ಎಚ್ ವಿಶ್ವನಾಥ್‌ಗೆ ಮಾನಸಿಕ ಗೊಂದಲ – ಎಚ್.ಸಿ ಮಹದೇವಪ್ಪ ವಾಗ್ದಾಳಿ

ಅನರ್ಹ ಶಾಸಕ ಎಚ್ ವಿಶ್ವನಾಥ್‌ಗೆ ಮಾನಸಿಕ ಗೊಂದಲತೆಯುಂಟಾಗಿದೆ. ವೈದ್ಯಕೀಯ ಭಾಷೆಯಲ್ಲಿ ಅದೊಂದು ಖಾಯಿಲೆ ಎಂದು ಹುಣಸೂರಿನ ಕಟ್ಟೆಮಳವಾಡಿಯಲ್ಲಿ ಮಾಜಿ ಸಚಿವ ಎಚ್.ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಅದನ್ನು ಡಿಲಿರೀಯಂ ಅಂತಾ ಕರೆಯುತ್ತಾರೆ. ಅದಕ್ಕಾಗಿ ಒಮ್ಮೆ ಸಿದ್ದರಾಮಯ್ಯ ಇಷ್ಟ ಆಗುತ್ತಾರೆ. ಮತ್ತೊಮ್ಮೆ ದೇವೇಗೌಡರ ಪೋಟೋ ಇಟ್ಟುಕೊಳ್ಳುತ್ತೇನೆ ಅಂತಾರೆ. ಸಿದ್ದರಾಮಯ್ಯ ಉತ್ತಮ ನಾಯಕ ಎಲ್ಲರಿಗೂ ಗೊತ್ತಿದೆ. ಆದರೆ ಈಗ ವಿಶ್ವನಾಥ್ ಹೇಳುತ್ತಿರುವುದು ಚುನಾವಣಾ ಗಿಮಿಕ್. ಅವರ ಸಮುದಾಯದ ಮತ ಸೆಳೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂದು  ಮಾಜಿ ಸಚಿವ ಎಚ್.ಸಿ ಮಹದೇವಪ್ಪ ವಾಗ್ದಾಳಿ ಮಾಡಿದ್ದಾರೆ.

ದಲಿತ ಸಿಎಂ ವಿಚಾರ :-

ಈಗ ಅದು ಮುಖ್ಯ ವಿಷಯವಲ್ಲ. ಈಗ ಬಿಜೆಪಿಯನ್ನು ಸೋಲಿಸುವುದು ನಮ್ಮ ಉದ್ದೇಶ. ಇಂತವರೇ ಸಿಎಂ ಆಗಬೇಕು ಆಗ ಮತ ಹಾಕುತ್ತೇವೆ ಅನ್ನೋದು ಸರಿಯಲ್ಲ. ಈ ರಾಜ್ಯಕ್ಕೆ ದಲಿತ ಸಿಎಂ ದೇಶಕ್ಕೆ ದಲಿತ ಪ್ರಧಾನಿ ಆಗಬೇಕು ಇದನ್ನು ಕೇಳುವುದರಲ್ಲಿ ಯಾವ ತಪ್ಪು ಇಲ್ಲ. ಆದರೆ ಈ ಪರಿಸ್ಥಿತಿಯಲ್ಲಿ ಅಲ್ಲ. ಸಂವಿಧಾನ ಉಳಿಸಿ ರಾಷ್ಟ್ರಮಟ್ಟದಲ್ಲಿ ಚಳುವಳಿ ನಡೆಸುವುದು ಮುಖ್ಯ ಎಂದು  ಹುಣಸೂರಿನಲ್ಲಿ ಮಹದೇವಪ್ಪ ಸ್ಪಷ್ಟಿಕರಣ ನೀಡಿದರು.

ಸ್ಪೀಕರ್ ಕೋರ್ಟ್ ಇವರನ್ನು ಅನರ್ಹಗೊಳಿಸಿದೆ. ಚುನಾವಣೆಯಲ್ಲಿ ಜನರು ಇವರನ್ನು ಅನರ್ಹಗೊಳಿಸುತ್ತಾರೆ. ಜನರೇ ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಹಣ ಅಧಿಕಾರಕ್ಕಾಗಿ ಮಾರಿಕೊಂಡಿದ್ದಾರೆ. ಗೆದ್ದ ಮೇಲೆ ನಮ್ಮ ಗ್ರಾಮಕ್ಕೆ ಬಂದಿಲ್ಲ ಅಂತಾ ಚರ್ಚೆ ಮಾಡುತ್ತಿದ್ದಾರೆ. ಬಿಜೆಪಿಯವರು ಈ 15 ಕ್ಷೇತ್ರದಲ್ಲಿ ಯಾರು ಇರಲಿಲ್ಲ. ಮುಂದೆಯೂ ಯಾರು ಇರುವುದಿಲ್ಲ ಎಂದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights