FACT CHECK | ಭಾರತ-ಪಾಕ್ ಟಿ20 ಪಂದ್ಯದ ವೇಳೆ ಅನುಷ್ಕಾ ಶರ್ಮಾ ದಲಿತ ವ್ಯಕ್ತಿಯ ಮೇಲೆ ಕೋಪಗೊಂಡರೇ?

ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಆರು ರನ್‌ಗಳಿಂದ ಸೋಲಿಸಿದ ಪಂದ್ಯದ ವೇಳೆ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ವ್ಯಕ್ತಿಯೊಬ್ಬರ ಜೊತೆ ಕೋಪಗೊಂಡು ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ‘ದಲಿತ ಹಿಂದೂ ವ್ಯಕ್ತಿಯನ್ನು ಕಂಡ ಅನುಷ್ಕಾ ಶರ್ಮಾ ಕುಪಿತಗೊಂಡು ಪ್ರತಿಕ್ರಿಯಿಸಿದ್ದಾರೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಅನುಷ್ಕಾ ಶರ್ಮಾ ಪಕ್ಕದಲ್ಲಿ DaIit ಹಿಂದೂ ಕುಳಿತಿದ್ದನ್ನು ಸಹಿಸದ ಆಕೆ ತುಂಬಾ ಕೋಪಗೊಂಡಳು ಎಂಬ ಹೇಳಿಕೆಯೊಂದಿಗೆ, ಪಾಕ್ ಮೂಲದ X  ಹ್ಯಾಂಡಲ್‌ನಿಂದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಪಾಕ್ ಮೂಲದ ಹ್ಯಾಂಡಲ್  @PSYWAROPS X ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಹೀಗೆ ಬರೆದಿದ್ದಾರೆ: “india vs Pakistan ಪಂದ್ಯದ ಸಮಯದಲ್ಲಿ, ಕ್ರಿಕೆಟಿಗ ವಿರಾಟ್ ಕೋಹಿ ಅವರ ಪತ್ನಿ ಅನುಷ್ಕಾ ಶರ್ಮಾ ಪಕ್ಕದಲ್ಲಿ, DaIit ಹಿಂದೂ  ಕುಳಿತ ಸಂದರ್ಭದಲ್ಲಿ ಆಕೆ ಸಹನೆ ಕಳೆದುಕೊಂಡಿದ್ದಾಳೆ, ಕೋಪಗೊಂಡಿದ್ದಾಳೆ ಎಂದು ಆರೋಪಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಭಾರತ-ಪಾಕಿಸ್ತಾನ ಟಿ20 ಕ್ರಿಕೆಟ್ ಪಂದ್ಯದ ವೇಳೆ ನಡೆದ ಘಟನೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪೋಸ್ಟ್‌ಅನ್ನು ಪರಿಶೀಲಿಸಲು, ಕೀವರ್ಡ್ ಸರ್ಚ್ ನಡೆಸಿದಾಗ, Republic TVapbliveThe Times of India and The Economic Times ನ ಕೆಲವು ಇತ್ತೀಚಿನ ವರದಿಗಳು ಲಭ್ಯವಾಗಿದೆ.  ಈ ಯಾವ ವರದಿಗಳಲ್ಲಿಯೂ ಅನುಷ್ಕಾ ಶರ್ಮಾ ‘ದಲಿತ ಹಿಂದೂ’ ವ್ಯಕ್ತಿ ಮೇಲೆ ಕೋಪಗೊಂಡರು ಎಂಬುದು ಪತ್ತೆಯಾಗಿಲ್ಲ.

ವರದಿಗಳ ಪ್ರಕಾರ, ನಟಿ ಅನುಷ್ಕಾ ಶರ್ಮಾ ವಿಐಪಿ ಬರ್ಥ್‌ನಲ್ಲಿ ವ್ಯಕ್ತಿಯೊಂದಿಗೆ ಕೋಪಗೊಂಡು ಮಾತನಾಡುವುದನ್ನು ಕಾಣಬಹುದು, ತಮ್ಮ ಹಿಂಭಾಗ ಕಡೆಗೆ ತೋರಿಸಿಕೊಂಡು ಮಾತನಾಅಡುವಾಗ ತಾಳ್ಮೆ ಕಳೆದುಕೊಂಡವರಂತೆ ಕಾಣುತ್ತಿದೆ ಎಂದು ವರದಿಯಾಗಿದೆ. ಆದರೆ ಈ ಸಂದರ್ಭಕ್ಕೆ  ನಟಿ ಅನುಷ್ಕಾ ಇಷ್ಟು ಕೋಪಗೊಳ್ಳಲು ನಿಖರವಾಗಿ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ ಉಲ್ಲೇಖವಾಗಿಲ್ಲ.

ವೈರಲ್ ಪೋಸ್ಟ್‌ನಲ್ಲಿ ಹೇಳಿಕೊಂಡಂತೆ, ನಟಿ ಅನುಷ್ಕಾ ಶರ್ಮಾ ದಲಿತ ಹಿಂದೂ ಮೇಲೆ ಕೋಪಗೊಂಡು ಪ್ರತಿಕ್ರಿಸಿದ್ದಾರೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವ್ಯಕ್ತಿಯೊಬ್ಬರ ಬಳಿ ಕೋಪಗೊಂಡು ಮಾತನಾಡುತ್ತಿರುವ ವಿಡಿಯೋ ಪಾಕ್-ಆಧಾರಿತ X ಹ್ಯಾಂಡಲ್‌ನಿಂದ ತಪ್ಪಾಗಿ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಯಾವುದೇ ವರದಿಗಳಲ್ಲಿ ವ್ಯಕ್ತಿಯನ್ನು ದಲಿತ ಹಿಂದೂ ಎಂಬ ಯಾವುದೇ ಉಲ್ಲೇಖವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಗ್ಯಾರೆಂಟಿ ಯೋಜನೆಯ ಹಣ ಕೇಳಲು ಬಂದಿದ್ದ ಮಹಿಳೆಯನ್ನುದ್ದೇಶಿಸಿ ‘ಹುಚ್ಚಿಯನ್ನು ಓಡಿಸಿ’ ಎಂದು ಹೇಳಿದ್ರಾ ದಿಗ್ವಿಜಯ ಸಿಂಗ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights