FACT CHECK | ಬಡ ರೈತನ ಭೂಮಿಯನ್ನು ವಕ್ಫ್‌ ಬೋರ್ಡ್‌ ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿದೆಯೇ?

ಬಡ ರೈತನ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವ ವಕ್ಫ್‌ ಬೋರ್ಡ್‌ ದರ್ಗಾ ನಿರ್ಮಿಸಿದೆ” “ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ಅರ್ಜುನಪ್ಪ ಎಂಬ ರೈತನ ಜಮೀನು ದರ್ಗಾಕ್ಕೆ ಸೇರಿದ್ದು ಎಂದು ವಕ್ಫ್‌ ಬೋರ್ಡ್‌ ಹೇಳಿಕೊಂಡಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್‌ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದು, ವಕ್ಫ್‌ ಬೋರ್ಡ್‌ಗಳ ವಿರುದ್ಧ ಮತ್ತು ಅವುಗಳ ಸುಪರ್ದಿಯಲ್ಲಿರುವ ಆಸ್ತಿಗಳ ಬಗ್ಗೆಯೂ ಪೋಸ್ಟ್‌ಗಳ ಮೂಲಕ ಪ್ರಶ್ನಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಪೋಸ್ಟ್‌ನ ಕೀ ವರ್ಡ್ ಮೂಲಕ ಸರ್ಚ್ ಮಾಡಿದಾಗ, ಪೋಸ್ಟ್‌ಗೆ ಸಂಬಂಧಿಸಿದ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ತದನಂತರ ಈ ಕುರಿತು ಯಾವುದಾದರೂ ಮಾಧ್ಯಮ ಅಥವಾ ಪತ್ರಿಕಾ ವರದಿ ಆಗಿದೆಯೇ ಎಂದು ಪರಿಶೀಲನೆ ನಡೆಸಿದಾಗ, ಈ ಘಟನೆಗೆ ಸಂಬಂಧಪಟ್ಟಂತೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ ಎಂಬುದು ತಿಳಿದು ಬಂದಿದೆ.

 

 

 

 

 

 

 

ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಯಾದಗಿರಿ ಜಿಲ್ಲಾ ಪೋರ್ಟಲ್‌ನಲ್ಲಿ, 2011ರ ಜನಗಣತಿಯ ಮಾಹಿತಿಯಲ್ಲಿ ಶಾಬಾದ್ ಹೆಸರಿನ ಯಾವುದಾದರೂ ಗ್ರಾಮವಿದೆಯೇ ಎಂದು ಪರಿಶೀಲನೆ ನಡೆಸಿದಾಗ ಆ ಹೆಸರಿನ ಯಾವ ಗ್ರಾಮವು ಕೂಡ ಕಂಡುಬಂದಿಲ್ಲ. ಹೀಗಾಗಿ ವೈರಲ್ ಪೋಸ್ಟ್‌ ಅನ್ನು ಗೂಗಲ್ ರಿವರ್ಸ್ ಇಮೇಜಿನಲ್ಲಿ ಹುಡುಕಟ ನಡೆಸಿದಾಗ “ದರ್ಗಾ ಬಾಬಾ ಆಶಿಕ್ ಶಾ ಮಶೂಕ್ ಶಾ ರಹಮತುಲ್ ಅಲೈಹ್ ಇಸಾನಿ ತೆಕ್ಡಿ” ಎಂಬ ಹೆಸರಿನ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಲಾದ, ಇದೇ ರೀತಿಯ ಚಿತ್ರವು ಕಂಡುಬಂದಿದೆ.

ಈ ಫೇಸ್‌ಬುಕ್‌ ಪುಟದಲ್ಲಿ ನೀಡಿರುವ ವಿವರಣೆಯ ಪ್ರಕಾರ, ಇದು ಮಹಾರಾಷ್ಟ್ರದ ನಾಗಪುರದಲ್ಲಿರುವ ” ಬಾಬಾ ಆಶಿಕ್ ಶಾ ಮಶೂಕ್ ಶಾ ರಹಮತುಲ್ ಅಲೈಹ್”  ಅವರ ದರ್ಗಾದ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ಈ ಪೋಸ್ಟ್ ನಲ್ಲಿ ದರ್ಗಾದ ನವೀಕರಣದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಇನ್ನು ಈ ಕುರಿತು ಫ್ಯಾಕ್ಟ್‌ಲೀ ಆಂಗ್ಲ ವೆಬ್‌ತಾಣವು, ದರ್ಗಾದ ಅಧಿಕಾರಿಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದು, ಇದು ನಾಗಪುರವ ದರ್ಗಾ ಎಂಬುದು ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ಅರ್ಜುನಪ್ಪ ಎಂಬ ರೈತನ ಭೂಮಿಯನ್ನು ವಕ್ಫ್ ಮಂಡಳಿಯು ದರ್ಗಾಕ್ಕೆ ಸೇರಿದೆ ಎಂದು ಪ್ರತಿಪಾದಿಸಿ ಸ್ವಾಧೀನಪಡಿಸಿಕೊಂಡಿರುವ ಬಗ್ಗೆ ಯಾವುದೇ ವರದಿಗಳಿಲ್ಲ. ಇದಲ್ಲದೆ, ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಶಬಾದ್ ಎಂಬ ಹೆಸರಿನ ಯಾವುದೇ ಗ್ರಾಮವಿಲ್ಲ. ವೈರಲ್ ಪೋಸ್ಟ್‌ನಲ್ಲಿ ಇರುವ ಚಿತ್ರವು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಬಾಬಾ ಆಶಿಕ್ ಶಾ ಮತ್ತು ಮಶೂಕ್ ಶಾ ರಹಮತುಲ್ ಅಲೈಹ್ ಅವರ ದರ್ಗಾವನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ‘Go Back Modi’ ಎಂಬ ಪ್ಲೆಕಾರ್ಡ್ ಹಿಡಿದಿರುವ ಬಿಜೆಪಿ ಶಾಸಕಿಯ ಫೋಟೊದ ಅಸಲೀಯತ್ತೇನು ಗೊತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights