Fake News : ಜೋರ್ಡಾನ್‍ನ ವೀಡಿಯೊವನ್ನು ಪಾಕಿಸ್ತಾನದ ಮುಸ್ಲಿಂ ನಾಯಕರಿಗೆ ಹೋಲಿಕೆ!

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಕೋಮು ಬಣ್ಣ ಹಚ್ಚಲು ಸೃಷ್ಟಿಯಾದಂತಹ ಗುಂಪುಗಳಿಂದಲೇ ಹರಿದಾಡುತ್ತಿರುವ ಸಂದೇಹ ಉಂಟಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮತ್ತೊಂದು ಸುದ್ದಿ ಹೊರಬಿದ್ದಿದೆ.

ಹೌದು… ಜೋರ್ಡಾನ್‍ನ ವೀಡಿಯೊವನ್ನು ‘ಪಾಕಿಸ್ತಾನದಲ್ಲಿ ಕೋವಿಡ್-19 ನಿಂದ ಚೇತರಿಸಿಕೊಂಡ ಮುಸ್ಲಿಂ ನಾಯಕ ಸಂಭ್ರಮಾಚರಣೆಯಲ್ಲಿ ಆಕಸ್ಮಿಕವಾಗಿ ಗುಂಡುತಾಗಿ ಸಾವನ್ನಪ್ಪಿದ್ದಾನೆ’ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಪಾಕಿಸ್ತಾನದಲ್ಲಿಕೋವಿಡ್ -19 ನಿಂದ ಚೇತರಿಸಿಕೊಂಡ ಮುಸ್ಲಿಂ ಮುಖಂಡರು ಮನೆಗೆ ಮರಳಿದ ಸಂಭ್ರಮಾಚರಣೆಯಲ್ಲಿ ಆಕಸ್ಮಿಕವಾಗಿ ಗುಂಡು ಹಾರಿಸಿದ್ದರಿಂದ ಮೃತಪಟ್ಟಿದ್ದಾರೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಈ ವೀಡಿಯೊ ಪಾಕಿಸ್ತಾನದ್ದಲ್ಲ.

ಎಸ್… ಇದು ಜೋರ್ಡಾನ್‍ನಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ ಎಂದು ಫ್ಯಾಕ್ಟ್ಲಿಕಂಡುಹಿಡಿದಿದೆ. ಜೋರ್ಡಾನ್‍ನ ಅಮ್ರಾವ ಪಟ್ಟಣದ ಸರಿ ಸಲೇಂ ವರ್ದತ್‍ ಎನ್ನುವ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಯು ತನ್ನ ಬಿಡುಗಡೆಯ ಆಚರಣೆಯಲ್ಲಿ ಸೋದರ ಸಂಬಂಧಿ ಹಾರಿಸಿದ ಗುಂಡಿನಿಂದ ಮೃತಪಟ್ಟಿದ್ದಾನೆ. ಎಂಟು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದ ಸರಿ ಸಲೇಂ ಅವರನ್ನುಎರಡು ವಾರಗಳ ಮುಂಚಿತವಾಗಿ ಕೋವಿಡ್-19 ಹರಡುವುದನ್ನುಎದುರಿಸಲು ಜೋರ್ಡಾನ್ ಸರ್ಕಾರ ಕೈಗೊಂಡ ಕ್ರಮಗಳಿಗೆ ಅನುಗುಣವಾಗಿ ಬಿಡುಗಡೆ ಮಾಡಲಾಗಿತ್ತು.

ಈ ಪ್ರಕರಣ ಮೊದಲು ಇಲ್ಲಿ ಪ್ರಕಟವಾಯಿತು.

https://factly.in/video-from-jordan-falsely-shared-as-muslim-leader-recovered-from-covid-19-in-pakistan-died-due-to-accidental-firing-during-celebration/

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights