FACT CHECK | ‘Go Back Modi’ ಎಂಬ ಪ್ಲೆಕಾರ್ಡ್ ಹಿಡಿದಿರುವ ಬಿಜೆಪಿ ಶಾಸಕಿಯ ಫೋಟೊದ ಅಸಲೀಯತ್ತೇನು ಗೊತ್ತೆ?

ಪ್ರಧಾನಿ ಮೋದಿಯವರು ಕನ್ಯಾಕುಮಾರಿಯಲ್ಲಿ ಮೇ 30ರಿಂದ ಮೂರು ದಿನಗಳ ಕಾಲ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ  ಧ್ಯಾನಕ್ಕೆ ಕುಳಿತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ತಮಿಳುನಾಡು ಕಾಂಗ್ರೆಸ್ ಸಮಿತಿ, ಇದು ಬಿಜೆಪಿ ಮತಗಳನ್ನು ಸೆಳೆಯುವ ಪ್ರಯತ್ನವಾಗಿದೆ ಎಂದು ಮದ್ರಾಸ್ ಹೈಕೋರ್ಟ್‌ ಮೆಟ್ಟಿಲೇರಿತ್ತು. ಡಿಎಂಕೆ ವಕೀಲರೊಬ್ಬರು ಚೆನ್ನೈನ ಹಲವು ಭಾಗಗಳಲ್ಲಿ ಪ್ರತಿಭಟನೆಯಲ್ಲಿ “‘Go Back Modi’ ” ಪೋಸ್ಟರ್‌ಗಳನ್ನು ಹಾಕಿದರು.

ಇದೇ ವಿಚಾರ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು,Go Back Modi ಎಂಬ ಹ್ಯಾಶ್ ಟ್ಯಾಗ್‌ನೊಂದಿಗೆ, ಕೊಯಮತ್ತೂರಿನ ಆದಿಯೋಗಿ ಪ್ರತಿಮೆ ಎದುರು ಮಹಿಳೆಯೊಬ್ಬರು ಗೋ ಬ್ಯಾಕ್ ಮೋದಿ ಪೋಸ್ಟರ್ ಹಿಡಿದು ನಿಂತಿರುವ ಫೋಟೋ ವೈರಲ್ ಆಗುತ್ತಿದೆ. ಎಕ್ಸ್‌  ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಮಹಿಳೆಯೊಬ್ಬರು ಜಗ್ಗಿ ವಾಸು ಆಶ್ರಮದ ಮುಂದೆ ‘ಗೋ ಬ್ಯಾಕ್ ಮೋದಿ’ ಎಂಬ ಫಲಕದೊಂದಿಗೆ ನಿಂತಿರುವುದು ಮನೋಹರವಾಗಿದೆ ಎಂದು ಬರೆದುಕೊಂಡಿದ್ದಾರೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಪೋಸ್ಟ್‌ಅನ್ನು ಹಂಚಿಕೊಂಡಿರುವುದಲ್ಲಿ ಇಲ್ಲಿ ನೋಡಬಹುದು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  24 ಅಕ್ಟೋಬರ್ 2021 ರಂದು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ಮತ್ತು ತಮಿಳುನಾಡಿನ ವಿಧಾನಸಭೆಯ ಸದಸ್ಯೆ ವನತಿ ಶ್ರೀನಿವಾಸನ್ ಮಾಡಿದ ತಮ್ಮ X ಮೂಲಕ ಮಾಡಿದ ಪೋಸ್ಟ್‌ ಲಭ್ಯವಾಯಿತು.

ಲಭ್ಯವಾದ ಪೋಸ್ಟ್‌ನಲ್ಲಿ ವೈರಲ್ ಫೋಟೋದ ಮೂಲ ಆವೃತ್ತಿ ಕಂಡುಬಂದಿದ್ದು, ಪೋಸ್ಟ್‌ನಲ್ಲಿ ವನತಿ ಶ್ರೀನಿವಾಸನ್ ಕೋವಿಡ್‌ ಸಂದರ್ಭದಲ್ಲಿ ವ್ಯಾಕ್ಸಿನೇಷನ್‌ ಅಭಿಯಾನದ 100 ಕೋಟಿ ಜನ ವ್ಯಾಕ್ಸಿನ್‌ ಪಡೆದ ಸೂಚಕವಾಗಿ ಫಲಕ ಹಿಡಿದು ಪ್ರಧಾನಿ ಮೋದಿಯನ್ನು ಅಭಿನಂದಿಸುತ್ತಿರುವುದನ್ನು ಕಾಣಬಹುದು.

100 ಕೋಟಿ ವ್ಯಾಕ್ಸಿನೇಷನ್‌ನೊಂದಿಗೆ ಭಾರತ ಇತಿಹಾಸ ಸೃಷ್ಟಿಸುತ್ತದೆ, ಧನ್ಯವಾದಗಳು ಮೋದಿ ಜೀ” ಎಂದು ಬರೆಯಲಾಗಿತ್ತು ಎಂಬ ಫಲಕವನ್ನಿಡಿದು ಪ್ರಧಾನಿ ಮೋದಿಗೆ ಅಭಿನಂದಿಸುತ್ತಿದ್ದಾರೆ. ಪೋಸ್ಟ್‌ನಲ್ಲಿ ಅಂತಹುದೇ ಪ್ಲೆಕಾರ್ಡ್‌ಗಳನ್ನು ಹಿಡಿದಿರುವ ಇತರ ರೀತಿಯ ಫೋಟೋಗಳೂ ಇವೆ.

 

ವೈರಲ್ ಫೋಟೋ ಮತ್ತು ಮೂಲ ಫೋಟೋದ ಹೋಲಿಕೆಯನ್ನು ನೋಡಬಹುದು.
ವೈರಲ್ ಫೋಟೋ ಮತ್ತು ಮೂಲ ಫೋಟೋದ ಹೋಲಿಕೆಯನ್ನು ನೋಡಬಹುದು.

2021 ಜನವರಿಯಲ್ಲಿ  ಕೋವಿಡ್ -19 ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದ ಸರ್ಕಾರ ಸುಮಾರು ಒಂಬತ್ತು ತಿಂಗಳ ನಂತರ, ಅಕ್ಟೋಬರ್ 21, 2021 ರ ಹೊತ್ತಿಗೆ ಒಂದು ಬಿಲಿಯನ್ ಕೋವಿಡ್ -19 ಲಸಿಕೆಗಳನ್ನು (100 ಕೋಟಿ) ನೀಡಿತು. ಸರ್ಕಾರವು ಈ ಮೈಲಿಗಲ್ಲನ್ನು ಅದ್ಧೂರಿ ಕಾರ್ಯಕ್ರಮಗಳೊಂದಿಗೆ ಆಚರಿಸಿತು. ಹೀಗಾಗಿ, ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಅವರು ಪ್ಲೆಕಾರ್ಡ್ ಹಿಡಿದಿರುವ ಹಳೆಯ ಫೋಟೋವನ್ನು ಡಿಜಿಟಲ್ ಎಡಿಟ್ ಮಾಡಿ “ಗೋ ಬ್ಯಾಕ್ ಮೋದಿ” ಎಂದು ಬರೆಯಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿಯವರು ಕನ್ಯಾಕುಮಾರಿಯಲ್ಲಿ 3 ದಿನಗಳ ಕಾಲ ಧ್ಯಾನಕ್ಕೆ ಕುಳಿತಿದ್ದ ಕ್ರಮವನ್ನು ಟೀಕಿಸಿದ್ದ ಸಂದರ್ಭದಲ್ಲಿ ಗೋ ಬ್ಯಾಕ್ ಮೋದಿ ಎಂಬ ಅಭಿಯಾನವನ್ನು ತಮಿಳುನಾಡಿನಲ್ಲಿ  ಪ್ರಾರಂಭಿಸಲಾಗಿತ್ತು ಎಂಬುದು ನಿಜ. ಆದರೆ ವೈರಲ್ ಫೋಟೋದಲ್ಲಿ ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ 2021ರಲ್ಲಿ ಪ್ರಧಾನಿ ಮೋದಿಗೆ ಅಭಿನಂಧಿಸಿ  ಹಿಡಿದಿರುವ ಪ್ಲೆಕಾರ್ಡ್ ಅನ್ನು ಡಿಜಿಟಲ್ ಎಡಿಟ್ ಮಾಡಿ “ಗೋ ಬ್ಯಾಕ್ ಮೋದಿ” ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸಾವರ್ಕರ್ ಬ್ರಿಟಿಷರ ಬೂಟು ನೆಕ್ಕುತ್ತಿದ್ದರು ಎಂದು ಹೇಳಿದ್ರಾ ಅಣ್ಣಾಮಲೈ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights