲೆಗೊಂಡಿರುವ G75 ಲ್ಯಾನ್‌ಝೌ-ಹೈಕೌ ಎಕ್ಸ್‌ಪ್ರೆಸ್‌ವೇನ ಭಾಗವಾಗಿರುವ ವೈಯುವಾನ್-ವುಡು ಎಕ್ಸ್‌ಪ್ರೆಸ್‌ವೇನ ಒಂದು ವಿಭಾಗವೆಂದು ಉಲ್ಲೇಖಿಸುತ್ತದೆ.
ಚೀನಾ ಸರ್ಕಾರದ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಎಕ್ಸ್‌ಪ್ರೆಸ್‌ವೇಯ ಲಾಂಗ್ನಾನ್ ವಿಭಾಗವನ್ನು 2020 ರಲ್ಲಿ ಪ್ರಾಯೋಗಿಕ ಕಾರ್ಯಾಚರಣೆಗಳಿಗಾಗಿ ತೆರೆಯಲಾಗಿದೆ.
ಹೆದ್ದಾರಿಯ ಚಿತ್ರದ ಮತ್ತಷ್ಟು ಮಾಹಿತಿಗಾಗಿ ಗೂಗಲ್ ಅರ್ಥ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ಚಿತ್ರವು ವೀಯುವಾನ್-ವುಡು ಎಕ್ಸ್‌ಪ್ರೆಸ್‌ವೇಯ ಒಂದು ಭಾಗವನ್ನು ಸೆರೆಹಿಡಿಯಲಾದ ಚಿತ್ರ ಎಂದು ಎಂದು ನಿರ್ಧರಿಸಿದೆ, ನಿರ್ದಿಷ್ಟವಾಗಿ ಗನ್ಸು ಪ್ರಾಂತ್ಯದ ಲಿಯಾಂಘೆಕೌ ಎಂಬ ದೂರದ ಹಳ್ಳಿಯ ಮೂಲಕ ಹಾದುಹೋಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿ ನೆಲೆಗೊಂಡಿರುವ G75 ಲ್ಯಾನ್‌ಝೌ-ಹೈಕೌ ಎಕ್ಸ್‌ಪ್ರೆಸ್‌ವೇನ ಭಾಗವಾಗಿರುವ ವೈಯುವಾನ್-ವುಡು ಎಕ್ಸ್‌ಪ್ರೆಸ್‌ವೇನ ಚಿತ್ರವನ್ನು ಭಾರತದ ಜಮ್ಮು ರಾಷ್ಟ್ರೀಯ ಹೆದ್ದಾರಿ 44 ರ ಚಿತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಹಾವಿನ ಮರಿಗಳು ಬಿದ್ದಿದ್ದ ಹಾಲನ್ನು ಸೇವಿಸಿದ ಮಕ್ಕಳು ಸಾವನಪ್ಪಿವೆ ಎಂಬ ಸುದ್ದಿ ನಿಜವೇ?