FACT CHECK | ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಹೆಸರಿನ ನಕಲಿ ಜಾಲದ ಬಗ್ಗೆ ಇರಲಿ ಎಚ್ಚರ

ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಇತ್ತೀಚೆಗೆ ಅಂದರೆ ಕಳೆದ ತಿಂಗಳು ಸೆಪ್ಟಂಬರ್ 26ರಂದು ಪ್ರಕಟಿಸಿತ್ತು. ಈ ಮಾರಾಟವನ್ನು ಫ್ಲಿಪ್‌ಕಾರ್ಟ್‌ನ ಅತಿದೊಡ್ಡ ಮಾರಾಟ ಎಂದು ಕರೆಯಲಾಗಿತ್ತು. ಈ ಸೇಲ್‌ನಲ್ಲಿ ಹಲವು ಬ್ರಾಂಡ್‌ಗಳು, ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಕೊಡುಗೆಗಳನ್ನು ನೀಡಲಾಗಿತ್ತು.

 

 

 

 

 

 

 

 

 

 

 

 

 

 

ಈಗ ಸಾಮಾಜಿಕ ಮಾಧ್ಯಮ ಸೇರಿದಂತೆ ವಾಟ್ಸಾಪ್‌ ಮೂಲಕ ಸಂದೇಶವೊಂದರಲ್ಲಿ  ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ ಆಫರ್‌” ಎಂದು ರೂ 80,000 ಆಪಲ್ ವಾಚ್ ರೂ 500 ಕ್ಕಿಂತ ಕಡಿಮೆ; ದುಬಾರಿ ಕ್ಯಾನನ್ ಡಿಎಸ್ಎಲ್ಆರ್ಗಳು, ಎಲ್ಜಿ ವಾಷಿಂಗ್ ಮೆಷಿನ್ಗಳು ಮತ್ತು ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಇತರೆ ದುಬಾರಿ ವಸ್ತುಗಳನ್ನು ಉಲ್ಲೇಖಿಸಿ ವೆಬ್‌ಸೈಟ್‌ ಲಿಂಕನ್ನು ಹಂಚಿಕೊಳ್ಳಲಾಗುತ್ತಿದೆ.

ಈ ಆಕರ್ಷಕ ರಿಯಾಯ್ತಿಗಳನ್ನು ನೋಡಿದ ಯಾರಿಗಾದರೂ ಲಿಂಕ್‌ಅನ್ನು ಕ್ಲಿಕ್ ಮಾಡಿ ಯಾಕೆ ಒಮ್ಮೆ ಪ್ರಯತ್ನಿಸಬಾರದು ಎಂದೆನಿಸದೆ ಇರಲಾರದು. ಆದರೆ ಈ ಪ್ರಕಟಣೆಯನ್ನು ನಿಜವಾಗಿಯೂ ಪ್ಲಿಫ್‌ಕಾರ್ಟ್ ಸಂಸ್ಥೆ ಘೊಷಿಸಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಈ ವೆಬ್‌ಸೈಟ್‌ನಲ್ಲಿ ನೀವು ಇಷ್ಟವಿರುವ ಉತ್ಪನ್ನವನ್ನು ಆಯ್ಕೆಮಾಡಿ ” ಖರೀದಿಸುವ” ಬಟನ್‌ಗೆ ಕ್ಲಿಕ್ ಮಾಡಿದಾಗ, ಇದು ನಿಮ್ಮನ್ನು ಹೊಸ ವೆಬ್ ಪುಟಕ್ಕೆ ಕರೆದೊಯ್ಯುತ್ತದೆ ಮತ್ತು ನಿಮ್ಮ ಹೆಸರು, ವಿಳಾಸ ಮತ್ತು ಫೋನ್ ಸಂಖ್ಯೆಯಂತಹ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಲು ಕೇಳುತ್ತದೆ. ಈ ರೀತಿಯ ವೆಬ್‌ಸೈಟ್‌ಗಳು ನಿಮ್ಮ ಮಾಹಿತಿಯನ್ನು ಇತರರಿಗೆ ಮಾರಾಟ ಮಾಡಲು ಅಥವಾ ಹಣಕಾಸಿನ ವಂಚನೆ ಮಾಡಲು ನಿಮ್ಮ ವಿವರಗಳನ್ನು ಬಳಸಿಕೊಳ್ಳುತ್ತವೆ ಎಂಬುದರ ಬಗ್ಗೆ ನಿಮಗೆ ಅರಿವಿರಬೇಕು.

 

 

 

 

 

 

 

 

 

 

ನೀವು ವೈಯಕ್ತಿಕ ಮಾಹಿತಿ ಹಾಗೂ ವಿಳಾಸ ಹಾಕಿದ ಕೂಡಲೇ ಈ ಪೇಜ್‌ಗಳು ಮತ್ತೊಂದು ಪುಟಕ್ಕೆ ತೆರೆದುಕೊಳ್ಳುತ್ತದೆ. ಮತ್ತು “ಆರ್ಡರ್ ಸಾರಾಂಶ” ಸೇರಿದಂತೆ “ಇಲ್ಲಿ ಹಣ ಪಾವತಿಸಿ” ಎಂದು ಕೇಳುತ್ತದೆ. ಕೆಲವೊಮ್ಮೆ ಇಷ್ಟೇ ಸಮಯದೊಳಗೆ ನೀವು ಹಣ ಪಾವತಿಸಬೇಕೆಂದೂ ಪಾವತಿಸದೇ ಇದ್ದರೇ ನಿಮಗೆ ರಿಯಾಯತಿ ದರದಲ್ಲಿ ಉತ್ಪನ್ನಗಳು ಲಭಿಸುವುದಿಲ್ಲ ಎಂದೂ ಸಂದೇಶ ಬರಲಾರಂಭಿಸುತ್ತದೆ.

 

 

 

 

 

 

 

 

 

ನೈಜ ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಅಥವಾ ಇತರೆ ಅಪ್ಲಿಕೇಶನ್‌ಗಿಂತ ಭಿನ್ನವಾಗಿ, ಹಣ ಪಾವತಿಗಳ ಪುಟವು PayTM, PhonePe ಮತ್ತು BHIM UPIನಂತಹ ಮೂರು ಆಯ್ಕೆಗಳನ್ನು ಮಾತ್ರ ಹೊಂದಿರುತ್ತದೆ. ಇಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್ ಅಥವಾ ಕ್ಯಾಶ್ ಆನ್ ಡೆಲಿವರಿ ಮೂಲಕ ಪಾವತಿಗಳನ್ನು ಅನುಮತಿಸುವುದಿಲ್ಲ. ನೀವು ಮೂರು ಆಯ್ಕೆಗಳಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿ ಮತ್ತು “ಈಗ ಖರೀದಿಸಿ” ಕ್ಲಿಕ್ ಮಾಡಿದರೆ, ಅದು ಕೆಲಸ ಮಾಡುವುದಿಲ್ಲ. ಇಲ್ಲಿಗೆ ಈ ವೆಬ್‌ಸೈಟ್‌ ಕಾರ್ಯನಿರ್ವಹಿಸದೇ ನಿಂತು ಬಿಡುತ್ತದೆ.

ಹಾಗಾಗಿ, ಈ ವೆಬ್‌ಸೈಟ್‌ನ ಏಕೈಕ ಉದ್ದೇಶವು ಕೇವಲ ನಿಮ್ಮ ವೈಯಕ್ತಿಕ ಮಾಹಿತಿ ಸಂಗ್ರಹಿಸುವುದಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಇನ್ನು DomainTools ಅನ್ನು ಬಳಸಿ “exclisivese.live” ಬಗ್ಗೆ ಸರ್ಚ್ ಮಾಡಿದಾಗ, ಈ ವೆಬ್‌ಸೈಟ್ ಜನರನ್ನು ವಂಚಿಸಿ ಸುಲಿಗೆ ಮಾಡುವ ಉದ್ದೇಶದಿಂದ ಸುಳ್ಳು ಹರಡುತ್ತಿರುವುದಾಗಿ ವರದಿಯಾಗಿದೆ.

“ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಸೆಪ್ಟೆಂಬರ್ 27ರಂದು ಪ್ರಾರಂಭವಾಗಿತ್ತು ಮತ್ತು ಅಕ್ಟೋಬರ್ 6ರಂದು ಕೊನೆಗೊಂಡಿದೆ. ಹಾಗಾಗಿ, ಈ ರೀತಿಯ ಪೋಸ್ಟ್‌ಗಳು ನಿಮಗೆ ಬರುತ್ತಿದ್ದರೆ ಇದು ವಂಚನೆ ಎಂದು ನಿಮಗೆ ತಿಳಿದಿರಲಿ. exclisivese.live ವೆಬ್‌ಸೈಟ್ ಇ-ಕಾಮರ್ಸ್ ಬ್ರಾಂಡ್‌ಗೆ ಯಾವುದೇ ರೀತಿಯಲ್ಲಿ ಸಂಯೋಜಿತವಾಗಿಲ್ಲ” ಎಂದು ಫ್ಲಿಪ್‌ಕಾರ್ಟ್‌ನಲ್ಲಿ ಕಾರ್ಪೊರೇಟ್ ವ್ಯವಹಾರಗಳು ಮತ್ತು ಬಾಹ್ಯ ಸಂವಹನಗಳ ಸಹಾಯಕ ನಿರ್ದೇಶಕಿ ಪ್ರಿಯಾಂಕಾ ಸೆರಾವೊ ಮಾಹಿತಿ ನೀಡಿದ್ದಾರೆ.

ಇಂತಹ ಮೋಸದ ಸೈಟ್‌ಗಳನ್ನು ವರದಿ ಮಾಡಲು ಮತ್ತು ತೆಗೆದುಹಾಕಲು ಫ್ಲಿಪ್‌ಕಾರ್ಟ್ ಪ್ರಕ್ರಿಯೆಗಳನ್ನು ಸಂಗ್ರಹಿಸುತ್ತಿದೆ ಮತ್ತು ಜನರು ವಂಚನೆಗೊಳಗಾಗುವುದನ್ನು ತಪ್ಪಿಸಲು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳನ್ನು ಹೈಲೈಟ್ ಮಾಡಲು ಸಂಸ್ಥೆಯು ಇತ್ತೀಚಿನ ಬ್ಲಾಗ್ ಪೋಸ್ಟ್ ಅನ್ನು ಹಂಚಿಕೊಂಡಿದೆ ಎಂದು ಅವರು ವಿವರಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಫ್ಲಿಪ್‌ಕಾರ್ಟ್ ಹೆಸರಿನಲ್ಲಿ ವಾಟ್ಸಾಪ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಹೆಸರಿನಲ್ಲಿ ಹಂಚಿಕೊಳ್ಳಲಾಗುತ್ತಿರುವ ಲಿಂಕ್ ನಕಲಿ ಮತ್ತು ವಂಚನೆಯ ಉದ್ದೇಶದಿಂದ ಹಂಚಿಕೊಳ್ಳಲಾಗುತ್ತಿದ್ದು, ಎಲ್ಲಾ ವಸ್ತುಗಳ ಮೇಲೆ ಶೇ 99ರಷ್ಟು ರಿಯಾಯ್ತಿ ನೀಡಲಾಗಿದೆ ಎಂಬುದು ಸುಳ್ಳು. ನೀವು ಇದನ್ನು ನಂಬಿ ಕ್ಲಿಕ್ ಮಾಡಿದರೆ ನಿಮ್ಮ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗುತ್ತವೆ. ಹಾಗಾಗಿ ಇಂತಹ ಆಫರ್‌ಗಳ ಬಗ್ಗೆ ಎಚ್ಚರವಿರಲಿ.

ಕೃಪೆ : ಕನ್ನಡ ಫ್ಯಾಕ್ಟ್‌ಚೆಕ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕೇಸರಿ ಬಟ್ಟೆ ಹೊದ್ದು ಮಲಗಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ ನಡೆದಿದ್ದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights