FACT CHECK | ಸಿದ್ದರಾಮಯ್ಯ ಸಕಾರವನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡಿತ್ತೇ ಕರ್ನಾಟಕದ ಹೈಕೋರ್ಟ್ ?

ಕರ್ನಾಟಕದ ಕಾಂಗ್ರೆಸ್‌ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ  ಎಂದು ಪ್ರತಿಪಾದಿಸಿ ವಾಟ್ಸಾಪ್‌ನಲ್ಲಿ ಕನ್ನಡ ಪ್ರಭದ ದಿನ ಪತ್ರಿಕೆಯ ಕ್ಲಿಪ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

 

 

 

 

 

 

 

 

 

 

 

 

 

 

 

“ಇಂಥ ಕೆಟ್ಟ ಆಡಳಿತ ನಾವು ನೋಡೇ ಇಲ್ಲ: ಹೈಕೋರ್ಟ್‌ ಎಂಬ ಶೀರ್ಷಿಕೆಯೊಂದಿಗೆ ಕರ್ನಾಟಕದ ಉಚ್ಚ ನ್ಯಾಯಾಲಯ ಸಿದ್ದರಾಮಯ್ಯ ಸರ್ಕಾರವನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡಿದೆ. ಸಿಎಂ ಅವರೇ ಇದು ನಿಮ್ಮ ಸಾಧನೆ ನಿಮ್ಮ ಸಾಧನ ಸಮಾವೇಶದಲ್ಲಿ ಇದನ್ನು ಹೇಳಿ” ಎಂದು ಕನ್ನಡ ಪ್ರಭ ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗಿರುವಂತೆ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು  ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಇಂತಹ ಯಾವುದೇ ವರದಿಯನ್ನು ಕನ್ನಡ ಪ್ರಭ ಪತ್ರಿಕೆ ಪ್ರಕಟಿಸಿರುವ ಲೇಖನ ಲಭ್ಯವಾಗಿಲ್ಲ. ಹೈಕೋರ್ಟ್‌ “ಇಂಥ ಕೆಟ್ಟ ಆಡಳಿತ ನಾವು ನೋಡೇ ಇಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕುರಿತು ಕೀವರ್ಡ್‌ ಸರ್ಚ್‌ ಮೂಲಕ ಹುಡುಕಿದಾಗಲೂ ಯಾವುದೇ ವರದಿಗಳು ಲಭ್ಯವಾಗಿಲ್ಲ. ಆದ್ದರಿಂದ ಇದೊಂದು ನಕಲಿ ವರದಿ ಎಂಬುದು ಸ್ಪಷ್ಟವಾಗಿದೆ.

ಈ ಚಿತ್ರದಲ್ಲಿ ಹೈಕೋರ್ಟ್‌ ಎಂಬ ಪದವನ್ನು ತಪ್ಪಾಗಿ ಬರೆಯಲಾಗಿದೆ ಮತ್ತು ಕನ್ನಡಪ್ರಭ ಪತ್ರಿಕೆಯ ಹೆಸರಿನ ಪಕ್ಕದಲ್ಲಿ ನಮೋ ಕರ್ನಾಟಕ ಎಂದಿರುವುದನ್ನು ನೋಡಬಹುದು. ಇದನ್ನು ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗರು ಅಥವಾ ಬಿಜೆಪಿ ಬೆಂಬಲಿಗರು ಈ ರೀತಿ ನಕಲಿ ವರದಿಯೊಂದನ್ನು ಸೃಷ್ಟಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಕಲಿ ಪತ್ರಿಕಾ ವರದಿಗಳನ್ನೇ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಸುಳ್ಳು ಹೇಳಿಕೆಗಳನ್ನು ಪತ್ರಿಕಾ ವರದಿಯಂತೆ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮಗೆ ಹಿಂದು ಮತ ಬೇಡ ಎಂದಿದ್ದಾರೆ ಎಂದು ಸಹ ನಕಲಿ ವರದಿ ಸೃಷ್ಟಿಸಲಾಗಿತ್ತು. ನಂತರ ಈ ಕುರಿತು ಪ್ರಕರಣ ದಾಖಲಾದರೂ ಯಾರನ್ನೂ ಬಂಧಿಸಿದ ವರದಿಯಾಗಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಡ ರೈತನ ಭೂಮಿಯನ್ನು ವಕ್ಫ್‌ ಬೋರ್ಡ್‌ ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights