ಫ್ಯಾಕ್ಟ್‌ಚೆಕ್ : ಭಾರತದ ಮೋಸ್ಟ್‌ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದನೇ?

ಪಾಕಿಸ್ತಾನದಲ್ಲಿ  ಸ್ಫೋಟವೊಂದು ಸಂಭವಿಸಿದ್ದು, ಉಗ್ರಗಾಮಿ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ನಾಯಕ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ ಹೊಸ ವರ್ಷದ ಆಚರಣೆಯಲ್ಲಿ ಅಪರಿಚಿತ ವ್ಯಕ್ತಿ ಸಿಡಿಸಿದ ಬಾಂಬ್‌ಗೆ ಮೃತಪಟ್ಟಿದ್ದಾನೆ. ಅವನಿಗೆ ಜನ್ನತ್ ಸಿಗಲಿ… ಎಂದು ಹೇಳಲಾಗಿದೆ.

ಟೈಮ್ಸ್ ಅಲ್ಜಿಬ್ರಾ ಹೆಸರಿನ ಎಕ್ಸ್ (ಟ್ವಿಟ್ಟರ್) ಹ್ಯಾಂಡಲ್ ನಲ್ಲಿ ಬಾಂಬ್ ಸ್ಫೋಟದ ಕೆಲವು ಚಿತ್ರಗಳು ಮತ್ತು ವೀಡಿಯೊವನ್ನು ಹಂಚಿಕೊಂಡಿದೆ ಮತ್ತು ಪಾಕಿಸ್ತಾನದ ಬಹವಾಲ್‌ಪುರ ಮಸೀದಿಯಿಂದ ಹಿಂದಿರುಗುತ್ತಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ ಬೆಳಿಗ್ಗೆ 5 ಗಂಟೆಗೆ ಬಾಂಬ್ ಸ್ಫೋಟದಲ್ಲಿ ಸಾವನಪ್ಪಿದ್ದಾನೆ ಎಂದು ಹೇಳಲಾಗಿದೆ.

 

 

 

 

 

 

 

 

 

@SouleFacts ಎಂಬ ಟ್ವಿಟರ್ ಹ್ಯಾಂಡಲ್ ನಲ್ಲೂ ವೈರಲ್ ವೀಡಿಯೊ ಮತ್ತು ಸ್ಟ್ರೆಚರ್ ಮೇಲೆ ಮಲಗಿರುವ ವ್ಯಕ್ತಿಯ ಚಿತ್ರವನ್ನು ಹಂಚಿಕೊಂಡಿದ್ದು, ಭಯೋತ್ಪಾದಕ ಮಸೂದ್ ಅಜರ್ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಿಕೊಂಡಿದೆ.

https://twitter.com/SouleFacts/status/1741767777009152058

ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, @OSINTUpdates ಎಂಬ ಹ್ಯಾಂಡಲ್ನ ಎಕ್ಸ್ ಪೋಸ್ಟ್ ವೊಂದು ಲಭ್ಯವಾಗಿದ್ದು, ಅದರಲ್ಲಿ ಉಲ್ಲೇಖಿಸಿರುವ ಪ್ರಕಾರ, ನವೆಂಬರ್ 3 ರಂದು ಡೇರಾ ಇಸ್ಮಾಯಿಲ್ ಖಾನ್ನಲ್ಲಿ ನಡೆದ ಘಟನೆ ಇದಾಗಿದೆ ಎಂದು ಹೇಳಿದೆ.

ವೈರಲ್ ಪೋಸ್ಟ್‌ನಲ್ಲಿ ಒಂದು ವಿಡಿಯೋ ಮ್ತು ಎರಡು ಚಿತ್ರಗಳನ್ನು ಹಂಚಿಕೊಳ್ಳಲಾಗಿದ್ದು ಅದರಲ್ಲಿ ವ್ಯಕ್ತಿಯೊಬ್ಬ ಆಸ್ಪತ್ರೆಯ ಸ್ಟ್ರೆಚ್‌ ಮೇಲೆ ಮಲಗಿರುವುದನ್ನು ಕಾಣಬಹುದು.

ಚಿತ್ರ 1 :

ಟೈಮ್ಸ್ ಆಲ್ಜಿಬ್ರಾ ಟ್ವೀಟ್‌ನಲ್ಲಿ ಬಳಸಿದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಆಡಿದಾಗ, 2019 ರ ಸೆಪ್ಟೆಂಬರ್ 15 ರಂದು ಪಾಕಿಸ್ತಾನದ ಸುದ್ದಿ ವೆಬ್‌ಸೈಟ್‌ನಲ್ಲಿ ಮ್ಯಾಂಗಲ್ಡ್ ಕಾರಿನ ಚಿತ್ರವನ್ನು ಪ್ರಕಟಿಸಿರುವುದು ಕಂಡುಬಂದಿದೆ. ಅದೇ ಫೋಟೋವನ್ನು ಹಲವು ವೆಬ್‌ಸೈಟ್‌ಗಳು ಬಳಸಲಾಗಿದ್ದು, ಈ ಚಿತ್ರವು ಮೂರು ವರ್ಷಕ್ಕಿಂತಲೂ ಹಳೆಯದು ಎಂಬುದು ಸ್ಪಷ್ಟವಾಗಿದೆ.

ಚಿತ್ರ 2 :

ಟೈಮ್ಸ್ ಆಲ್ಜಿಬ್ರಾದ ಟ್ವೀಟ್‌ನಿಂದ ಎರಡನೇ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅದನ್ನು ಏಪ್ರಿಲ್ 21, 2021 ರಂದು ರಾಯಿಟರ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವರದಿಯ ಪ್ರಕಾರ, ಕ್ವೆಟ್ಟಾದಲ್ಲಿನ ಐಷಾರಾಮಿ ಹೋಟೆಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಬಾಂಬ್ ಸ್ಫೋಟಗೊಂಡಿದೆ. ಪಾಕಿಸ್ತಾನದಲ್ಲಿ ನಾಲ್ಕು ಜನರು ಸಾವನ್ನಪ್ಪಿ, 11 ಜನರು ಗಾಯಗೊಂಡರು ಎಂದು ಉಲ್ಲೇಖಿಸಲಾಗಿದೆ. ಈ ಚಿತ್ರವು ಎರಡು ವರ್ಷಕ್ಕಿಂತ ಹಳೆಯದು ಎಂದು ಇದು ಖಚಿತಪಡಿಸುತ್ತದೆ.

ಚಿತ್ರ 3 :

ಡಿಸೆಂಬರ್ 27, 2023 ರಂದು ಪಾಕಿಸ್ತಾನಿ ಸುದ್ದಿ ವೆಬ್‌ಸೈಟ್ ‘ದಿ ಖೊರಾಸನ್ ಡೈರಿ’ ಮಾಡಿದ ಟ್ವೀಟ್‌ನಲ್ಲಿ ಅದೇ ಚಿತ್ರ ಲಭ್ಯವಾಗಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದು,  ಮೌಲಾನಾ ಮುಹಮ್ಮದ್ ಅಮೀನ್ ಪರಿಸ್ಥಿತಿ ಚಿಂತಾಜನಕನವಾಗಿದೆ ಎಂದು ವರದಿಯಗಿದೆ. ಪೊಲೀಸರ ಪ್ರಕಾರ, ಅಮೀನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜೆಇಎಂ ಮುಖ್ಯಸ್ಥ, ಉಗ್ರ ಮಸೂದ್ ಅಜರ್ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿ ಸ್ಫೋಟ ನಡೆಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ವೈರಲ್ ವೀಡಿಯೋ ವಾಸ್ತವವಾಗಿ ನವೆಂಬರ್ 3, 2023 ಡೇರಾ ಇಸ್ಮಾಯಿಲ್ ಖಾನ್ನಲ್ಲಿ ನಡೆದ ಸ್ಫೋಟದ ಸಿಸಿಟಿವಿ ದೃಶ್ಯಾವಳಿ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಫೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡಗಳನ್ನು ನಿರ್ಮಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights