ಫ್ಯಾಕ್ಟ್‌ಚೆಕ್ : ಇಂದಿರಾ ಗಾಂಧಿ ತಿನ್ನುತ್ತಿರುವುದು ‘ಫಿಶ್’ ಅಲ್ಲ! ಹಾಗಿದ್ದರೆ ಮತ್ತೇನು?

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ ಇಂದಿರಾ ಗಾಂಧಿ ಆಹಾರ ಸೇವಿಸುತ್ತಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಇಂದಿರಾ ಗಾಂಧಿ ಮೀನು ತಿನ್ನುತ್ತಿದ್ದಾರೆ ಎಂದು ಪ್ರತಿಪಾದಿಸಿ ಫೋಟೊವನ್ನು ಹಂಚಿಕೊಳ್ಳುತ್ತಿದ್ದಾರೆ.

1 ವ್ಯಕ್ತಿ ನ ಚಿತ್ರವಾಗಿರಬಹುದು

ಫೋಟೋವನ್ನು ಹಂಚಿಕೊಂಡ ಅನೇಕ ಬಳಕೆದಾರರು, ಬ್ರಾಹ್ಮಣ ರಾಹುಲ್ ಗಾಂಧಿ ಅವರ ಅಜ್ಜಿ ಸಮುದ್ರದ ಮೀನಿನ ಊಟವನ್ನು ಆನಂದಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಸ್‌ನಲ್ಲಿ ಸರ್ಚ್ ಮಾಡಿದಾಗ, 25 ಸೆಪ್ಟೆಂಬರ್ 2017 ರಂದು ದಿ ಹಿಂದೂ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಅದೇ ಚಿತ್ರ ಲಭ್ಯವಾಯಿತು.

ಇಂದಿರಾಗಾಂಧಿ ಜೋಳದ ತೆನೆಯನ್ನು ತಿನ್ನುತ್ತಿರುವ ಈ ಫೋಟೊವನ್ನು ತೆಗೆದ ಛಾಯಾಗ್ರಾಹಕ ಶ್ರೀಧರ್ ನಾಯ್ಡು ಎಂಬುದನ್ನೂ ಉಲ್ಲೇಖಿಸಲಾಗಿದೆ.

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕ ನಿರ್ದೇಶಕ ಶ್ರೀಧರ್ ನಾಯ್ಡು ಅವರು ಹೈದರಾಬಾದ್‌ನ ಫತೇ ಮೈದಾನ ಕ್ಲಬ್‌ನಲ್ಲಿ ಈ ಚಿತ್ರವನ್ನು ತೆಗೆದಿದ್ದರು. ಶ್ರೀಧರ್ ನಾಯ್ಡು ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಈ ಇಲಾಖೆಯಲ್ಲಿ ಕೆಲಸ ಮಾಡಿದರು ಮತ್ತು ಅನೇಕ ರಾಜಕಾರಣಿಗಳ ಛಾಯಾಚಿತ್ರಗಳನ್ನು ತೆಗೆದಿದ್ದರು. ಇಂದಿರಾ ಗಾಂಧಿಯವರು ಜೋಳದ ತೆನೆಯನ್ನು ತಿನ್ನುತ್ತಿರುವ ಚಿತ್ರವು ಅವರ ಅತ್ಯಂತ ಮೆಚ್ಚುಗೆ ಪಡೆದ ವಿಶೇಷ ಛಾಯಾಚಿತ್ರವಾಗಿತ್ತು.

ವೈರಲ್ ಚಿತ್ರ ಮತ್ತು ಮೂಲ ಚಿತ್ರದ ನಡುವಿನ ಹೋಲಿಕೆಯನ್ನು ನೀವು ಕೆಳಗೆ ನೋಡಬಹುದು. ಇಂದಿರಾ ಗಾಂಧಿಯವರ ಈ ಚಿತ್ರವು ಫತೇ ಮೈದಾನ ಕ್ಲಬ್‌ನಲ್ಲಿ ಹುರಿದ ಜೋಳವನ್ನು ತಿನ್ನುತ್ತಿರುವ ಈ ಫೋಟೋವನ್ನು ಹಿರಿಯ ಛಾಯಾಗ್ರಾಹಕ ಶ್ರೀಧರ್ ನಾಯ್ಡು ತೆಗೆದಿದ್ದಾರೆ.

ಛಾಯಾಗ್ರಾಹಕ ಶ್ರೀಧರ್ ನಾಯ್ಡು ಅವರ ನಿಧನದ ಸುದ್ದಿಯನ್ನು ಸೆಪ್ಟೆಂಬರ್ 25, 2017 ರಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು.  ಈ ಸುದ್ದಿಯೊಂದಿಗೆ ಅವರು ತೆಗೆದ ಈ ಅಪರೂಪದ ಚಿತ್ರವನ್ನು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋದೊಂದಿಗೆ ಮಾಡಲಾಗುತ್ತಿರುವ ಪ್ರತಿಪಾದನೆ ತಪ್ಪಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೈದರಾಬಾದ್‌ನ ಫತೇ ಮೈದಾನ ಕ್ಲಬ್‌ನಲ್ಲಿ ಹುರಿದ ಜೋಳವನ್ನು ತಿನ್ನುತ್ತಿರುವ ಚಿತ್ರವನ್ನು, ಮೀನು ತಿನ್ನುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಒಂದು ವೇಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮೀನನ್ನೆ ತಿಂದಿದ್ದರೂ ಅದರಲ್ಲಿ ತಪ್ಪೇನಿದೆ? ಊಟ ತನ್ನಿಚ್ಚೆ ನೋಟ ಪರರ ಇಚ್ಚೆ ಎಂದು ಕೆಲವು ಸಾಮಾಜಿಕ ಮಾಧ್ಯಮಗಳ ಬಳೆದಾರರು ಪ್ರತಿಕ್ರಿಯಿಸಿದ್ದಾರೆ.

ಕೃಪೆ : ಫ್ಯಾಕ್ಟ್‌ ಕ್ರೆಸೆಂಡೋ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಜಸ್ಥಾನ ಕಾಂಗ್ರೆಸ್ ರ‍್ಯಾಲಿಯಲ್ಲಿ ಮೋದಿ ಪರ ಘೋಷಣೆ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights