ಫೇಸ್‌ಬುಕ್‌ ನಲ್ಲಿ ಪ್ರೇಮಿಯ ಫೋಟೋ ಅಪಲೋಡ್ : ಸೀಮೆ ಎಣ್ಣೆ ಸೇವಿಸಿ ಯುವತಿ ಆತ್ಮಹತ್ಯೆ

ಪ್ರೇಮಿ ಫೇಸ್‌ಬುಕ್‌ ನಲ್ಲಿ ಅಪಲೋಡ್ ಮಾಡಿದ ಫೋಟೋಗಳಿಂದ ಮಾನಸಿಕವಾಗಿ ನೊಂದ ಯುವತಿಯೊಬ್ಬಳು ಸೀಮೆ ಎಣ್ಣೆ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್. ಗ್ರಾಮದ 23 ವರ್ಷದ ಸುಧಾರಾಣಿ ಬಿರಾದಾರ ಸೀಮೆ ಎಣ್ಣೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸುಧಾರಾಣಿ ಬಿರಾದಾರ ಸಿಂದಗಿ ತಾಲೂಕಿನ ಕೆರೂಟಗಿ ಗ್ರಾಮದ ಶಿವಾನಂದ ಬಿರಾದಾರ ಜೊತೆ ಪಿಯುಸಿಯಿಂದಲೇ ಪರಿಚಯ ಹೊಂದಿದ್ದಳು. ನಂತರ ಸುಧಾರಾಣಿ ಬಿರಾದರ ವಿಜಯಪುರದಲ್ಲಿ ಕೋಚಿಂಗಿಗೆ ತೆರಳಿದ್ದಾಗ ಶಿವಾನಂದ ಬಿರಾದಾರ ವಿಜಯಪುರಕ್ಕೂ ಹೋಗಿ ಆಕೆಯನ್ನು ಭೇಟಿ ಮಾಡಿ ಸುತ್ತಾಡಿ ಬಂದಿದ್ದ. ಪರಸ್ಪರರು ಸೆಲ್ಫಿ ಕೂಡ ತೆಗೆಸಿಕೊಂಡಿದ್ದರು.

ಆದರೆ, ನಂತರ ಯುವತಿ ಶಿವಾನಂದ ಬಿರಾದಾರನನ್ನು ಮದುವೆಯಾಗುವುಪದಿಲ್ಲ ಎಂದಾಗ ಆತ, ತಾವಿಬ್ಬರೂ ಜೊತೆಯಲ್ಲಿದ್ದ ಸೆಲ್ಱಿ ಫೋಟೋಗಳನ್‌ನು ಫೇಸ್‌ಬುಕ್‌ನಲ್ಲಿ ಅಪಲೋಡ್‌ ಮಾಡಿದ್ದ. ಇದರಿಂದ ಬೇಸತ್ತ ಯುವತಿ ಸೆ. 17 ರಂದು ಸುಮಾರು ಅರ್ಧ ಲೀಟರ್ ಸೀಮೆ ಎಣ್ಣೆ ಸೇವಿಸಿದ್ದಳು. ಆಕೆಯನ್ನು ಚಿಕಿತ್ಸೆಗಾಗಿ ಸಿಂದಗಿ ಪೊಲೀಸ್ ಟಾಣೆಗೆ ಸೇರಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಯುವತಿ ಕೊನೆಯುಸಿರೆಳೆದಿದ್ದಾಳೆ.

ಈ ಕುರಿತು ಯುವತಿಯ ತಾಯಿ ಮಲ್ಲಮ್ಮ ನೀಲಕಂಠ ಬಿರಾದಾರ ಸಿಂದಗಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights