ಫ್ಯಾಕ್ಟ್‌ಚೆಕ್ : 7 ವರ್ಷದ ಬಾಲಕಿ 4 ವರ್ಷದ ಬಾಲಕನನ್ನು ಬಾವಿಗೆ ಎಸೆದ ಘಟನೆ ಇತ್ತೀಚಿನದಲ್ಲ

ಮಕ್ಕಳಿಗೆ ಆಟ ಎಂದರೆ ಅಚ್ಚು ಮೆಚ್ಚು, ಮಕ್ಕಳು ಆಟವಾಡುವಾಗ ಬೀಳುವುದು, ಏಳುವುದು ಮತ್ತು ಬೀಳಿಸುವುದು ಸಾಮಾನ್ಯ. ಆದರೆ ಇಲ್ಲೂಂದು ಅಘಾತಕಾರಿ ಘಟನೆಯೊಂದು ವರದಿಯಾಗಿದೆ.ಇದನ್ನು ನೋಡಿದರೆ ಖಂಡಿತಾ ನೀವೂ ಬೆಚ್ಚಿಬೀಳುತ್ತೀರಿ.

ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ ಮತ್ತು ಅವರೊಂದಿಗೆ ಸಾಧ್ಯವಾದಷ್ಟು ಜೊತೆಗಿರಿ ಎಂಬುದನ್ನು ಸಹ ಈ ವೀಡಿಯೊದಿಂದ ಕಲಿಯಬಹುದು. ಈ ಆಘಾತಕಾರಿ ವೀಡಿಯೊದಲ್ಲಿ, 7 ವರ್ಷದ ಹುಡುಗಿ 4 ವರ್ಷದ ಬಾಲಕನನ್ನು ತಮಾಷೆಯಾಗಿ ಎತ್ತಿಕೊಂಡು ಬಾವಿಗೆ ಎಸೆಯುತ್ತಿರುವುದನ್ನು ಕಾಣಬಹುದು.

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) @cctvidiots ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ, ಇದು ಜನರನ್ನು ದಿಗ್ಭ್ರಮೆಗೊಳಿಸಿದೆ. 1 ನಿಮಿಷ 37 ಸೆಕೆಂಡ್‌ಗಳ ಈ ವೀಡಿಯೊವನ್ನು ಇಲ್ಲಿಯವರೆಗೆ 14.7 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ‘ಚೀನಾದಲ್ಲಿ ಪುಟ್ಟ ಬಾಲಕಿಯೊಬ್ಬಳು 4 ವರ್ಷದ ಮಗುವನ್ನು ಬಾವಿಗೆ ಎಸೆದಿದ್ದಾಳೆ’ ಎಂದು ವಿಡಿಯೋದ ಶೀರ್ಷಿಕೆ ಬರೆಯಲಾಗಿದೆ.

ಹುಡುಗ ತನ್ನ ಕೈಗಳಿಂದ ಬಾವಿಯ ಅಂಚನ್ನು ಹಿಡಿಯಲು ಪ್ರಯತ್ನಿಸುತ್ತಾನೆ, ಆದರೆ ಹುಡುಗಿ ಅವನ ಕೈಗಳನ್ನು ಸಡಿಲಗೊಳಿಸಿ ಬಲವಂತವಾಗಿ ಹುಡುಗನನ್ನು ಬಾವಿಯೊಳಗೆ ಬಿಡುತ್ತಾಳೆ. ನಂತರ ಗಾಬರಿಗೊಂಡ ಬಾಲಕಿ ಅಳುತ್ತಾ ಬಾವಿಯ ಸುತ್ತಲೂ ಓಡಾಡುತ್ತಾಳೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಮಿಲಿಯನ್ ವೀವ್ಸ್‌ ಆಗಿದ್ದು, ಇದನ್ನು ನೋಡಿದ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಅನ್ಯಾಯವಾಗಿ ಒಂದು ಮಗುವಿನ ಜೀವ ಹೋಯಿತಲ್ಲಾ ಎಂದು ಮರುಕ ಪಡುತ್ತ ಕಮೆಂಟ್ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಹಲವು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಹಾಗಿದ್ದರೆ ಈ ಘಟನೆ ಯಾವಾಗ ನಡೆದಿದೆ, ಬಾವಿಗೆ ಎಸೆಯಲ್ಪಟ್ಟ ಮಗು ಬದುಕಿತೇ? ನಂತರ ಮಗುವಿನ ಪರಿಸ್ಥಿತಿ ಏನಾಯಿತು ಎಂದು ತಿಳಿಯೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರು ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ನೈಋತ್ಯ ಚೀನಾದಲ್ಲಿ 7 ವರ್ಷದ ಬಾಲಕಿಯೊಬ್ಬಳು ಕಿರು ತೆರೆಯಲ್ಲಿ ನೋಡಿದ ದೃಶ್ಯಗಳಿಂದ ಪ್ರಭಾವಗೊಂಡು ಅದನ್ನೆ ಅನುಸರಿಸಲು ಮುಂದಾದ ಪರಿಣಾಮ ನಾಲ್ಕು ವರ್ಷದ ಬಾಲಕನನ್ನು ಬಾವಿಗೆ ಎಸೆದ ಘಟನೆ ನಡೆದಿದೆ ಎಂದು ನ್ಯೂಸ್ ಫ್ಲೇರ್ ವರದಿ ಮಾಡಿದೆ.

ಘಟನೆಯು 8 ಮಾರ್ಚ್ 2023ರಂದು ನಡೆದಿದೆ. ಅಂದರೆ 8 ತಿಂಗಳ ಹಿಂದೆ ನಡೆದ ಹಳೆಯ ಘಟನೆಯ ವಿಡಿಯೋವನ್ನು ಈಗ ನಡೆದಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ. 8 ತಿಂಗಳ ಹಿಂದೆ ನಡೆದ ಘಟನೆಯ ವಿಡಿಯೋವನ್ನು ಸದ್ಯ ಹಂಚಿಕೊಳ್ಳಲಾಗಿದೆ. ಈ ಘಟನೆಯಲ್ಲಿ 4 ವರ್ಷದ ಮಗು ಬದುಕಿದೆಯೇ? ಎಂದು ಪರಿಶೀಲಿಸಿದಾಗ,  ಟಿವಿ ಶೋ ನಲ್ಲಿ ನೋಡಿದ್ದನ್ನು ಅನುಕರಿಸಲು ಮುಂದಾದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

Bad to the bone': millions in China shocked by girl, 7, who throws boy into  well, mimicking TV drama plot — victim rescued minutes later | South China  Morning Post

ಮಾರ್ಚ್ 8 ರಂದು ತಮ್ಮ ಹಳ್ಳಿಯ ಎರಡು ಬಾವಿಗಳ ಸುತ್ತಲೂ ಹುಡುಗಿ ಮತ್ತು ಹುಡುಗ ಆಟವಾಡುತ್ತಿರುವುದನ್ನು ಸಿಸಿ ಕ್ಯಾಮೆರಾ ದಾಖಲೆಗಳು ತೋರಿಸಿವೆ, ಆಟವಾಡುತ್ತಿದ್ದ ಇಬ್ಬರು ಮಕ್ಕಳಲ್ಲಿ ಹುಡುಗಿ ಇದ್ದಕ್ಕಿದ್ದಂತೆ ಹುಡುಗನನ್ನು ಮೇಲಕ್ಕೆತ್ತಿ ಬಾವಿಯೊಂದಕ್ಕೆ ಬಲವಂತದಿಂದ ತಳ್ಳುತ್ತಿರುವುದನ್ನು ಕಾಣಬಹುದು

ಸುಮಾರು ಐದು ಮೀಟರ್ ಆಳದ ಬಾವಿಯಲ್ಲಿ ಮಗು ಕೂಗುತ್ತಿರುವ ಶಬ್ದ ಕೇಳಿಸಿಕೊಂಡ ಗ್ರಾಮಸ್ಥರು ಸಹಾಯಕ್ಕಾಗಿ ದಾವಿಸಿದ್ದಾರೆ. 10 ನಿಮಿಷಗಳ ನಂತರ ಬಾಲಕನನ್ನು ರಕ್ಷಿಸಿದ್ದಾರೆ, 5 ಮೀಟರ್ ಇದ್ದ ಬಾವಿಯಲ್ಲಿ ಎರಡು ಮೀಟರ್ ನಷ್ಟು ನೀರು ಸಂಗ್ರಹವಾಗಿತ್ತು ಎಂದು ಯುನ್ನಾನ್ ಪ್ರಾಂತ್ಯದ ಸಾಂಗ್ಮಿಂಗ್ ಕೌಂಟಿಯ ಪೊಲೀಸರು ತಿಳಿಸಿದ್ದಾರೆ ಎಂದು ಬೀಜಿಂಗ್ ನ್ಯೂಸ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾ ವಿಡಿಯೋ  ಹಳೆಯದು ಮತ್ತು 4 ವರ್ಷದ ಮಗುವನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.  ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ಮ್ಕಳ ಪೋಷಕರು ಶಾಕ್ ಆಗಿದ್ದಾರೆ. ವಾಸ್ತವವಾಗಿ ಈ ವಿಡಿಯೋ ಹಳೆಯದಾಗಿದ್ದು ಮತ್ತೊಮ್ಮೆ ವೈರಲ್ ಆಗುತ್ತಿದೆ.

ಮಕ್ಕಳು ಆಟವಾಡುವಾಗ ಅವರದ್ದೇ ಲೋಕದಲ್ಲಿ ಮುಳುಗಿರುತ್ತಾರೆ ಮತ್ತು ಅವರು ಮಾಡುವ ಕೆಲಸದಿಂದ ಏನೆಲ್ಲ ಪರಿಣಾಮ ಉಂಟಾಗುತ್ತದೆ ಎಂಬ ಅರಿವು ಇರುವುದಿಲ್ಲ. ಹಾಗಾಗಿ ಪೋಷಕರು ಮಕ್ಕಳನ್ನು ಆಟವಾಡಲು ಬಿಟ್ಟು ಮೈ ಮರೆಯಬಾರದು ಎಂಬುದನ್ನು ಈ ಘಟನೆ ನೋಡಿ ಕಲಿಯಬೇಕಿದೆ.

ಕೃಪೆ : South china morning post

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ರಾಜಸ್ಥಾನ ಕಾಂಗ್ರೆಸ್ ರ‍್ಯಾಲಿಯಲ್ಲಿ ಮೋದಿ ಪರ ಘೋಷಣೆ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights