ಅಮೆರಿಕಾದಲ್ಲಿ ಮೋದಿ, ಅಮಿತ್ ಶಾ ವಿರುದ್ದ 100 ಮಿಲಿಯನ್ ಡಾಲರ್ ಪ್ರಕರಣ; ವಜಾಗೊಳಿಸಿದ ಕೋರ್ಟ್‌

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಅಮೆರಿಕಾದಲ್ಲಿ ದಾಖಲಾಗಿದ್ದ 100 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಕಾನೂನು ಪ್ರಕರಣವನ್ನು ಯುಎಸ್‌ ಕೋರ್ಟ್‌ ವಜಾಗೊಳಿಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ, ಅಮೆರಿಕಾದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮಕ್ಕೂ ಮುನ್ನ, 2019ರ ಸೆಪ್ಟೆಂಬರ್ 19 ರಂದು ಅಮೆರಿಕಾದ ಟೆಕ್ಸಾಸ್‌ನಲ್ಲಿ  ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮತ್ತು ಲೆಫ್ಟಿನೆಂಟ್ ಜೆನರಲ್ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಅವರಿಂದ 100 ಮಿಲಿಯಲ್‌ ಅಮೆರಿಕಾನ್ ಡಾಲರ್‌ ಮೊತ್ತದ ಪರಿಹಾರ ಕೋರಿ ಕಾಶ್ಮೀರ ಖಲಿಸ್ತಾನ್ ರೆಫರೆಂಡಮ್ ಫ್ರಂಟ್ ಅರ್ಜಿ ಸಲ್ಲಿಸಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಅಧಿಕಾರವನ್ನು ರದ್ದು ಮಾಡಿದ್ದಲ್ಲದೇ ಜಮ್ಮು ಮತ್ತು ಕಾಶ್ಮೀರವನ್ನು ಇಬ್ಭಾಗ ಮಾಡಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿಸಿದ ಕೇಂದ್ರ ಸರ್ಕಾರದ ನಡೆಯನ್ನು ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

ಅರ್ಜಿಯನ್ನು ಸ್ವೀಕರಿದ್ದ ಕೋರ್ಟ್‌, ವಿಚಾರಣೆಗಾಗಿ ಎರಡು ಬಾರಿ ದಿನಾಂಕ ನಿಗಧಿ ಮಾಡಿತ್ತು. ಆದರೆ, ಎರಡೂ ಬಾರಿಯೂ ಅರ್ಜಿದಾರರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅರ್ಜಿಯನ್ನುಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ದಕ್ಷಿಣ ಜಿಲ್ಲೆಯ ಟೆಕ್ಸಾಸ್ ನ್ಯಾಯಾಧೀಶ ಫ್ರಾನ್ಸಿಸ್ ಎಚ್ ಸ್ಟೇಸಿ ಅವರು  ವಜಾಗೊಳಿಸಿದ್ದಾರೆ.

ಈ ಅರ್ಜಿಯ ವಿಚಾರಣೆ ನಡೆಸಿದ ಅಮೆರಿಕ ನ್ಯಾಯಾಲಯ, ಅರ್ಜಿ ಹಾಕಿದನ್ನು ಬಿಟ್ಟರೆ ಅರ್ಜಿದಾರರು ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: ಗೋವಾ ಚುನಾವಣೆ: ಭರ್ಜರಿ ಗೆಲವು ಸಾಧಿಸಿದ ಬಿಜೆಪಿ; ಖಾತೆ ತೆರೆದ ಎಎಪಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights