ಕಾಬೂಲ್ ನಲ್ಲಿನ ಸ್ಫೋಟದ ಹೊಣೆ ಹೊತ್ತ ಐಎಸ್ : ಆತ್ಮಾಹುತಿ ಬಾಂಬರ್‌ನ ಫೋಟೋ ಬಿಡುಗಡೆ!

ಕಾಬೂಲ್ ವಿಮಾನ ನಿಲ್ದಾಣದಲ್ಲಿನ ಸ್ಫೋಟದ ಹೊಣೆಯನ್ನು ಐಎಸ್ ಹೊತ್ತಿದ್ದು, ಆತ್ಮಾಹುತಿ ಬಾಂಬರ್‌ನ ಫೋಟೋ ಬಿಡುಗಡೆ ಮಾಡಲಾಗಿದೆ.

ಕಾಬೂಲ್‌ನಲ್ಲಿ ಗುರುವಾರ ಸಂಭವಿಸಿದ ನಾಲ್ಕು ಸ್ಫೋಟಗಳಲ್ಲಿ ಅಮೆರಿಕದ 13 ಯೋಧರು ಸೇರಿದಂತೆ 72 ಜನರು ಸಾವನ್ನಪ್ಪಿದ್ದಾರೆ. 143 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗುರುವಾರ ಸಂಜೆ ಕಿಕ್ಕಿರಿದ ಕಾಬೂಲ್ ವಿಮಾನ ನಿಲ್ದಾಣದ ಹೊರಗಿನಿಂದ ಎರಡು ಮತ್ತು ಹಿಂದಿನಿಂದ ಎರಡು ಸ್ಫೋಟಗಳು ಸಂಭವಿಸಿದೆ. ಕಾಬೂಲ್ ವಿಮಾನ ನಿಲ್ದಾಣದ ದಾಳಿಯಲ್ಲಿ ಹತ್ಯೆಯಾದವರಲ್ಲಿ 12 ನೌಕಾಪಡೆ ಮತ್ತು ನೌಕಾಪಡೆಯ ವೈದ್ಯ ಸೇರಿದಂತೆ 13 ಅಮೆರಿಕನ್ ಸೈನಿಕರು ಮತ್ತು 18 ಇತರ ಸೇನಾ ಸದಸ್ಯರು ಗಾಯಗೊಂಡಿದ್ದಾರೆ. ಆಫ್ಘನ್ನರನ್ನು ಸ್ಥಳಾಂತರಗೊಳಿಸುವುದನ್ನು ಸ್ಪೋಟದಿಂದಾಗಿ ಸ್ಥಗಿತಗೊಳಿಸಲಾಗಿದೆ.

ಕಾಬೂಲ್ ವಿಮಾನ ನಿಲ್ದಾಣದ ಹೊರಗಿನ ಅವಳಿ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (IS) ಹೊತ್ತುಕೊಂಡಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹೊಡೆದ ಆತ್ಮಾಹುತಿ ಬಾಂಬರ್‌ನ ಚಿತ್ರವನ್ನು ಸಹ ಸ್ಲಾಮಿಕ್ ಸ್ಟೇಟ್ ಬಿಡುಗಡೆ ಮಾಡಿದೆ.

Kabul Blast: ಇವನೇ ನೋಡಿ ಕಾಬೂಲ್ ಸೂಸೈಡ್​ ಬಾಂಬರ್​; ಹೊಣೆಹೊತ್ತ ISIS-Kಯಿಂದ ಅಬ್ದುಲ್ ರೆಹಮಾನ್ ಫೋಟೋ ರಿಲೀಸ್

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಎರಡು ನಿಮಿಷಗಳಲ್ಲಿ ಎರಡು ಸ್ಫೋಟಗಳು ಸಂಭವಿಸಿದರೆ. ಇನ್ನೂ ಎರಡು ಸ್ಫೋಟಗಳು ಗಂಟೆಗಳ ನಂತರ ವರದಿಗಿವೆ.

ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಅವಳಿ ಸ್ಫೋಟಗಳು ವರದಿಯಾದ ಕೆಲವು ಗಂಟೆಗಳ ನಂತರ, ಇಸ್ಲಾಮಿಕ್ ಸ್ಟೇಟ್ ಆಫ್ಘನ್ ಅಂಗಸಂಸ್ಥೆ-ಐಸಿಸ್-ಖೊರಾಸನ್ (ಐಸಿಸ್-ಕೆ)-ದಾಳಿಯ ಹೊಣೆ ಹೊತ್ತುಕೊಂಡಿದೆ. ಐಎಸ್ ದಾಳಿಗೆ ಯುಎಸ್ ಎಚ್ಚರಿಕೆ ನೀಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights