ಫ್ಯಾಕ್ಟ್‌ಚೆಕ್ : ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸಲು ಮಿಸ್ ಕಾಲ್ ನೀಡಿ ಎಂದು ಕೇಂದ್ರ ಸರ್ಕಾರ ಹೇಳಿದೆಯೇ?

ಈಗ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಹೆಚ್ಚು ಚರ್ಚೆಯಾಗುತ್ತಿದೆ. BJP U.C.C ಗೆ ಜಾರಿಗೆ ಹೆಚ್ಚು ಒತ್ತಾಯಿಸುತ್ತಿದೆ. ಏಕರೂಪ ನಾಗರಿಕ ಸಂಹಿತೆ ಕುರಿತು ಕೇಂದ್ರ ಸರ್ಕಾರ ಕಾನೂನು ಆಯೋಗದಿಂದ ಸಲಹೆಗಳನ್ನು ಕೋರಿತ್ತು.

ಈ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ UCC ಗೆ ಸಂಬಂಧಿಸಿದಂತೆ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಪರವಾಗಿ ಇದ್ದರೆ ಮೊವೈಲ್ ಸಂಖ್ಯೆಗೆ ಮಿಸ್ ಕಾಲ್ ಕೊಡುವ ಮೂಲಕ ಬೆಂಬಲಿಸಿ ಎಂದು ಕೊರುವ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಇರುವ ಬರಹ ಈ ಕೆಳಗಿನಂತಿದೆ:

ಆತ್ಮೀಯ ಬಂಧುಗಳೇ, ದೀರ್ಘ ಟಿಪ್ಪಣಿಗೆ ಕ್ಷೆಮೆಇರಲಿ. ಪ್ರಧಾನಿ ನರೇಂದ್ರಮೋದಿಜಿ ಯವರು ಪೂರ್ತಿ ಬಾರತಕ್ಕೆ. U. C. C. ಯುನಿಫಾರ್ಮ್ ಸಿವಿಲ್ ಕೋಡ್. ಏಕ ರೂಪ ನಾಗರೀಕ ಸಂಹಿತೆ ಯನ್ನು, ತರಲು ಬಯಸಿದ್ದು. ಇದಕ್ಕಾಗಿ ದೇಶದಾಧ್ಯಂತ ನಾಗರೀಕರಿಂದ ತಮ್ಮ ಅಭಿಪ್ರಾಯ ತಿಳಿಸಲು ತಿಳಿಸಿರುವುದರಿಂದ. ಇದಕ್ಕೆ ಈಗಾಗಲೇ ಎರಡು ದಿನದಲ್ಲಿ 04ಕೋಟಿ ಮುಸ್ಲಿಂ ಜನರು ಹಾಗೂ 02. ಕೋಟಿ ಕ್ರಿಶ್ಚಿಯನ್ ಜನರು. ದೇಶಕ್ಕೆ U. C. C. ಏಕ ರೂಪ ನಾಗರೀಕ ಸಂಹಿತೆ ಬೇಡವೆಂದು, ವಿರುದ್ಧವಾಗಿ ಅಭಿಪ್ರಾಯ ಕಳಿಸಿದ್ದಾರೆ.

ಆದ್ದರಿಂದ ಜುಲೈ.06/2023. ರೊಳಗೆ ಅಂತಿಮ ದಿನಕ್ಕೆ ಮುಂಚಿತವಾಗಿ. ಮುಸ್ಲಿಂ ಮತ್ತು ಕ್ರಿಶ್ಚಿಯನ್, ಜನರು ಅವರ ಅಭಿಪ್ರಾಯ ತಿಳಿಸುವುದಕ್ಕಿಂತ. ಹೆಚ್ಚಿನಸಂಖ್ಯೆಯಲ್ಲಿ, ದೇಶದ ಹಿಂದುಗಳೆಲ್ಲರು ಏಕರೂಪ ನಾಗರೀಕ ಸಂಹಿತೆ ಕಾನೂನನ್ನು (U. C. C.)ಯುನಿಫಾರ್ಮ್ ಸಿವಿಲ್ ಕೋಡ್ ಅನ್ನು ಜಾರಿಗೆ ತರಲು. ಅವರಿಗಿಂತ ಹೆಚ್ಚಿನ ಸಂಖ್ಯೆ ಯಲ್ಲಿ, U. C. C. ಪರವಾಗಿ 9090902024. ನಂಬರಿಗೆ. ಮಿಸ್ ಕಾಲ್ ಮಾಡಿ ಅಭಿಪ್ರಾಯ ತಿಳಿಸಬೇಕಾಗಿದೆ. ದಯವಿಟ್ಟು ನೀವು ನಿಮ್ಮ ಗ್ರೂಪಿನಲ್ಲಿರುವವರೆಲ್ಲರಿಗೂ ಈ ವಿಚಾರ ತಿಳಿಸಿ. ಯುನಿಫಾರ್ಮ್ ಸಿವಿಲ್ ಕೋಡ್ ಪರವಾಗಿ 9090902024 ಕ್ಕೆ ಮಿಸ್ ಕಾಲ್ ಮಾಡಲು ಕೋರಿ ಇದು ಜಾರಿಗೆ ಬರುವಂತೆ ಮಾಡಲು. ನರೇಂದ್ರ ಮೋದಿಜಿ ಯವರಿಗೆ ಬಲ ನೀಡಬೇಕೆಂದು ಕಳ ಕಳಿಯಿಂದ ವಿನಯ ಪೂರ್ವಕ ವಾಗಿ ಕೈ ಮುಗಿದು ಬೇಡಿಕೊಳ್ಳುತ್ತೇನೆ.ಮಿಸ್ ಕಾಲ್ ಮಾಡಿದ ಕೂಡಲೇ ನಿಮ್ಮ ಅಭಿಪ್ರಾಯ ದಾಖಲಾದ ಬಗ್ಗೆ ಮೆಸೇಜ್ ಬರುತ್ತದೆ.9090902024 ಕ್ಕೆ ಮಿಸ್ ಕಾಲ್ ಮಾಡಿದ ಎಲ್ಲರಿಗೂ ಅನಂತಾನಂತ ನಮಸ್ಕಾರಗಳು. ಜೈ ಭಾರತ ಮಾತೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮುಖ್ಯವಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ, ಹಾಗಾಗಿ ಹಿಂದೂಗಳು ಇದನ್ನು ಬೆಂಬಲಿಸಬೇಕು ಎಂದು ಕೋಮು ನಿರೂಪಣೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರ ಮಿಸ್ ಕಾಲ್ ಅಭಿಯಾನ ನಡೆಸಿದೆಯೇ ?

ಬಿಜೆಪಿಯ ಮುಂದೆ ಮೂರು ಮುಖ್ಯ ಅಜೆಂಡಾಗಳಿವೆ. ಇವುಗಳಲ್ಲಿ ಮೊದಲನೆಯದು ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್-370 ಅನ್ನು ತೆಗೆದುಹಾಕುವುದು. ಎರಡನೆಯದಾಗಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದು ಮತ್ತು ಮೂರನೆಯದಾಗಿ, ಇಡೀ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು. ಮೊದಲ ಎರಡು ಅಜೆಂಡಾದಲ್ಲಿ ಕೆಲಸ ಮುಗಿಸಿದ ಬಿಜೆಪಿ ಈಗ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಒತ್ತಾಯಿಸುತ್ತಿದೆ. ಆದ್ದರಿಂದ ಏಕರೂಪ ನಾಗರಿಕ ಸಂಹಿತೆ ಕುರಿತು ಕೇಂದ್ರ ಸರ್ಕಾರ ಕಾನೂನು ಆಯೋಗದಿಂದ ಸಲಹೆಗಳನ್ನು ಕೋರಿತ್ತು.

ಕೇಂದ್ರ ಸರ್ಕಾರವು ಈ ಹಿಂದೆಯೂ 21ನೇ ಕಾನೂನು ಆಯೋಗದಿಂದ UCC ಕುರಿತು ಸಲಹೆಗಳನ್ನು ಕೇಳಿತ್ತು. ಈ ಕುರಿತು ಆಯೋಗವು ಸಮಾಜದ ಎಲ್ಲಾ ವರ್ಗಗಳ ಮೇಲೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಅಗತ್ಯವನ್ನು ಪರಿಶೀಲಿಸಿತ್ತು.

ಮಿಸ್ ಕಾಲ್ ಅಭಿಯಾನ ಅಸ್ತಿತ್ವದಲ್ಲಿ ಇಲ್ಲ:

ಏಕರೂಪ ನಾಗರೀಕ ಸಂಹಿತೆ ಕಾನೂನನ್ನು (U. C. C.) ಜಾರಿಗೆ ತರಲು. ಅವರಿಗಿಂತ(ಮುಸ್ಲಿಂ ಮತ್ತು ಕ್ರಿಶ್ಚಿಯನ್) ಹೆಚ್ಚಿನ ಸಂಖ್ಯೆ ಯಲ್ಲಿ, U. C. C. ಪರವಾಗಿ 9090902024. ನಂಬರಿಗೆ. ಮಿಸ್ ಕಾಲ್ ಮಾಡಿ ಅಭಿಪ್ರಾಯ ತಿಳಿಸಬೇಕಾಗಿದೆ. ದಯವಿಟ್ಟು ನೀವು ನಿಮ್ಮ ಗ್ರೂಪಿನಲ್ಲಿರುವವರೆಲ್ಲರಿಗೂ ಈ ವಿಚಾರ ತಿಳಿಸಿ. ಯುನಿಫಾರ್ಮ್ ಸಿವಿಲ್ ಕೋಡ್ ಪರವಾಗಿ 9090902024 ಕ್ಕೆ ಮಿಸ್ ಕಾಲ್ ಮಾಡಲು ಕೋರಿ ಇದು ಜಾರಿಗೆ ಬರುವಂತೆ ಮಾಡಲು. ನರೇಂದ್ರ ಮೋದಿಜಿ ಯವರಿಗೆ ಬಲ ನೀಡಬೇಕೆಂದು ಕಳ ಕಳಿ ಯಿಂದ ವಿನಯ ಪೂರ್ವಕ ವಾಗಿ ಕೈ ಮುಗಿದು ಬೇಡಿಕೊಳ್ಳುತ್ತೇನೆ.ಮಿಸ್ ಕಾಲ್ ಮಾಡಿದ ಕೂಡಲೇ ನಿಮ್ಮ ಅಭಿಪ್ರಾಯ ದಾಖಲಾದ ಬಗ್ಗೆ ಮೆಸೇಜ್ ಬರುತ್ತದೆ. ಎಂದು ಹೇಳಿದೆ.

9090902024 ಈ ಸಂಖ್ಯೆಗೆ ಕರೆ ಮಾಡಿದಾಗ ಒಂದು ರಿಂಗ್‌ಗೆ ಕರೆ ಡಿಸ್ಕನೆಕ್ಟ್‌ ಆಗುತ್ತದೆ. ನಂತರ ಒಂದು ಸಂದೇಶದ ಮೂಲಕ ಲಿಂಕ್ ನಿಮ್ಮ ಮೊಬೈಲ್ ಅನ್ನು ಪ್ರವೇಶಿಸುತ್ತದೆ. ಆ ಸಂದೇಶ ಹೀಗಿದೆ. “Thank you for supporting the Modi government committed to Seva, Sushasan and Garib Kalyan. Click on 9yearsofseva.bjp.org to know the achievements of 9 years of Modi government. ಈ ಲಿಂಕ್ ಕ್ಲಿಕ್ ಮಾಡಿದರೆ ಮೋದಿ ಸರ್ಕಾರ 9ವರ್ಷಗಳಲ್ಲಿ ಮಾಡಿರುವ ಯೋಜನೆಗಳ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ವಾಸ್ತವವಾಗಿ ಈ ಲಿಂಕ್ ಸರ್ಕಾರದ ಭಾಗವಾಗಿ ರೂಪಿಸಿಲ್ಲ ಮತ್ತು ಏಕರೂಪ ನಾಗರಿಕ ಸಂಹಿತೆ UCC ಕುರಿತು ಈ ಮೇಲ್ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ತಿಳಿಸಲು ಕೇಂದ್ರ ಸರ್ಕಾರ ಕೋರಿದೆ. ಅದರ ಲಿಂಕ್ ಅನ್ನು ಕೆಳಗೆ ನೋಡಬಹುದು.

Those who are interested and willing may present their views within a period of 30 days from the date of Notice through “click here” button or by Email at [email protected] to the Law Commission of India.

ಈ ಸಂಖ್ಯೆಗೆ ಮಿಸ್ ಕಾಲ್‌ಗೂ, ಯುಸಿಸಿಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ ಈ ಬಿಲ್ ವಿರುದ್ಧ ಎಷ್ಟು (ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು) (ಪೋಸ್ಟ್‌ನಲ್ಲಿ ಹೇಳುವಂತೆ 6ಕೋಟಿ) ಜನ ಮತ ಚಲಾಯಿಸಿದ್ದಾರೆ ಎಂದು ಇವರಿಗೆ ಹೇಳಿರುವುದಾದರೂ ಯಾರು? ಅದು ಸರ್ಕಾರದ ಅಧಿಕೃತ ದಾಖಲೆಯೇ? ಇದ್ಯಾವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಬಳಕೆದಾರನು ಉಲ್ಲೇಖಿಸಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಏಕರೂಪ ನಾಗರಿಕ ಸಂಹಿತೆ ಪರವಾಗಿ ಇರುವ ಹಿಂದೂಗಳು 9090902024 ಸಂಖ್ಯೆಗೆ  ಮಿಸ್ ಕಾಲ್ ನೀಡುವ ಮೂಲಕ ಬೆಂಬಲಿಸುವಂತೆ ತಿಳಿಸಿರುವ ಪೋಸ್ಟ್‌ ವಾಸ್ತವವಾಗಿ BJP  ಅಜೆಂಡದ ಭಾಗ ಎಂಬತಿದೆ. ಮಿಸ್ ಕಾಲ್ ಅಭಿಯಾನ ಸರ್ಕಾರದ ಅಧಿಕೃತ ಆದೇಶವಲ್ಲ. ಹಾಗಾಗಿ ಪೋಸ್ಟ್‌ನಲ್ಲಿ  ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಇದು ಜಮ್ಮುವಿನಲ್ಲಿ ನಿರ್ಮಾಣಾಗಿರುವ ರಾಷ್ಟ್ರೀಯ ಹೆದ್ದಾರಿ 44ರ ಚಿತ್ರವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights