FACT CHECK | ಇರಾನ್ ನಾಯಕ ಖಮೇನಿ ಪುಟ್ಟ ಬಾಲಕಿಗೆ ಚುಂಬಿಸುತ್ತಿರುವಂತೆ ಎಡಿಟ್ ಮಾಡಿದ ವಿಡಿಯೋ ಹಂಚಿಕೆ

ಇರಾನ್ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಅಸಹ್ಯಕರ ಮರುಭೂಮಿ ಸಂಸ್ಕೃತಿ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು 5 ವರ್ಷದ ಬಾಲಕಿಯನ್ನು ಬಲವಂತವಾಗಿ ಚುಂಬಿಸಿ, ಇದು ರುಚಿಯಾಗಿದೆಯೇ ಎಂದು ಕೇಳುತ್ತಿದ್ದಾರೆ ಎಂಬ ಬರಹದೊಂದಿಗೆ ಖಮೇನಿ ಅವರು ಪುಟ್ಟ ಬಾಲಕಿಯೊಬ್ಬಳಿಗೆ ಮುತ್ತು ಕೊಡುವ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

 

ಈ ವೀಡಿಯೋ ಫೇಸ್‌ಬುಕ್ ಮತ್ತು ಎಕ್ಸ್ ನಲ್ಲಿ ಸಾಕಷ್ಟು ವೈರಲ್ ಆಗಿದ್ದು ಅನೇಕರು ಈ ವೀಡಿಯೋವನ್ನು ಇದೇ ರೀತಿಯ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ಕಾಣಬಹುದು.

Video Player

 

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ಯೂಟೂಬ್‌ನಲ್ಲಿ ಇದರ ಸಂಪೂರ್ಣ ವಿಡಿಯೋ ಲಭ್ಯವಾಗಿದ್ದು, ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾದ ಪೂರ್ಣ ವಿಡಿಯೋದಲ್ಲಿ ಖಮೇನಿ ಬಾಲಕಿಯನ್ನು ಚುಂಬಿಸುತ್ತಿರುವುದನ್ನು ತೋರಿಸುವುದಿಲ್ಲ.

ವಾಸ್ತವವಾಗಿ ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಂಡ ಬರಹಗಳು ನಿಜವಲ್ಲ. ಈ ವೀಡಿಯೊ ಜುಲೈ 2011 ರಲ್ಲಿ ಹತ್ಯೆಗೀಡಾದ ಇರಾನಿನ ವಿಜ್ಞಾನಿ ದರಿಯುಶ್ ರೆಜೈ-ನೆಜಾದ್ ಅವರ ಕುಟುಂಬವನ್ನು ಅಯತೊಲ್ಲಾ ಅಲಿ ಖಮೇನಿ ಅವರು ಭೇಟಿಯಾದ ಸಂದರ್ಭದ್ದಾಗಿದೆ. ವಿಜ್ಞಾನಿ ದರಿಯುಶ್ ರೆಜೈ-ನೆಜಾದ್ ಅವರ ಕುಟುಂಬಕ್ಕೆ ಸಾಂತ್ವನ, ಸಹಾನುಭೂತಿ, ಗೌರವ ಮತ್ತು ದಯೆಯನ್ನು ತೋರಿಸುವ ಸಲುವಾಗಿ ಭೇಟಿ ನೀಡಿದ ಸಂದರ್ಭವನ್ನು ಸುಳ್ಳು ಹೇಳಿಕೆಗಳೊಂದಿಗೆ ಬಾಲಕಿಯನ್ನು ಬಲವಂತವಾಗಿ ಚುಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ.  

 

ಖಮೇನಿಯವರು ಬಾಲಕಿಯೊಂದಿಗೆ ನಡೆಸಿದ ಸಂಭಾಷಣೆಯನ್ನು ನೀವು ಕೆಳಗಿನ ವಿಡಿಯೋದಲ್ಲಿ ನೋಡಬಹುದು. ಅವರು ಮೂಲ ವೀಡಿಯೋದಲ್ಲಿ ಬಾಲಕಿಗೆ ಮುತ್ತಿಕ್ಕುವ ದೃಶ್ಯ ಇಲ್ಲದೇ ಇರುವುದನ್ನು ಸ್ಪಷ್ಟವಾಗಿ ಗಮನಿಸಬಹುದು.

 

Video Player

ಒಟ್ಟಾರೆಯಾಗಿ ಹೇಳುವುದಾದರೆ, ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಮೇಲೆ  ಕೆಟ್ಟ ಅಭಿಪ್ರಾಯ ರೂಪಿಸಲು ಅಥವಾ ತಮ್ಮ ನಿರೂಪಣೆಯನ್ನು ಹೊಂದಿಸಲು ಕೆಲವು ಸಾಮಾಜಿಕ ಜಾಲತಾಣದ ಪ್ರಭಾವಿಗಳು ಮೂಲ ವಿಡಿಯೋವನ್ನು ಎಡಿಟ್‌ ಮಾಡಿ ಸುಳ್ಳು ನಿರೂಪಣೆಯೊಂದಿಗೆ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

 


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights