FACT CHECK | ಅಮರಾವತಿಯಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ವಿಜಯೋತ್ಸವದಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು

ಅಮರಾವತಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ವಿಜಯೋತ್ಸವದ ಸಂದರ್ಭದಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

2024 ರ ಲೋಕಸಭೆ ಚುನಾವಣೆಯಲ್ಲಿ ಅಮರಾವತಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಬಲವಂತ ವಾಂಖೆಡೆ ಗೆಲುವು ದಾಖಲಿಸಿದ ನಂತರ, ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಅಮರಾವತಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ ನಂತರ ವಿಜಯೋತ್ಸವ ಆಚರಿಸು ವೇಳೆ ಪಾಕ್ ರ್ಧವಜವನ್ನು ಪ್ರದರ್ಶಿಸಲಾಗಿದೆ ಎಂಧು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2024 ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಅಮರಾವತಿಯ ರಾಜಕಮಲ್ ಚೌಕ ಅಥವಾ ಸರ್ಕಲ್‌ನಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಜಯೋತ್ಸವದ ರ್ಯಾಲಿಯನ್ನು ನಡೆಸಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

ಯೂಟ್ಯೂಬ್ ವಿಡಿಯೋ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಲಾದ ವಿಡಿಯೋ ಎರಡೂ ವೈರಲ್ ಚಿತ್ರದೊಂದಿಗೆ ಒಂದೇ ರೀತಿಯ ಹೋಲಿಕೆ ಇರುವುದನ್ನು ಕಾಣಬಹುದು. ಆದರೆ ವೈರಲ್ ಫೋಟೋದಲ್ಲಿ ಕಂಡುಬರುವಂತೆ ಪಾಕಿಸ್ತಾನದ ಧ್ವಜವನ್ನು ಮೂಲ ವಿಡಿಯೋದಲ್ಲಿ ಕಂಡುಬುವುದಿಲ್ಲ.

ಅಮರಾವತಿ ಸಂಸದರಾಗಿ ಚುನಾಯಿತರಾದ ಬಲವಂತ ವಾಂಖೆಡೆ ಅವರೊಂದಿಗೆ ಟಿಯೋಸಾ ಶಾಸಕಿ ಯಶೋಮತಿ ಠಾಕೂರ್ ರ‍್ಯಾಲಿಯಲ್ಲಿ  ಭಾಗವಹಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಕಾಂಗ್ರೆಸ್ ಪಕ್ಷ/ಮಹಾ ವಿಕಾಸ್ ಅಘಾಡಿಯ 2024 ರ ಲೋಕಸಭೆ ಚುನಾವಣೆ ವಿಜಯೋತ್ಸವದ ಇತ್ತೀಚಿನ ವೀಡಿಯೊಗಳನ್ನು ಒಳಗೊಂಡಿರುವ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು (ಇಲ್ಲಿ ಮತ್ತು ಇಲ್ಲಿ) ಲಭ್ಯವಾಗಿದೆ. ಈ ಸ್ಥಳವನ್ನು ರಾಜಕಮಲ್ ಚೌಕ್, ಅಮರಾವತಿ ಎಂದು ಗುರುತಿಸಲಾಗಿದೆ.

ಅಮರಾವತಿಯ ರಾಜಕಮಲ್ ಚೌಕ್‌ನಲ್ಲಿರುವ ‘ಅಂಬಾ ನಗರಿ’ ಸೈನ್ ಬೋರ್ಡ್ ಅನ್ನು ಈ ವೀಡಿಯೊದಲ್ಲಿ ನೋಡಬಹುದು ಮತ್ತು ಬಲವಂತ ವಾಂಖೆಡೆ ಮತ್ತು ಯಶೋಮತಿ ಠಾಕೂರ್ ಅವರು ನಡೆಸಿದ ರೋಡ್‌ಶೋ ಮಾಧ್ಯಮ ವರದಿಗಳಲ್ಲಿಯೂ ನೋಡಬಹುದು. 2024 ರ ಲೋಕಸಭಾ ಚುನಾವಣೆಯ ವಿಜಯದ ನಂತರ ರಾಜಕಮಲ್ ಚೌಕ್‌ನಲ್ಲಿ ರೋಡ್‌ಶೋ ನಡೆಸಲಾಗಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.

ಇದಲ್ಲದೆ, ಗೂಗಲ್ ಮ್ಯಾಪ್‌ನಲ್ಲಿ ರಾಜಕಮಲ್ ಚೌಕ್‌ನ ಫೋಟೋಗಳನ್ನು ಹೋಲಿಕೆ ಮಾಡಿದಾಗ, ವೈರಲ್ ವಿಡಿಯೋವನ್ನು ಅದೇ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ದೃಢವಾಗಿದೆ. 2024 ರ ಲೋಕಸಭಾ ಚುನಾವಣೆಯ ನಂತರ ವೀಡಿಯೊವನ್ನು ಚಿತ್ರೀಕರಿಸಲಾಗಿದೆಯೇ ಎಂದು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಅಮರಾವತಿಯ ರಾಜಕಮಲ್ ಚೌಕ್‌ನಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.


ರಾಜ್‌ಕಮಲ್ ಚೌಕ್‌ನಲ್ಲಿ ನಡೆದ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿದ ಅಥವಾ ಪ್ರದರ್ಶಿಸಿದ ಯಾವುದೇ ಸುದ್ದಿ ವರದಿಗಳಿಲ್ಲ. ಅಲ್ಲದೆ ಮೂಲ ವಿಡಿಯೋದಲ್ಲಿ ಪಾಕಿಸ್ತಾನದ ಧ್ವಜ ಇರಲಿಲ್ಲ. ಮೂಲ ವಿಡಿಯೋವನ್ನು ಎಡಿಟ್‌ ಪಾಕ್ ಧ್ವಜವನ್ನು ಪ್ರದರ್ಶಿಸಿರುವಂತೆ ಸೇರಿಸಲಾಗಿದೆ.

ಹೆಚ್ಚುವರಿಯಾಗಿ, ವಿಎಚ್‌ಪಿ ಮತ್ತು ಬಜರಂಗದಳದ ಸದಸ್ಯರು ಅಮರಾವತಿಯ ಸ್ಥಳೀಯ ಪೊಲೀಸ್ ಕಮಿಷನರ್‌ಗೆ 2024 ರ ಜೂನ್ 4 ರಂದು ಮಹಾವಿಕಾಸ್ ವಿಜಯೋತ್ಸವದ ಸಂದರ್ಭದಲ್ಲಿ ರಾಜಮಹಲ್ ಚೌಕ್‌ನಲ್ಲಿ ‘ಗಲಾಟೆ’ ಸೃಷ್ಟಿಸಿದ ‘ಗೂಂಡಾಗಳ’ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಒಟ್ಟಾರೆಯಾಗಿ ಹೇಳುವುದಾದರೆ, 2024 ರ ಲೋಕಸಭೆ ಚುನಾವಣೆಯ ನಂತರ ಅಮರಾವತಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ವಿಜಯೋತ್ಸವದಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶೀಸಲಾಗಿದೆ ಎಂದು ಬಿಂಬಿಸಲು ಎಡಿಟ್ ಮಾಡಿದ ಫೋಟೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಎಸ್‌ಪಿ ಮುಖಂಡ ಅನ್ಸಾರಿಯಿಂದ ಅಧಿಕಾರಿಗಳಿಗೆ ಬೆದರಿಕೆ ! ವೈರಲ್ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights