FACT CHECK | ಎಲೆಕ್ಷನ್‌ನಲ್ಲಿ ಸೋತ ಅಣ್ಣಾಮಲೈ ಬಿಕ್ಕಿ ಬಿಕ್ಕಿ ಅತ್ತಿದ್ದು ನಿಜವೇ?

2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ತನ್ನ ಚುನಾವಣಾ ಖಾತೆಯನ್ನು ತೆರೆಯಲು ವಿಫಲವಾದ ಕಾರಣ, ಪಕ್ಷದ ರಾಜ್ಯ ಘಟಕದ ಅಣ್ಣಾಮಲೈ ಅವರು ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ” ಅಣ್ಣಾಮಲೈ 3 ವರ್ಷಗಳ ಕಾಲ 24×7 ಕೆಲಸ ಮಾಡಿದ್ದಾರೆ. ತಮಿಳುನಾಡಿನ ಮೂಲೆ ಮೂಲೆಗೂ ಹೋಗಿ ಕೆಲಸಮಾಡಿದ್ದರ ಪರಿಣಾಮ ಇಂದು ತಮಿಳುನಾಡಿನಲ್ಲಿ ಬಿಜೆಪಿಯ ಮತ ಹಂಚಿಕೆ ಈಗ 19% ಏರಿಕೆಯಾಗಿದೆ.  ಅವರು ಅಧಿಕಾರ ವಹಿಸಿಕೊಂಡಾಗ ಅದು ಕೇವಲ 8% ಆಗಿತ್ತು. ಅಣ್ಣಾಮಲೈ ಮತ್ತೆ ಗೆಲ್ಲುತ್ತಾರೆ. ಅವರ ಕಣ್ಣೀರಿಗೆ ಕಾರಣವಿದೆ. ನಾನು ಅವರನ್ನು ಸದಾ ಬೆಂಬಲಿಸುತ್ತೇನೆ ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಅಣ್ಣಾಮಲೈ ತಮ್ಮ ಸೋಲಿನ ನಂತರ ಅಳುತ್ತಿದ್ದಾರೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ವಿಂಗಡಿಸಿ, ಗೂಗಲ್ ಲೆನ್ಸ್‌ನಲ್ಲಿ ಸರ್ಚ್ ಮಾಡಿದಾಗ, 17 ಏಪ್ರಿಲ್, 2024 ರಂದು ತಮಿಳು ಸುದ್ದಿವಾಹಿನಿ ಪುತಿಯಾ ತಲೈಮುರೈ ಟಿವಿಯ ಇನ್‌ಸ್ಟಾಗ್ರಾಮ್ ಪೋಸ್ಟ್‌ ಲಭ್ಯವಾಗಿದೆ. ಅದೇ ಕ್ಲಿಪ್ ಅನ್ನು ಹೋಲುವ ಅಣ್ಣಾಮಲೈ ಹಿರಿಯರೊಂದಿಗೆ ಮಾತನಾಡುತ್ತಾ ಭಾವೋದ್ವೇಗಕ್ಕೆ ಒಳಗಾದ ಸಂದರ್ಭ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

17 ಏಪ್ರಿಲ್  2024 ರಂದು ಅಣ್ಣಾಮಲೈ ಅವರು ಕೊಯಮತ್ತೂರಿನಲ್ಲಿ ವೃದ್ಧರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಲೈವ್ ಸ್ಟ್ರೀಮ್ ಮಾಡಿದ ದಿನಮಲರ್‌ನ ಸುದ್ದಿವಾಹಿನಿಯ ವಿಡಿಯೋದಲ್ಲಿರುವ ದೃರ್ಶಯಗಳು ಮತ್ತು ವೈರಲ್ ದೃಶ್ಯಗಳು ಒಂದೆ ರೀತಿಯಾಗಿವೆ.

Annamalai Broke Down

ಏಪ್ರಿಲ್ 2024 ರ ಏಷ್ಯಾನೆಟ್ ನ್ಯೂಸ್ ವರದಿಯು ಕೊಯಮತ್ತೂರಿನಲ್ಲಿ ಹಿರಿಯ ನಾಗರಿಕರನ್ನು ಉದ್ದೇಶಿಸಿ ಮಾತನಾಡುವಾಗ ತಮಿಳು ಬಿಜೆಪಿ ಮುಖ್ಯಸ್ಥರು ಭಾವೋದ್ವೇಗಕ್ಕೆ ಒಳಗಾದರು ಎಂದು ದೃಢಪಡಿಸಿದೆ. ವ್ಯಾಪಕವಾಗಿ ಪ್ರಸಾರವಾದ ತುಣುಕನ್ನು ಏಪ್ರಿಲ್ 2024 ರಲ್ಲಿ ನ್ಯೂಸ್ 18 ತಮಿಳುನಾಡಿನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಅಣ್ಣಾಮಲೈ ಅವರು ಏಪ್ರಿಲ್ 17, 2024 ರಂದು ತಮ್ಮ ಅಧಿಕೃತ X ಖಾತೆಯಲ್ಲಿ ಈ ವೆಂಟ್‌ನ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಈ ದೃಶ್ಯಗಳು 2024ರ ಚುನಾವಣಾ ಫಲಿತಾಂಶಕ್ಕೂ ಮುನ್ನ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರು ಡಿಎಂಕೆಯ ಗಣಪತಿ ರಾಜ್‌ಕುಮಾರ್  ವಿರುದ್ಧ 1,18,068 ಮತಗಳ ಅಂತರದಿಂದ ಸೋತಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅಮರಾವತಿಯಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ವಿಜಯೋತ್ಸವದಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights