FACT CHECK | ಆಹಾರದಲ್ಲಿ ಮೂತ್ರ ಬೆರಸಿ ಸಿಕ್ಕಿಬಿದ್ದ ಮಹಿಳೆ ಮುಸ್ಲಿಮಳಲ್ಲ! ಹಾಗಿದ್ರೆ ಮತ್ತ್ಯಾರು ?

ಸೋಶಿಯಲ್ ಮೀಡಿಯಾಗಳಲ್ಲಿ ಆಹಾರದಲ್ಲಿ ಉಗುಳುವ ವಿಡಿಯೋಗಳು ಪ್ರಸಾರವಾಗುತ್ತಿರುತ್ತವೆ. ಅವುಗಳನ್ನು ಹಂಚಿಕೊಳ್ಳುವ ಕೆಲವರು ಮುಸ್ಲಿಮರು ಆಹಾರದಲ್ಲಿ ಉಗುಳಿ ವಿತರಿಸುತ್ತಾರೆ ಎಂಬ ಆರೋಪಗಳನ್ನು ಆಗಾಗ್ಗೆ ಮಾಡುತ್ತಿರುತ್ತಾರೆ. ಈಗ ಅಗಾತಕಾರಿ ಸಂಗತಿಯೊಂದಿಗೆ ಅಂತಹದ್ದೆ ವಿಡಿಯೋವೊಂದನ್ನು ಎಕ್ಸ್‌ ಬಳಕೆದಾರರು ಪೋಸ್ಟ್‌ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು , ‘‘ಉಗುಳಿನ ಬಳಿಕ ಈಗ ಮೂತ್ರ ಜಿಹಾದ್‌ ಶುರುವಾಗಿದೆ. ಗಾಜಿಯಾಬಾದ್‌ನಲ್ಲಿ ಮುಸ್ಲಿಂ ಮನೆಕೆಲಸದಾಕೆ ಪಾತ್ರೆಯೊಂದರಲ್ಲಿ ಮೂತ್ರ ಮಾಡಿ ಅದರಲ್ಲಿಯೇ ರೊಟ್ಟಿ ತಯಾರಿಸಿರುವ ಆಘಾತಕಾರಿ ಘಟನೆ ಮನೆಯಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ,’’ ಎಂದು ಬರೆದುಕೊಂಡು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಮಹಿಳೆಯೊಬ್ಬರು ಅಡುಗೆ ಮನೆಯಲ್ಲಿ ಪಾತ್ರೆಯೊಂದನ್ನು ಹಿಡಿದುಕೊಂಡು ಫ್ರಿಡ್ಜ್‌ ಮರೆಯಲ್ಲಿ ನಿಂತು ವಿಲಕ್ಷಣವಾಗಿ ವರ್ತಿಸುವುದನ್ನು ನೋಡಬಹುದು. ಕೈಯಲ್ಲಿ ಪಾತ್ರೆಯೊಂದನ್ನು ಹಿಡಿದುಕೊಂಡು ಬಾಗಿಲು ಮುಚ್ಚಿ ಬಳಿಕ ತನ್ನ ಕುರ್ತಾವನ್ನು ಎತ್ತಿ ಫ್ರಿಡ್ಜ್‌ನ ಹಿಂದೆ ಹೋಗುತ್ತಾಳೆ. ನಂತರ ಪಾತ್ರೆಯನ್ನು ಇಟ್ಟು ಬಟ್ಟೆಯಿಂದ ಕೈಗಳನ್ನು ಒರೆಸುವುದು ವಿಡಿಯೋದಲ್ಲಿದೆ.

ಇದೇ ಪ್ರತಿಪಾದನೆಯೊಂದಿಗೆ ಹಲವರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ವಿಡಿಯೋದಲ್ಲಿರುವ ಮಹಿಳೆ ಮುಸ್ಲಿಂ ಅಲ್ಲ ಎಂದು ತಿಳಿದು ಬಂದಿದೆ.

ವರದಿಯ ಪ್ರಕಾರ ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಎಂಟು ವರ್ಷಗಳಿಂದ ರೀನಾ ಅಡುಗೆಕೆಲಸ, ಸ್ವಚ್ಚತಾ ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡಿಕೊಂಡಿದ್ದಳು. ರೀನಾ ಶಾಂತಿನಗರದ ನಿವಾಸಿ ಎಂದು ವರದಿಯಾಗಿದೆ. ಮೂತ್ರದಲ್ಲಿ ಹಿಟ್ಟನ್ನು ಕಲಿಸಿ ಅದರಿಂದ ಚಪಾತಿ ಮಾಡಿ ಉದ್ಯಮಿ ಮನೆಮಂದಿಗೆಲ್ಲಾ ತಿನ್ನಿಸುತ್ತಿದ್ದಳು.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಕ್ರಾಸಿಂಗ್ ರಿಪಬ್ಲಿಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರೀತಿ ಅವರು, ಈ ಮಹಿಳೆ ರೀನಾ, ಅವರು ಹಿಂದೂ ಸಮುದಾಯದಿಂದ ಬಂದವರು ಎಂದು ನ್ಯೂಸ್‌ಮೀಟರ್‌ಗೆ ಖಚಿತಪಡಿಸಿದ್ದಾರೆ.ಎಫ್‌ಐಆರ್‌ನ ಪ್ರತಿ ಲಭ್ಯವಾಗಿದ್ದು, ಗೌತಮ್ ಕುಮಾರ್ ಅವರ ಪತ್ನಿ ರೂಪಮ್ ಅವರು ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಎಫ್‌ಐಆರ್ ಪ್ರಕಾರ, ಗಾಜಿಯಾಬಾದ್‌ನ ಶಾಂತಿನಗರ ನಿವಾಸಿ ಪ್ರಮೋದ್ ಕುಮಾರ್ ಅವರ ಪತ್ನಿ ರೀನಾ ಕಳೆದ ಎಂಟು ವರ್ಷಗಳಿಂದ ರೂಪಮ್ ಅವರ ಮನೆಗೆ ಅಡುಗೆ ಮಾಡುತ್ತಿದ್ದರು. ಅಕ್ಟೋಬರ್ 14, 2024 ರಂದು, ರೂಪಮ್, ಮೊಬೈಲ್ ಕ್ಯಾಮೆರಾ ದೃಶ್ಯಗಳ ಮೂಲಕ, ರೀನಾ ಪಾತ್ರೆಯಲ್ಲಿ ಮೂತ್ರ ವಿಸರ್ಜಿಸುತ್ತಿರುವುದನ್ನು ಮತ್ತು ರೊಟ್ಟಿಗಳನ್ನು ತಯಾರಿಸಲು ಬಳಸುತ್ತಿರುವುದನ್ನು ಸೆರೆ ಹಿಡಿದಿದ್ದಾರೆ. ರೂಪಮ್ ಅವರ ಕುಟುಂಬವು ಹಲವಾರು ತಿಂಗಳುಗಳಿಂದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

NDTV ವರದಿಯ ಪ್ರಕಾರ, ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಎಂಟು ವರ್ಷಗಳಿಂದ ರೀನಾ ಅಡುಗೆಕೆಲಸ, ಸ್ವಚ್ಚತಾ ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡಿಕೊಂಡಿದ್ದಳು. ರೀನಾ ಶಾಂತಿನಗರದ ನಿವಾಸಿ ಎಂದು ವರದಿಯಾಗಿದೆ. ಮೂತ್ರದಲ್ಲಿ ಹಿಟ್ಟನ್ನು ಕಲಿಸಿ ಅದರಿಂದ ಚಪಾತಿ ಮಾಡಿ ಉದ್ಯಮಿ ಮನೆಮಂದಿಗೆಲ್ಲಾ ತಿನ್ನಿಸುತ್ತಿದ್ದಳು ಎಂದು ಉಲ್ಲೇಖಿಸಾಗಿದೆ.

ಎಎನ್‌ಐ ಕೂಡ ಬಂಧನದ ವಿಡಿಯೋವನ್ನು ಹಂಚಿಕೊಂಡಿದೆ. “ಗಾಜಿಯಾಬಾದ್‌ನ ರೆಸಿಡೆನ್ಶಿಯಲ್ ಸೊಸೈಟಿಯೊಂದರಲ್ಲಿ ಹಿಟ್ಟನ್ನು ತಯಾರಿಸಲು ಮೂತ್ರವನ್ನು ಬೆರೆಸಿದ ಆರೋಪದ ಮೇಲೆ ರೀನಾ ಎಂಬವರನ್ನು ಪೊಲೀಸರು ಗುರುತಿಸಿ, ಮಹಿಳೆಯನ್ನು ಕ್ರಾಸಿಂಗ್ಸ್ ರಿಪಬ್ಲಿಕ್ ಪಿಎಸ್ ತಂಡವು ಬಂಧಿಸಿದೆ” ಎಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. ಹೀಗಾಗಿ, ಎಫ್‌ಐಆರ್ ಮತ್ತು ಇನ್ಸ್‌ಪೆಕ್ಟರ್ ಪ್ರೀತಿ ಅವರ ಹೇಳಿಕೆಯನ್ನು ಆಧರಿಸಿ, ಆಹಾರದಲ್ಲಿ ಮೂತ್ರವನ್ನು ಬೆರೆಸಿ ಸಿಕ್ಕಿಬಿದ್ದ ಮಹಿಳೆ ಮುಸ್ಲಿಂ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಅಡುಗೆ ತಯಾರಿಸಲು ಮೂತ್ರವನ್ನು ಬೆರೆಸಿದ ಆರೋಪದ ಮೇಲೆ ಬಂಧಿಸಲಾಗಿರುವ ಮಹಿಳೆ ಮುಸ್ಲಿಂ ಅಲ್ಲ. ಬಂಧಿತ ಮಹಿಳೆ ಮುಸ್ಲಿಂ ಎಂದು ಕೋಮು ಹಿನ್ನಲೆಯಲ್ಲಿ ಪೋಸ್ಟ್‌ಅನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 2008ರ ಮುಂಬೈ ದಾಳಿಯ ನಂತರ ಪಾಕಿಸ್ತಾನಕ್ಕೆ ಸುಮೋ ವಾಹನಗಳನ್ನು ಮಾರಾಟ ಮಾಡಲ್ಲ ಅಂದಿದ್ರಾ ರತನ್ ಟಾಟಾ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights