FACT CHECK | ಕ್ಯಾಪ್ಸಿಕಮ್‌ ಕೊಯ್ಯುವಾಗ ಅತ್ಯಂತ ವಿಷಕಾರಿ ಹಾವು ಪತ್ತೆಯಾಗಿದ್ದು ನಿಜವೇ?

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಮಾರುಕಟ್ಟೆಯಿಂದ ಕೊಂಡು ತಂದ ತರಕಾರಿಗಳಲ್ಲಿ (ಕ್ಯಾಪ್ಸಿಕಮ್ ಅನ್ನು) ಅಡುಗೆಗೆ ಬಳಸಲು ಹೆಚ್ಚುವಾಗ ಅದರಿಂದ ವಿಷಕಾರಿಯಾದ ಹಾವಿನ ಮರಿಯೊಂದು ಹೊರ ಬರುತ್ತಿದ್ದು, ಒಂದು ವೇಳೆ ಈ ಹಾವಿನ ಮರಿ ಅಡುಗೆಯಲ್ಲಿ ಬೆರೆತು ಅದನ್ನು ಸೇವಿಸಿದರೆ ಅದನ್ನು ಸೇವಿಸಿದ ವ್ಯಕ್ತಿ ಮರಣಹೊಂದುತ್ತಾನೆ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಇದನ್ನು ಪ್ರಪಂಚದ ಅತ್ಯಂತ ಚಿಕ್ಕ ವಿಷಕಾರಿ ಹಾವಿನ ಮರಿ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದು ಕ್ಯಾಪ್ಸಿಕಮ್‌ನಲ್ಲಿ ಕಂಡುಬರುತ್ತದೆ. ನೀವು ಮನೆಯಲ್ಲಿ ಹಸಿರು ಮೆಣಸಿನಕಾಯಿಯನ್ನು ಬಳಸುವಾಗ ದಯವಿಟ್ಟು ಎಚ್ಚರಿಕೆಯಿಂದಿರಿ. ಒಂದು ವೇಳೆ ನೀವು ಅಡುಗೆ ಮಾಡಲು ಬಳಸುವಾಗ ತಿಳಿಯದೇ ಇದನ್ನು ಸಲಾಡ್ ರೀತಿಯಲ್ಲೋ, ಬೇಯಿಸಿಯೋ ತಿಂದರೆ ನೀವು ಕೂಡ ನಿಮಗೆ ತಿಳಿಯದ ಹಾಗೆ ಬಲಿಯಾಗುತ್ತೀರಿ, ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

 

ಕ್ಯಾಪ್ಸಿಕಂ ತಿನ್ನುವ ಮೊದಲು ಜಾಗರೂಕರಾಗಿರಿ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ಪ್ರತಿಪಾದೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳ ವಿಡಿಯೋ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆಗಳು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು, ಕ್ಯಾಪ್ಸಿಕಂನಲ್ಲಿ ಕಂಡುಬರುವ ಥ್ರೆಡ್ ತರಹದ ಜೀವಿಗಳಿಗೆ ಸಂಬಂಧಿತ ಮಾಹಿತಿಯನ್ನು ಸರ್ಚ್ ಮಾಡಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಕ್ಯಾಪ್ಸಿಕಂನ ವಿಡಿಯೊ ಬ್ರೆಜಿಲ್ ಮತ್ತು ಸ್ಪೇನ್‌ನಂತಹ ದೇಶಗಳಲ್ಲಿ 2019 ರಿಂದಲೂ ಪ್ರಸಾರವಾಗುತ್ತಿದೆ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ. ನೆಮಟೋಡ್‌ಗಳು ಅಥವಾ ನೆಮಟೊಮಾರ್ಫ್‌ಗಳು ಎಂಬ ಜೀವಿಗಳನ್ನು, ವರ್ಮ್ ಎಂದು ಕರೆಯಲಾಗುತ್ತದೆ.

ವೈರಲ್ ಆಗಿರುವ ವಿಡಿಯೋದಲ್ಲಿರುವಂತೆ ಪ್ರಪಂಚದಲ್ಲಿಯೇ ಅತ್ಯಂತ ಚಿಕ್ಕ ಹಾವು ಹೇಗಿರುತ್ತದೆ ಎಂದು ತಿಳಿಯಲು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಲಭ್ಯವಾದ ಚಿತ್ರದಲ್ಲಿರುವ ಹಾವಿನ ಮರಿಗಿಂತ ವಿಭಿನ್ನವಾಗಿರುವುದನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಕ್ಯಾಪ್ಸಿಕಮ್‌ನಲ್ಲಿ ಕಂಡುಬರುವ ಜೀವಿಯ ಚಿತ್ರವನ್ನು ಪರಿಶೀಲಿಸಿದಾಗ,  Imgur.com ಎಂಬ ವೆಬ್‌ಸೈಟ್‌ನಲ್ಲಿ ಅದರ ಮಾಹಿತಿ ಲಭ್ಯವಾಗಿದೆ.

YouTube ನಲ್ಲಿ ಒಂದು ವರ್ಮ್ ಅನ್ನು ತೋರಿಸಿರುವ ವೀಡಿಯೊವನ್ನು ನೋಡಿದ್ದೇವೆ ಮತ್ತು ಈ ವರ್ಮ್ ಮೇಲಿನ ವೀಡಿಯೊದಲ್ಲಿ ತೋರಿಸಿರುವಂತೆಯೇ ಇದೆ. ಈ ವಿಡಿಯೋದಲ್ಲಿ ಈ ಹುಳುವಿಗೆ ‘ಕುದುರೆ ಹುಳು’ ಎಂದು ಹೆಸರಿಡಲಾಗಿದೆ.

ಇದನ್ನು ಖಚಿತಪಡಿಸಲು, ‘ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್-ಸೆಂಟರ್ ಆಫ್ ಎಕೊಲಾಜಿಕಲ್ ಸೈನ್ಸಸ್ ‘ ನಲ್ಲಿ  ಪ್ರೊಫೆಸರ್ ಆಗಿರುವ ವೀಣಾ ಟಂಡನ್  ಅವರೊಂದಿಗೆ ಫ್ಯಾಕ್ಟ್‌ಲಿ ತಂಡ ಮಾತನಾಡಿದ್ದು , “ಮೇಲಿನ ವಿಡಿಯೊದಲ್ಲಿ ಕಾಣುತ್ತಿರುವುದು ‘ವರ್ಮ್’. ಇದನ್ನು ‘ಹಾರ್ಸ್ಹೇರ್ ವರ್ಮ್’, ‘ಗೋರ್ಡಿಯಾಸ್’ ಅಥವಾ ‘ನೆಮಟೋಮಾರ್ಫಾ’ ಎಂದು ಕರೆಯಲಾಗುತ್ತದೆ. ಈ ಹುಳು ಮಣ್ಣು, ನೀರು ಅಥವಾ ಸಸ್ಯಗಳಲ್ಲಿ ಜೀವಿಸುತ್ತದೆ ಅಲ್ಲದೆ ಪ್ರಾಣಿಗಳಿಗಾಗಲಿ ಮಾನವರಿಗಾಗಲಿ ಇದು ಹಾನಿಕಾರಕವಲ್ಲಎಂದು ದೃಢಪಡಿಸಿದ್ದಾರೆ.

ಅಮೇರಿಕನ್ ಫೈಟೊಪಾಥೋಲಾಜಿಕಲ್ ಸೊಸೈಟಿಯ ಪ್ರಕಾರ , ಹಲವು ರೀತಿಯ ನೆಮಟೋಡ್ಗಳು ಇದ್ದು, ಅವುಗಳಿಂದ ಮನುಷ್ಯರಿಗೆ ಯಾವುದೇ ತೊಂದರೆಗಳಿಲ್ಲ. ಕೆಲವು ನೆಮಟೋಡ್ಗಳು ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸಲು ಬ್ಯಾಕ್ಟೀರಿಯಾವನ್ನು ಬಿಡುಗಡೆ ಮಾಡಿದರೆ,ಇನ್ನು ಕೆಲವು ಕೀಟಗಳನ್ನು ತಿನ್ನುತ್ತವೆ ಮತ್ತು ಬೆಳೆಗಳಲ್ಲಿನ ಕೀಟಗಳನ್ನು ನಿಯಂತ್ರಿಸುತ್ತವೆ. ಆದರೂ ಏಷ್ಯನ್ ಜರ್ನಲ್ ಆಫ್ ಫಾರ್ಮಾಸ್ಯುಟಿಕ್ಸ್, ಸಂಸ್ಥೆಯು ತರಕಾರಿಗಳನ್ನು ಸರಿಯಾಗಿ ತೊಳೆದು ಬಳಸಬೇಕೆಂದು ಸಲಹೆ ನೀಡುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ವಿಶ್ವದ ಅತಿ ಚಿಕ್ಕ ಮತ್ತು ವಿಷಕಾರಿ ಹಾವಿನದ್ದಲ್ಲ, ಕುದುರೆ ಹುಳುವಿನದು ಎಂಬುದು ಈ ಸಾಕ್ಷ್ಯಗಳಿಂದ ಸ್ಪಷ್ಟವಾಗಿದೆ. ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಹಳೆಯ ಮತ್ತು ಸಂಬಂಧವಿಲ್ಲದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಎಲೆಕ್ಷನ್‌ನಲ್ಲಿ ಸೋತ ಅಣ್ಣಾಮಲೈ ಬಿಕ್ಕಿ ಬಿಕ್ಕಿ ಅತ್ತಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights