FACT CHECK | ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳ ನಾಲಿಗೆ ಮತ್ತು ಕೈಗಳನ್ನು ಕತ್ತರಿಸಿದ್ರಾ?

ಬಾಂಗ್ಲಾದೇಶದಲ್ಲಿ ಹಿಂದೂಗಳ ನಾಲಿಗೆ, ಕೈ, ಪಾದಗಳು ಮತ್ತು ಕುತ್ತಿಗೆಯನ್ನು ಕತ್ತರಿಸುವುದು ಸೇರಿದಂತೆ ಕ್ರೂರ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಹೀಗೆ ಹಿಡಿದುಕೊಂಡು ಅವರ ನಾಲಿಗೆ/ಕೈ/ಕಾಲು, ಕತ್ತುಗಳನ್ನು ಕತ್ತರಿಸುತ್ತಿದ್ದಾರೆ.ಆದರೆ ಆ ಧರ್ಮದ್ರೋಹಿಗಳು ಈ ದುಷ್ಕೃತ್ಯವನ್ನು ಬಹಳ ಸಂತೋಷದಿಂದ ಮಾಡುತ್ತಿದ್ದಾರೆ. ನನ್ನ ಪ್ರೀತಿಯ ಹಿಂದೂ ಸಹೋದರರೇ, ನಿಮ್ಮ ಸುವರ್ಣ ಮತ್ತು ಹಸಿರು ಭವಿಷ್ಯಕ್ಕಾಗಿ ಅಭಿನಂದನೆಗಳು ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಘಿದ್ದರೆ ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳ ನಾಲಿಗೆ, ಕೈ, ಕಾಲು ಮತ್ತು ಕುತ್ತಿಗೆಯನ್ನು ಕತ್ತರಿಸುತ್ತಿದ್ದಾರೆ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜನವರಿ 2019 ರಲ್ಲಿ ಪತ್ರಕರ್ತೆ ಪಬ್ಲಿಸಾ ಓಸ್ಟೋಸ್ ಅವರು ಹಂಚಿಕೊಂಡ ಟ್ವೀಟ್‌ ಲಭ್ಯವಾಗಿದೆ.

Image

ವೈರಲ್ ವೀಡಿಯೊದಲ್ಲಿನ ಘಟನೆಯು 2019 ರ ಹಿಂದಿನದ್ದು ಎಂಬ ಮಾಹಿತಿ ಲಭ್ಯವಾಗಿದೆ. ವೆನೆಜುವೆಲಾದ ಸೈನ್ಯವು ಅಕ್ರಮ ಚಿನ್ನದ ಗಣಿ ಮೇಲಿನ ದಾಳಿ ನಡೆಸಿದ ಸಮಯದಲ್ಲಿ 19 ವರ್ಷದ ಲಿಯೋಸರ್ ಜೋಸ್ ಲುಗೊ ಮೈಜ್ ಸಿಕ್ಕಿ ಬಿದ್ದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

19 ವರ್ಷದ ಲಿಯೋಸರ್ ಜೋಸ್ ಲುಗೊ ಮೈಜ್ ಎಂಬ ಮಾಜಿ ಸೈನಿಕನೊಬ್ಬ ಸೇನೆ ತೊರೆದು ಬಂದವನೆಂದು ಘೋಷಿಸಿದ್ದು, ಆತ ಅಕ್ರಮ ಗಣಿಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಸಿಕ್ಕಿಬಿದ್ದಿದ್ದಾನೆ ಎಂದು ವರದಿಯಾಗಿದೆ. ಆತ ಸೆರೆ ಸಿಕ್ಕ ನಂತರ ಸೈನ್ಯವು ಅವನ ಕಣ್ಣುಗಳನ್ನು ಕಿತ್ತು, ನಾಲಿಗೆ ಮತ್ತು ಬೆರಳುಗಳನ್ನು ಕತ್ತರಿಸಿತು. ಆತನನ್ನು ಚಿಕಿತ್ಸೆಗಾಗಿ ಎಲ್ ಕಲ್ಲಾವೊದಲ್ಲಿನ ಡಾ. ಜುವಾನ್ ಜರ್ಮನ್ ರೋಸಿಯೊ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಉಲ್ಲೇಖಿಸಲಾಗಿದೆ.

ವರದಿಗಳ ಪ್ರಕಾರ, ಅಕ್ರಮ ಯಿನ್ ಯಾನ್ ಚಿನ್ನದ ಗಣಿ ಮೇಲಿನ ದಾಳಿಯ ಸಂದರ್ಭದಲ್ಲಿ 19 ವರ್ಷದ ಲಿಯೋಸರ್ ಜೋಸ್ ಲುಗೊ ಮೈಜ್ ವೆನೆಜುವೆಲಾದ ಸೇನೆಯಿಂದ ಪತ್ತೆಯಾಗಿದೆ. ಸೇನೆಯಲ್ಲಿದ್ದ ಮೈಜ್‌ನನ್ನು ನಿರ್ಗಮಿತ ಎಂದು ಘೋಷಿಸಲಾಯಿತು. ಅಕ್ರಮವಾಗಿ ಚಿನ್ನ ಗಣಿಗಾರಿಕೆ ನಡೆಸಿ ಬದುಕಲು ಯತ್ನಿಸುತ್ತಿದ್ದ ಎನ್ನಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೆನೆಜುವೆಲಾದ ಸೇನೆಯಿಂದ ತಪ್ಪಿಸಿಕೊಂಡು ಅಕ್ರಮ ಚಿನ್ನದ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದ 19 ವರ್ಷದ ಲಿಯೋಸರ್ ಜೋಸ್ ಲುಗೊ ಮೈಜ್ ಎಂಬ ವ್ಯಕ್ತಿಯ ನಾಲಿಗೆ ಮತ್ತು ಬೆರಳುಗಳನ್ನು ಕತ್ತರಿಸಿದ 2019ರ ಹಳೆಯ ಘಟನೆಯನ್ನು, ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳ ನಾಲಿಗೆ, ಕೈ, ಕಾಲು ಮತ್ತು ಕುತ್ತಿಗೆಯನ್ನು ಕತ್ತರಿಸುತ್ತಿದ್ದಾರೆ ಎಂದು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರತನ್ ಟಾಟಾ ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ಹರಡಿದ ಮಾಧ್ಯಮಗಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights