FACT CHECK | ಸಾವರ್ಕರ್ ಬ್ರಿಟಿಷರ ಬೂಟು ನೆಕ್ಕುತ್ತಿದ್ದರು ಎಂದು ಹೇಳಿದ್ರಾ ಅಣ್ಣಾಮಲೈ

ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಸಾವರ್ಕರ್ ಕುರಿತಾದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

‘ಸಾವರ್ಕರ್ ಅವರು ಬ್ರಿಟಿಷರ ಬೂಟು ನೆಕ್ಕುತ್ತಿದ್ದರು ಎಂದು ಸಾಮಾನ್ಯವಾಗಿ ಅವರ ಬಗ್ಗೆ ಹೇಳಲಾಗುತ್ತದೆ’  ಎಂದು  ಅಣ್ಣಾಮಲೈ ಈ ವಿಡಿಯೋದಲ್ಲಿ ಹೇಳಿರುವುದನ್ನು ಕೇಳಬಹುದು. ವೈರಲ್ ವಿಡಿಯೋ 11 ಸೆಕೆಂಡುಗಳಿದ್ದು ಅಣ್ಣಾಮಲೈ ಹೇಳಿಕೆಯ ನಂತರ ನಟ ಮೋಹನ್ ಲಾಲ್ ಅಭಿನಯದ ಕಲಾಪಾನಿ ಚಿತ್ರದ ಕ್ಲಿಪ್ ಪ್ರಸಾರವಾಗುತ್ತದೆ ಅದರಲ್ಲಿ ಮೋಹನ್ ಲಾಲ್ ಬ್ರಿಟಿಷ್ ಅಧಿಕಾರಿಯ ಬೂಟು ನೆಕ್ಕುವ ದೃಶ್ಯವಿದೆ. ಇದನ್ನೆ ಅಣ್ಣಾಮಲೈ ಸಾವರ್ಕರ್ ಕುರಿತು ಹೇಳಲಾಗಿದೆ ಎಂದು ಸಮೀಕರಿಸಿ ಹಂಚಿಕೊಳ್ಳಲಾಗಿದೆ.

fact anna body 1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಅಣ್ಣಾಮಲೈ ಅವರು ಬಿಜೆಪಿ ಸೇರುವ ಮೊದಲು ನೀಡಿದ ಹೇಳಿಕೆ ಎಂದು ಎಕ್ಸ್‌ ಖಾತೆ ಬಳಕೆದಾರರು ಬರೆದುಕೊಂಡಿದ್ದರೆ ಮತ್ತೊಬ್ಬ ಬಳಕೆದಾರ ‘ಸಾವರ್ಕರ್‌ ಬಗ್ಗೆ ಕುರಿ ಮರಿ ಸತ್ಯ ಹೇಳುತ್ತಿದೆ’  ಎಂದಿದ್ದಾರೆ.  ಇಲ್ಲಿ ಮತ್ತು ಇಲ್ಲಿ ಲಿಂಕ್‌ಅನ್ನು ನೋಡಬಹುದು. ಹಾಗಿದ್ದರೆ ಅಣ್ಣಾಮಲೈ ನಿಜವಾಗಿಯೂ ಸಾವರ್ಕರ್ ಕುರಿತು ಈ ರೀತಿ ಹೇಳಿಕೆ ನೀಡಿದ್ದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಅಣ್ಣಾಮಲೈ ಸಾವರ್ಕರ್ ಬ್ರಿಟೀಷರ ಬೂಟು ನೆಕ್ಕುತ್ತಿದ್ದರು ಎಂಬ ವೈರಲ್ ಹೇಳಿಕೆ ಕುರಿತು ಸೂಕ್ತ ಕೀ ವರ್ಡ್‌ಗಳ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ ವಿಡಿಯೋದ ವಿಸ್ತೃತ ಆವೃತ್ತಿಯೊಂದು ಯೂಟ್ಯೂಬ್ ಚಾನಲ್‌ನಲ್ಲಿ ಲಭ್ಯವಾಗಿದೆ. ಈ ವಿಡಿಯೋಗೆ ‘ಶ್ರೀ ಅಣ್ಣಾಮಲೈ ಸುದ್ದಿ ಗೋಷ್ಠಿ / ಬಿಜೆಪಿ / ಸಾವರ್ಕರ್ ಪುಸ್ತಕ ಪ್ರಕಟಣೆ’ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 2021ರ ಅಕ್ಟೋಬರ್ 2 ರಂದು ಪ್ರಕಟವಾಗಿತ್ತು.

ಈ ವಿಡಿಯೋದಲ್ಲಿ ಸಾವರ್ಕರ್ ಅವರ ಕುರಿತಾದ ಪುಸ್ತಕವೊಂದರ ಬಿಡುಗಡೆ ಕಾರ್ಯಕ್ರಮದ ಸನ್ನಿವೇಶ ಇದೆ. ಅಣ್ಣಾಮಲೈ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿ. ಪುಸ್ತಕದ ಪ್ರಕಾಶಕರಾದ ಪ್ರಭಾ ಖೈತಾನ್ ಫೌಂಡೇಷನ್‌ ವತಿಯಿಂದ ಕಾರ್ಯಕ್ರಮದ ಕುರಿತಾಗಿ ಮಾಹಿತಿ ಪ್ರಕಟವಾಗಿತ್ತು.

ಈ ಕಾರ್ಯಕ್ರಮದ ಯೂಟ್ಯೂಬ್ ವಿಡಿಯೋದ 6:28ನೇ ನಿಮಿಷದಲ್ಲಿ ಸಾವರ್ಕರ್ ಕುರಿತಾದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡುವ ಅಣ್ಣಾಮಲೈ, ‘ತಮಿಳುನಾಡಿನಲ್ಲಿ ಜನರು ವೀರ್ ಸಾವರ್ಕರ್ ಕುರಿತಾಗಿ ಮಾತನಾಡುವಾಗ ನೇರಾನೇರ ಅವರ ವಿರುದ್ಧ ಟೀಕೆ ಮಾಡುತ್ತಾರೆ. ಕ್ಷಮೆ ಕೇಳಿದ ವ್ಯಕ್ತಿ ಎನ್ನುತ್ತಾರೆ. ಆದರೆ ನಾನು ಆ ಪದಗಳನ್ನು ಬಳಸಲು ಇಷ್ಟ ಪಡೋದಿಲ್ಲ. ತಮಿಳುನಾಡಿನಲ್ಲಿ ಜನರು ಸಾಮಾನ್ಯವಾಗಿ ಸಾವರ್ಕರ್ ಅವರನ್ನು ಬ್ರಿಟಿಷರ ಬೂಟು ನೆಕ್ಕಿದ ವ್ಯಕ್ತಿ ಎನ್ನುತ್ತಾರೆ. ಆದರೆ, ಆ ವ್ಯಕ್ತಿಯ ಕುರಿತಾದ ಆ ರೀತಿಯ ಮಾತುಗಳು ನಿಜಕ್ಕೂ ಶೋಭೆ ತರುತ್ತದೆಯೇ?’ ಎಂದು ಅಣ್ಣಾಮಲೈ ಪ್ರಶ್ನೆ ಮಾಡುತ್ತಾರೆ.

ಅಣ್ಣಾಮಲೈ ಅವರ ಈ ಹೇಳಿಕೆ ಪೈಕಿ ‘ಬೂಟು ನೆಕ್ಕಿದವ’ ಎಂಬ ವಿಡಿಯೋ ತುಣುಕನ್ನು ಮಾತ್ರ ಕತ್ತರಿಸಿ ವೈರಲ್ ಮಾಡಲಾಗಿದೆ. ಅಣ್ಣಾಮಲೈ ಅವರು ಸಾವರ್ಕರ್ ಅವರನ್ನು ಟೀಕಿಸಿದರು ಎಂಬಂತೆ ಬಿಂಬಿಸಲಾಗಿದೆ. ಆದರೂ ಈ ಸುದ್ದಿಗೋಷ್ಠಿಯಲ್ಲಿ ಅಣ್ಣಾಮಲೈ ಅವರು ಸಾವರ್ಕರ್ ಅವರನ್ನು ಪ್ರಾಮಾಣಿಕ, ಮುಗ್ಧ ಎನ್ನುತ್ತಾರೆ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದೂ ಹೇಳುತ್ತಾರೆ.

ಇನ್ನು ಅಣ್ಣಾಮಲೈ ಅವರ ಈ ವಿಡಿಯೋವನ್ನು ಶೇರ್ ಮಾಡಿರುವ ನೆಟ್ಟಿಗರು, ಅಣ್ಣಾಮಲೈ ಬಿಜೆಪಿ ಸೇರುವ ಮುನ್ನ ಈ ಹೇಳಿಕೆ ನೀಡಿದ್ದರು ಎಂದು ಬಿಂಬಿಸಿದ್ದರು. ಆದರೆ, ಅಣ್ಣಾಮಲೈ ಬಿಜೆಪಿ ಸೇರಿದ್ದು 2020ರ ಆಗಸ್ಟ್‌ 25 ರಂದು. ಈ ಕಾರ್ಯಕ್ರಮದ ವಿಡಿಯೋ ಪ್ರಕಟಗೊಂಡಿದ್ದು 2021ರಲ್ಲಿ.. ಅಣ್ಣಾಮಲೈ ಅವರು ಬಿಜೆಪಿ ಸೇರಿದ 1 ವರ್ಷದ ಬಳಿಕ ನಡೆದ ಕಾರ್ಯಕ್ರಮ ಎಂಬುದು ಖಚಿವಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ, ಸಾವರ್ಕರ್ ಬ್ರಿಟಿಷರ ಬೂಟು ನೆಕ್ಕುತ್ತಿದ್ದರು ಎಂದು ತಮಿಳುನಾಡಿನ ಕೆಲವು ಜನ ಟೀಕಿಸುತ್ತಾರೆ, ಆದರೆ ಅದು ಸರಿಯಲ್ಲಾ ಎಂದು ಹೇಳಿರುವ ಭಾಗವನ್ನು ಕತ್ತರಿಸಿ ಎಡಿಟ್ ಮಾಡಿ ಅಣ್ಣಾಮಲೈ ಅವರು ಸಾವರ್ಕರ್ ಅವರನ್ನು ಟೀಕಿಸಿರುವಂತೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಹುಲ್ ಗಾಂಧಿ ಜೂನ್ 5 ಕ್ಕೆ ಬ್ಯಾಂಕಾಕ್‌ಗೆ ಹೋಗಲು ವಿಮಾನ ಟಿಕೆಟ್‌ ಬುಕ್ ಮಾಡಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights