FACT CHECK | ಮಾಜಿ ಕ್ರಿಕೆಟ್ ಆಟಗಾರ ಮುಸ್ಲಿಂ ಧರ್ಮಕ್ಕೆ ಗುಡ್‌ ಬೈ ಹೇಳಿ, ಹಿಂದೂ ಧರ್ಮ ಸ್ವೀಕರಿಸಿದರೆ ! ಈ ಸ್ಟೋರಿ ಓದಿ

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ತನ್ನ ಪತ್ನಿ ಮಗನೊಂದಿಗೆ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮ ಸ್ವೀಕರಿಸಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

 

 

 

 

 

 

 

 

 

 

 

 

 

 

 

 

 

“ಮೊಹಮ್ಮದ್ ಅಜರುದ್ದೀನ್ ತನ್ನ ಪತ್ನಿ ಮತ್ತು ಮಗನೊಂದಿಗೆ ಕಾಶಿಯಲ್ಲಿ ಮುಸ್ಲಿಂ ಧರ್ಮವನ್ನು ತೊರೆದು ಸನಾತನ ಹಿಂದೂ ಧರ್ಮವನ್ನು ಸ್ವೀಕರಿಸಿದರು. ವಾರಣಾಸಿಯ ಭೋಜ್‌ಬೀರ್‌ನಲ್ಲಿರುವ ಆರ್ಯ ಸಮಾಜ ಮಂದಿರದಲ್ಲಿ ಮೊಹಮ್ಮದ್ ಅಜರುದ್ದೀನ್ ತನ್ನ ಪತ್ನಿ ಮತ್ತು ಪುತ್ರನೊಂದಿಗೆ ಇಸ್ಲಾಂ ಧರ್ಮವನ್ನು ತೊರೆದು ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ” ಎಂಬ ಸಂದೇಶವೊಂದು ವಾಟ್ಸಾಪ್‌ ಮತ್ತು ಥ್ರೆಡ್‌ನಲ್ಲಿ ಹರಿದಾಡುತ್ತಿದೆ. ಈ ಸಂದೇಶದೊಂದಿಗೆ ದಂಪತಿಯೊಂದು ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸುವ ಮತ್ತು ಅದಕ್ಕೆ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಫೋಟೊವನ್ನು ಕೊಲಾಜ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.

‘दिल्ली के दिल में ( @deepakprotocol) ಎಂಬ ಎಕ್ಸ್ ಬಳಕೆದಾರ ಜುಲೈ 4, 2024ರಂದು ಫೋಟೋವೊಂದನ್ನು ಹಂಚಿಕೊಂಡಿದ್ದು, “ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಕಾಶಿಯಲ್ಲಿ ಪತ್ನಿ ಮತ್ತು ಮಗನೊಂದಿಗೆ ಮುಸ್ಲಿಂ ಧರ್ಮವನ್ನು ತೊರೆದು ಸನಾತನಿಯಾದರು” ಎಂದು ಬರೆದುಕೊಂಡಿದ್ದಾರೆ.

ಹಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ಮೊಹಮ್ಮದ್ ಅಜರುದ್ದೀನ್ ಕಾಶಿಯಲ್ಲಿ ಪತ್ನಿ ಮತ್ತು ಮಗನೊಂದಿಗೆ ಮುಸ್ಲಿಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮಾಂತರಗೊಂಡಿದ್ದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್ :

ಹೆಸರಾಂತ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಒಂದು ವೇಳೆ ಮುಸ್ಲಿಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದರೆ ಅದನ್ನು ಮುಖ್ಯವಾಹಿನಿ ಮಾಧ್ಯಮಗಳು ದೊಡ್ಡ ಸುದ್ದಿ ಮಾಡುತ್ತಿದ್ದವು. ಆದರೆ ಈ ಕುರಿತು ಸರ್ಚ್ ಮಾಡಿದಾಗ ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ.

ವೈರಲ್ ಸುದ್ದಿಯ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ ವೇಳೆ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಚಂದೌಲಿ ನಿವಾಸಿ ಮೊಹಮ್ಮದ್ ಅಝರುದ್ದೀನ್ ಎಂಬವರು ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮ ಸ್ವೀಕರಿಸಿದ್ದು, ಅದನ್ನು ತಪ್ಪಾಗಿ ಕ್ರಿಕೆಟಿಗ ಅಝರುದ್ದೀನ್ ಹಿಂದೂ ಧರ್ಮ ಸ್ವೀಕರಿಸಿದ್ದಾರೆ ಎಂದು ಹಂಚಿಕೊಂಡಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಜುಲೈ 2, 2024ರಂದು ಅಮರ್ ಉಜಾಲಾ ಸುದ್ದಿ ಸಂಸ್ಥೆ ವಿಡಿಯೋ ಸಹಿತ ಸುದ್ದಿ ಪ್ರಕಟಿಸಿದೆ. ಸುದ್ದಿಯಲ್ಲಿ “ಚಂದೌಲಿಯ ಸದರ್ ಕೊತ್ವಾಲಿ ಪ್ರದೇಶದ ಬಿಚಿಯಾ ಗ್ರಾಮದ ನಿವಾಸಿ ಮೊಹಮ್ಮದ್ ಅಝರುದ್ದೀನ್ ಹಿಂದೂ ಧರ್ಮ ಸ್ವೀಕರಿಸಿದ್ದು, ಅವರ ಹೆಸರನ್ನು ಡಬ್ಲ್ಯೂ ಸಿಂಗ್ ಎಂದು ಬದಲಾಯಿಸಿದ್ದಾರೆ. ಅಝರುದ್ದೀನ್ ಜೊತೆ ಅವರ ಪತ್ನಿ ಮತ್ತು ಪುತ್ರ ಕೂಡ ಹಿಂದೂ ಧರ್ಮ ಸ್ವೀಕರಿಸಿದ್ದಾರೆ. ಅವರು ರಾಮಚರಿತ ಮಾನಸ ಮತ್ತು ಗೀತೆ ಪೂಜೆ ಪುನಸ್ಕಾರವನ್ನು ಕೂಡ ಪ್ರಾರಂಭಿಸಿದ್ದಾರೆ ಎಂದು ತಿಳಿಸಲಾಗಿದೆ.

 

 

 

 

 

 

 

 

ಅಮರ್ ಉಜಾಲಾ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಸಹ “ಚಂದೌಲಿಯ ಸದರ್ ಕೊತ್ವಾಲಿ ಪ್ರದೇಶದ ಬಿಚಿಯಾ ಗ್ರಾಮದ ನಿವಾಸಿ ಮೊಹಮ್ಮದ್ ಅಜರುದ್ದೀನ್ ತನ್ನ ಕುಟುಂಬ ಸಮೇತ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದು ತನ್ನ ಹೆಸರನ್ನು ಡಬ್ಲ್ಯೂ ಸಿಂಗ್ ಎಂದು ಬದಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅದರಲ್ಲಿಯೂ ಸಹ ಮಾಜಿ ಕ್ರಿಕೆಟಿಗ ಎಂದು ಉಲ್ಲೇಖಿಸಿಲ್ಲ. ಅದರಲ್ಲಿನ ಫೋಟೊ ಸ್ಪಷ್ಟವಾಗಿದ್ದು, ಅಲ್ಲಿರುವ ಫೋಟೊ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್‌ರವರದ್ದಲ್ಲ ಎಂಬುದು ಸ್ಪಷ್ಟವಾಗಿದೆ.

ಅಮರ್ ಉಜಲಾ ವರದಿ

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಚಂದೌಲಿಯ ಜಿಲ್ಲೆಯ ನಿವಾಸಿ ಅಝರುದ್ದೀನ್ ಎಂಬ ವ್ಯಕ್ತಿಯ ಕುಟುಂಬವು ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮ ಸ್ವೀಕರಿಸಿದ್ದಾರೆ. ಆದರೆ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಮೊಹಮ್ಮದ್ ಅಝುರುದ್ದೀನ್ ಎಂಬ ಹೆಸರನ್ನು ತಪ್ಪಾಗಿ ಗ್ರಹಿಸಿ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಝುರುದ್ದೀನ್ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮ ಸ್ವೀಕರಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನಟಿ ಕಂಗನಾಗೆ ಕಪಾಳಮೋಕ್ಷ ಮಾಡಿ ಸಸ್ಪೆಂಡ್ ಆಗಿದ್ದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಬೆಂಗಳೂರಿಗೆ ವರ್ಗಾವಣೆ ಆಗಿರುವುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights