FACT CHECK | ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟಿದ್ದು ನಿಜವೇ?
28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟ ಮಾಲ್ಡೀವ್ಸ್ ಎಂಬ ಒಕ್ಕಣೆಯೊಂದಿಗೆ ಪೋಸ್ಟ್‌ಕಾರ್ಡ್ ಕನ್ನಡ ಎಂಬ ಬಲಪಂಥೀಯ ಸಾಮಾಜಿಕ ಮಾಧ್ಯವಾದ ಫೇಸ್‌ಬುಕ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದೆ.
ಭಾರತ ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು ಖರೀದಿಸಿದೆ ಎಂದು ಪ್ರತಿಪಾದಿಸಿ ಅಧ್ಯಕ್ಷ ಮುಯಿಝು ಅವರು ಸಹಿ ಮಾಡಿದ ಒಪ್ಪಂದ ಫೋಟೊವನ್ನು ಹಂಚಿಕೊಂಡು, ಮಾಲ್ಡೀವ್ಸ್ ದ್ವೀಪಗಳನ್ನು ಅಧಿಕೃತವಾಗಿ ಭಾರತಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದೆ.
ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ರೀತಿಯ ಪೋಸ್ಟ್‌ಅನ್ನು ಹಂಚಿಕೊಂಡಿರುವುದು ಕಂಡುಂದಿದೆ ಈ ವರ್ಷದ ಆರಂಭದಲ್ಲಿ ಭಾರತೀಯ ದ್ವೀಪದ ಕಡಲತೀರಕ್ಕೆ ಪ್ರಧಾನ ಮಂತ್ರಿಯ ಭೇಟಿಯನ್ನು ಉಲ್ಲೇಖಿಸಿ. “ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು ಖರೀದಿಸಿದೆ. ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಹಸ್ತಾಂತರಿಸುತ್ತದೆ. ಅಧ್ಯಕ್ಷ ಮುಯಿಝು ಸ್ವತಃ ಒಪ್ಪಂದಕ್ಕೆ ಸಹಿ ಹಾಕಿದರು. ಇದನ್ನು “ಲಕ್ಷದ್ವೀಪ ಕಡಲತೀರದಲ್ಲಿ 50 ಮೀಟರ್ ನಡಿಗೆಯ ಮ್ಯಾಜಿಕ್ ಮತ್ತು ಒಂದು ಟ್ವೀಟ್ ಕಾರಣವಾಗಿದೆ” ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಾಲ್ಡೀವ್ಸ್‌ನಲ್ಲಿ ಭಾರತದ ಅನುದಾನಿತ ನೀರು ಮತ್ತು ನೈರ್ಮಲ್ಯ ಯೋಜನೆಯ ಉದ್ಘಾಟನೆಯ ಕುರಿತ ಹಲವು ವರದಿಗಳು ಲಭ್ಯವಾಗಿದೆ.
ಮಾಲ್ಡೀವ್ಸ್ ಭಾರತಕ್ಕೆ ಪ್ರಮುಖ ಪಾಲುದಾರ ರಾಷ್ಟ್ರವಾಗಿದ್ದು, ಸಂಬಂಧ ಉತ್ತಮಗೊಳಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಹೇಳಿದ್ದಾರೆ ಎಂದು 10 ಆಗಸ್ಟ್ 2024 ರಂದು PTI ಮಾಡಿದ ವರದಿಯೊಂದು ಲಭ್ಯವಾಗಿದೆ.
ಮಾಲ್ದೀವ್ಸ್‌ಗೆ ತಮ್ಮ ಮೂರು ದಿನಗಳ ಭೇಟಿಯ ಬಗ್ಗೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದ ಭಾರತ ವಿದೇಶಾಂಗ ಸಚಿವ ಎಸ್. ಜೈಶಂಕರ್, ‘ಮಾಲ್ದೀವ್ಸ್ ಭಾರತದ ನೆರೆಯ ರಾಷ್ಟ್ರವಷ್ಟೇ ಅಲ್ಲ. ಅದರೊಂದಿಗಿನ ಭಾರತದ ಸಂಬಂಧ ವಿಶೇಷವಾದದ್ದಾಗಿದೆ. ಆ ರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಭಾರತ ನಡೆಸುತ್ತದೆ ಎಂದು ಹೇಳಿದ್ದಾರೆ.
Concluded a productive visit to Maldives!
Living up to the message of our ties: ‘Imagined by Maldives, Delivered by India’.
Some highlights: pic.twitter.com/RmdM3WLSoj
— Dr. S. Jaishankar (@DrSJaishankar) August 12, 2024
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಿಂದೂ ಮಹಾಸಾಗರದ ರಾಷ್ಟ್ರಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತಿದೆ. ನಮಗೆ ಮಾಲ್ಡೀವ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪ್ರಮುಖ ಪಾಲುದಾರ. ಇದು ನಮ್ಮ ನೈಬರ್‌ಹುಡ್ ಫಸ್ಟ್ ನೀತಿಯ ಹೃದಯಭಾಗದಲ್ಲಿದೆ. ಆದ್ದರಿಂದ ನಮ್ಮ ಎರಡು ದೇಶಗಳ ನಡುವಿನ ಸಹಕಾರವು ಸಾಂಪ್ರದಾಯಿಕ ಪಾತ್ರವನ್ನು ಮೀರಿ ಸಾಗಿದೆ ಎಂಬುದು ಬಹಳ ಸ್ವಾಭಾವಿಕವಾಗಿದೆ. ಇಂದು ನಿಜವಾಗಿಯೂ ಆಧುನಿಕ ಪಾಲುದಾರಿಕೆಯಾಗಲು ಭಾರತ ಬಯಸುತ್ತಿದೆ. ‘ಸಾಗರ್’ ಎಂಬ ಯೋಜನೆಯನ್ನು ಭಾರತ ಕೈಗೊಂಡಿದೆ.
1988ರ ನವೆಂಬರ್‌ನಲ್ಲಿ ಭಾರತ ಇಲ್ಲಿ ಕೈಗೊಂಡ ಕಾರ್ಯಕ್ರಮಗಳು, ಕೊಡುಗೆಗಳನ್ನು, 2004ರ ಸುನಾಮಿ ಸಂದರ್ಭದಲ್ಲಿ ಮಾಲೆಯಲ್ಲಿ ಎದುರಾದ ನೀರಿನ ಸಮಸ್ಯೆಗೆ ಭಾರತದ ಪರಿಹಾರ ಕುರಿತು ಮಾಲ್ದೀವ್ಸ್‌ನ ಹಲವರು ಗಮನಕ್ಕೆ ತಂದರು. ಇದು ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಗೆ ಸಹಕಾರಿ ಎಂದು ಜೈಶಂಕರ್ ಹೇಳಿದ್ದಾರೆ.
Concluded a productive visit to Maldives!
Living up to the message of our ties: ‘Imagined by Maldives, Delivered by India’.
Some highlights: pic.twitter.com/RmdM3WLSoj
— Dr. S. Jaishankar (@DrSJaishankar) August 12, 2024
‘ಭಾರತೀಯ ಮೂಲದವರು ಜಗತ್ತಿನ ಎಲ್ಲಾ ಕಡೆ ಇದ್ದಾರೆ. ಮಾಲ್ದೀವ್ಸ್‌ನಲ್ಲೂ ಭಾರತೀಯರಿದ್ದು, ಅವರ ಹಿತ ಕಾಯಲು ಭಾರತ ಸರ್ಕಾರ ಸದಾ ಬದ್ಧವಾಗಿದೆ. ಮಾಲ್ದೀವ್ಸ್‌ನಲ್ಲಿ ಸುಮಾರು 27 ಸಾವಿರ ಭಾರತೀಯರು ಇದ್ದು, ಇವರು ಹೆಚ್ಚಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದೇ ಸಂದರ್ಭದಲ್ಲಿ 28 ದ್ವೀಪಗಳನ್ನು ಒಳಗೊಂಡ ಮಾಲ್ದೀವ್ಸ್‌ನಲ್ಲಿ ಭಾರತ ಕೈಗೊಂಡ 110 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ನೀರು ಮತ್ತು ನೈರ್ಮಲ್ಯ ಯೋಜನೆಗೆ ಜೈಶಂಕರ್ ಚಾಲನೆ ನೀಡಿದ್ದು, ಇದು ದೇಶದ ಶೇ 7ರಷ್ಟು ಜನಸಂಖ್ಯೆಗೆ ನೆರವಾಗಲಿದೆ ಎಂದು ಹೇಳಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಎಲ್ಲಾ ಸಭೆಗಳನ್ನು ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ಗೆ “ಮಾಲ್ಡೀವ್ಸ್‌ನ 28 ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಯೋಜನೆಗಳ ವರ್ಚುವಲ್ ಉದ್ಘಾಟನೆ” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು X ನಲ್ಲಿ ಈವೆಂಟ್ ಬಗ್ಗೆ ಹಂಚಿಕೊಂಡಿದ್ದಾರೆ.

ಹೆಚ್ಚುವರಿಯಾಗಿ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು X ನಲ್ಲಿ ಪೋಸ್ಟ್ ಮಾಡಿದ್ದಾರೆ, “ಇಂದು @DrSJaishankar ಅವರನ್ನು ಭೇಟಿ ಮಾಡಲು ಮತ್ತು 28 ದ್ವೀಪಗಳಲ್ಲಿ ನೀರು ಮತ್ತು ಒಳಚರಂಡಿ ಯೋಜನೆಗಳ ಸಹಿ ಮಾಡಲು ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ಅನುದಾನಿತ ನೀರು ಮತ್ತು ನೈರ್ಮಲ್ಯ ಯೋಜನೆಗಳ ಉದ್ಘಾಟನೆಯನ್ನು ಮೋದಿ ಸರ್ಕಾರವು ಮಾಲ್ಡೀವ್ಸ್‌ನ 28 ದ್ವೀಪಗಳಲ್ಲಿ ಅನುಷ್ಠಾನ ಮಾಡುವ ಯೋಜನೆಗೆ ಸಹಿ ಹಾಕಿದ ಒಪ್ಪಂದವನ್ನೆ ತಪ್ಪಾಗಿ ಹಂಚಿಕೊಳ್ಳುವ ಮೂಲಕ ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟಿದೆ ಅಥವಾ ಭಾರತ ಖರೀದಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಅಂಗಡಿಗೆ ಬೆಂಕಿ ಇಟ್ರಾ ಮುಸ್ಲಿಮರು ? ಈ ಸ್ಟೋರಿ ಓದಿ

