ಫ್ಯಾಕ್ಟ್‌ಚೆಕ್ : ಡಿಎಂಕೆ ಸಂಸದೆ ಕನಿಮೋಳಿ ಕುಟುಂಬ ಅಯೋಧ್ಯೆ ರಾಮಮಂದಿರಕ್ಕೆ 613 ಕೆಜಿ ತೂಕದ ಗಂಟೆಯನ್ನು ಸಮರ್ಪಿಸಿದೆಯೇ?

ಅಯೋಧ್ಯೆಯ ರಾಮಮಂದಿರಕ್ಕೆ 613 ಕೆ.ಜಿ ತೂಕದ ಗಂಟೆಯನ್ನು ತಮಿಳುನಾಡು ಸಂಸದೆ ಕನಿಮೋಳಿ ಅವರ ಕುಟುಂಬ ಸದಸ್ಯರು ಕಳುಹಿಸಿದ್ದಾರೆ, ಈ ಗಂಟೆಯ ವಿಶೇಷತೆಯೆಂದರೆ  ಅದನ್ನು ಬಾರಿಸಿದಾಗ, ಓಂಕಾರ ಹೊರಹೊಮ್ಮುತ್ತದೆ ಎಂಬ ಸುದ್ದಿಯನ್ನು ಜೀ ನ್ಯೂಸ್ ವರದಿ ಮಾಡಿದೆ.

ತಮಿಳುನಾಡಿನ ತೂತುಕುಡಿ ಲೋಕಸಭಾ ಸದಸ್ಯೆ ಮತ್ತು ಡಿಎಂಕೆ ಸಹ ಕಾರ್ಯದರ್ಶಿ ಕನಿಮೋಳಿ ಅವರು  ತಮಿಳುನಾಡಿನ ರಾಮೇಶ್ವರಂನಿಂದ  613 ಕೆಜಿ ತೂಕದ ಗಂಟೆಯನ್ನು ಅಯೋಧ್ಯೆಯ ರಾಮ ಮಂದಿರ ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ  ಎಂಬ ಹೇಳಿಕೆಯೊಂದಿಗೆ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ.

ಕಳೆದ ಸೆಪ್ಟಂಬರ್‌ನಲ್ಲಿ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸನಾತನ ಸಂಸ್ಥೆ ವಿರುದ್ದ ಹೇಳಿಕೆ ನೀಡಿದ್ದರು. ಹೌದು, ಕೆಲವು ತಿಂಗಳ  ಸನಾತನ ಧರ್ಮವನ್ನು ‘ಡೆಂಗ್ಯೂ’ ಮತ್ತು ‘ಮಲೇರಿಯಾ’ಕ್ಕೆ ಹೋಲಿಸಿದ್ದರು.  ಉದಯನಿಧಿ ಅವರು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ ಮತ್ತು ಕರುಣಾನಿಧಿ ಅವರ ಮೊಮ್ಮಗ. ಅಲ್ಲದೆ ಈ ಹೇಳಿಕೆ ಭಾರೀ ವಿವಾದ ಉಂಟು  ಮಾಡಿದ ಮೇಲೆಯೂ ತನ್ನ ಹೇಳಿಕೆ ಬಗ್ಗೆ ಕ್ಷಮೆ ಯಾಚಿಸುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದಿದ್ದರು.

ಡಿಎಂಕೆ ಸಂಸದೆ ಕನಿಮೊಳಿ ಕೂಡ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಸಹೋದರಿ. ಈಗ ಅವರು ರಾಮ ಮಂದಿರಕ್ಕೆ 613 ಕೆ.ಜಿ ತೂಕದ ಗಂಟೆಯನ್ನು ಸಮರ್ಪಿಸಿದ್ದಾರೆ ಎಂದು ಸುದ್ದಿ ಪ್ರಸಾರವಾಗುತ್ತಿರುವುದಕ್ಕೆ ಹಲವರು ಅನುಮಾನ ವ್ಯಕ್ತಪಡಿಸಿ ಈ ಸುದ್ದಿ ನಿಜವೇ ಎಂದು  ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸುದ್ದಿ ತಾಣಗಳು ಮತ್ತು ಸಾಮಾಜಿಕ ಮಧ್ಯಮಗಳಲ್ಲಿ ಪ್ರಸಾರವಾದ  613 ಕೆಜಿ.  ಈ ಗಂಟೆಯನ್ನು ತಮಿಳುನಾಡು ಸಂಸದೆ ಕನಿಮೋಳಿ ಅವರ ಕುಟುಂಬ ಸದಸ್ಯರು ರಾಮ ಮಂದಿರಕ್ಕೆ ಸಮರ್ಪಿಸಿದ್ದಾರೆ ಎಂದು ಹೇಳಲಾಗಿರುವ ಸುದ್ದಿ ನಿಜವೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ ಅಕ್ಟೋಬರ್ 07, 2020 ರಂದು ಎಎನ್ಐ ನ್ಯೂಸ್   “’Jai Sri Ram’ embossed bell weighing 613 kgs brought to Ram Temple in Ayodhya” ಎಂಬ ಸುದ್ದಿಯನ್ನು ಪ್ರಕಟಿಸಿರುವುದು ಕಂಡುಬಂದಿದೆ.

ಎಎನ್‌ಐ ವರದಿಯ ಪ್ರಕಾರ, ಚೆನ್ನೈ ಮೂಲದ ಲೀಗಲ್ ರೈಟ್ಸ್ ಕೌನ್ಸಿಲ್ ಎಂಬ ಸಂಸ್ಥೆಯು ‘ರಾಮ ರಥ ಯಾತ್ರೆ’ ಹೆಸರಿನಲ್ಲಿ ರಾಮೇಶ್ವರಂನಿಂದ ಅಯೋಧ್ಯೆಗೆ ಮೆರವಣಿಗೆಯಲ್ಲಿ 613 ಕೆಜಿ ತೂಕದ ಗಂಟೆಯನ್ನು ತೆಗೆದುಕೊಂಡು ಹೋಗಿತ್ತು ಎಂದು ವರದಿಯಲ್ಲು ಉಲ್ಲೇಖಿಸಲಾಗಿದೆ.

ಸೆಪ್ಟೆಂಬರ್ 17 ರಿಂದ ಪ್ರಾರಂಭವಾಗಿದ ಈ ಯಾತ್ರೆಯು ಅಕ್ಟೋಬರ್ 2 ರಂದು ಅಂತ್ಯಗೊಂಡಿತ್ತು. ಇದರಲ್ಲಿ ಕಾನೂನು ಹಕ್ಕುಗಳ ಮಂಡಳಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜಲಕ್ಷ್ಮಿ ಮಂಥಾ ಅವರೊಂದಿಗಿನ ಸಂದರ್ಶನವೂ ಸೇರಿದೆ.

29 ಡಿಸೆಂಬರ್ 2023 ರಂದು ಇಂಡಿಯಾ ಟುಡೇಯ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಕಟವಾದ ವಿಡಿಯೋ ವರದಿ ಲಭ್ಯವಾಗಿದ್ದು ಈ ವಿಡಿಯೋದಲ್ಲಿ ಗಂಟೆಯ ಮೇಲೆ ಬರೆದಿರುವ ಹೆಸರುಗಳನ್ನು ಸ್ಪಷ್ಟವಾಗಿ ನೋಡಬಹುದು. ಇದರಲ್ಲಿ ಎಸ್‌ಪಿಇ ಗ್ರೂಪ್‌, ಪಿ.ಕೆ. ಕನಿಮೋಳಿ, ಪಿ.ಲೋಕೇಶ್, ಕುಮಾರನ್‌, ವಂಗಮ್ ಅಮರನಾಥ್, ವೆಂಕಟೇಶ್ ನಾಗಮಣಿ ಎಂಬ ಹೆಸರುಗಳು ಇವೆ.

ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ  ಎಸ್ ಪಿಇ ಗ್ರೂಪ್ ಬಗ್ಗೆ ಸರ್ಚ್ ಮಾಡಿದಾಗ, ಎಸ್ ಪಿಇ ಗ್ರೂಪ್ಗೆ ಸಂಬಂಧಿಸಿದ ಎಸ್ ಪಿಇ ಗೋಲ್ಡ್ ಎಂಬ ಕಂಪನಿಯ ವೆಬ್ ಸೈಟ್ ಲಭ್ಯವಾಗಿದೆ. ಈ ವೆಬ್‌ಸೈಟ್‌ನಲ್ಲಿ ನೀಡಲಾದ ಕಂಪನಿಯ ನಿರ್ದೇಶಕರ ಹೆಸರುಗಳಲ್ಲಿ, ಪಿ ಲೋಕೇಶ್ ಅವರ ಹೆಸರು ಕೂಡ ಇದೆ.  .

ಮತ್ತಷ್ಟು ಮಾಹಿತಿಗಾಗಿ ಎಸ್ ಪಿಇ ಗ್ರೂಪ್ ಅನ್ನು ಸಂಪರ್ಕಿಸಿದಾಗ, ಅದರ ನಿರ್ದೇಶಕ ಪಿ ಲೋಕೇಶ್ ಅವರು “ಅವರ ಕುಟುಂಬ ಮತ್ತು ಕಂಪನಿಯ ಪರವಾಗಿ ಈ ಗಂಟೆಯನ್ನು ಸಮರ್ಪಿಸಲಾಗಿದೆ. ಇದಕ್ಕೂ ಡಿಎಂಕೆ ಸಂಸದೆ ಕನಿಮೋಳಿ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಯೋಧ್ಯೆ ರಾಮಮಂದಿರಕ್ಕೆ ಇನ್ನೂ ಹಲವು ಗಂಟೆಗಳು ಬರುತ್ತಿದ್ದು ಅದರಲ್ಲಿ ಯಾವುದಾದರನ್ನು ಕನಿಮೋಳಿ ಕುಟುಂಬ ನೀಡಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು, ಅವರ ಕಚೇರಿಯನ್ನೂ ಸಂಪರ್ಕಿಸಿ, ವೈರಲ್‌ ಆಗುತ್ತಿರುವ ಸುದ್ದಿಯ ಬಗ್ಗೆ ಕೇಳಿದಾಗ, ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕನಿಮೋಳಿ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ 613 ಕೆಜಿ ತೂಕದ ಗಂಟೆ ಅರ್ಪಿಸಿದ್ದಾರೆ ಎಂಬ ಮಾಧ್ಯಮಗಳ ವರದಿ ಸುಳ್ಳು. ವಾಸ್ತವವಾಗಿ 613 ಕೆಜಿ ತೂಕದ ಗಂಟೆಯನ್ನು ಚೆನ್ನೈ ಮೂಲದ ಸಂಸ್ಥೆಯಾದ ಲೀಗಲ್ ರೈಟ್ಸ್ ಕೌನ್ಸಿಲ್ ಈ ಗಂಟೆಯನ್ನು ಸಮರ್ಪಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಯೂಟರ್ನ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಮ ಮಂದಿರ ಉದ್ಘಾಟನೆಗೆ 25 ಸಾವಿರ ಹೋಮ ಕುಂಡಗಳನ್ನು ನಿರ್ಮಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights