FACT CHECK | ಅಸ್ಸಾಂನಲ್ಲಿ ಬಾಂಗ್ಲಾ ಮುಸ್ಲಿಮರು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ರಾ?

ಬಾಂಗ್ಲಾದೇಶದ ಮಿಯಾ ಮುಸ್ಲಿಮರ ಗುಂಪು ಅಸ್ಸಾಂನಲ್ಲಿ ಪ್ರತ್ಯೇಕ ದೇಶಕ್ಕೆ ಒತ್ತಾಯಿಸಿ ರ್ಯಾಲಿ ನಡೆಸಿತು ‘ಆಜಾದಿ’ ಎಂಬ ಘೋಷಣೆಗಳನ್ನೂ ಕೂಗಿದರು. ತಕ್ಷಣವೇ ಅಸ್ಸಾಂ ಪೊಲೀಸರು ಚಿಕಿತ್ಸೆ ನೀಡಿದ್ದಾರೆ ಬಾಂಗ್ಲಾದೇಶದ ಮಿಯಾ ಮುಸ್ಲಿಂ ಗುಂಪಿನ ಹೆಚ್ಚಿನವರು ತಮ್ಮ ‘ಆಜಾದಿ ಘೋಷಣೆ’ಗಳೊಂದಿಗೆ ತಲೆಯಿಲ್ಲದ ಕೋಳಿಗಳಂತೆ ಹಿಂತಿರುಗಿದರು. ಎಂಬ ಹೇಳಿಕೆಯೊಂದಿಗೆ @ajaychauhan41 ಅಜಯ್ ಚೌಹಾಣ್ ಎಂಬ ಎಕ್ಟ್‌ ಬಳಕೆದಾರ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಅಸ್ಸಾಂನಲ್ಲಿ ಮುಸ್ಲಿಂ ಧರ್ಮೀಯರು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿ ನಿಜವಾಗಿಯೂ ಪ್ರತಿಭಟಿಸಿರುವ ಸುದ್ದಿ ನಿಜವೇ? ಎಂದು ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಪ್ರತ್ಯೇಕ ರಾಷ್ಟ್ರಕ್ಕಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ವಿಡಿಯೋದ ವಾಸ್ತವಾಂಶಗಳನ್ನು ಪರಿಶೀಲಿಸಲು ಕೆಲವು ಕೀ ವರ್ಡ್‌ಗಳ ಸಹಾಯದಿಂದ ಯೂಟ್ಯೂಬ್‌ ಸರ್ಚ್ ಮಾಡಿದಾಗ 2 ಜುಲೈ 2017ರಲ್ಲಿ ಇದೇ ವಿಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್‌ ಆಗಿರುವುದನ್ನು ನೋಡಬಹುದು.

ಅಸ್ಸಾಂ ಸರ್ಕಾರವು ಜಾರಿ ಮಾಡಿದ್ದ ‘doubtful citizens and voters’ ಟ್ಯಾಗ್‌ನ ವಿರುದ್ಧ ಅಸ್ಸಾಂನ ಜನರು ಗೋಲ್‌ಪಾರಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಚಾನಲ್ ಹೇಳಿದೆ. ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಸ್ಕ್ರಾಲ್ ಪ್ರಕಾರ, ವೀಡಿಯೊವನ್ನು ಅಸ್ಸಾಂ ನಿವಾಸಿ ಹುಸೇನ್ ಅಹ್ಮದ್ ಮದನಿ ಚಿತ್ರೀಕರಿಸಿದ್ದಾರೆ ಎಂದು ಹೇಳಿದೆ.

ಜೂನ್ 30, 2017 ರಂದು ಸ್ಥಳಿಯ ನಿವಾಸಿ ಮದನಿ ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದರು. ಆದರೆ ಅವರು ಪ್ರತಿಭಟನೆಯ ಭಾಗವಾಗಿರಲಿಲ್ಲ ಎಂದು ಅವರು ಸ್ಕ್ರಾಲ್‌ಗೆ ತಿಳಿಸಿದ್ದರು. ಆದರೆ ಅವರು ಪ್ರತಿಭಟನಕಾರರ ಮೇಲೆ  ನಡೆದ ದಾಳಿಯ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯ ಖುತಾಮರಿ ಗ್ರಾಮದಲ್ಲಿ ಪ್ರತಿಭಟನಾಕಾರರ ಗುಂಪು ರಾಷ್ಟ್ರೀಯ ಹೆದ್ದಾರಿ 37 ರ ಸಮೀಪ ಬಂದಾಗ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.

“ಪೊಲೀಸರ ಹೇಳಿಕೆಯ ಪ್ರಕಾರ 400 ರಿಂದ 500 ಜನ ಪ್ರತಿಭಟನಾಕಾರರು – ಬ್ಯಾನರ್ ಮತ್ತು ಕೆಲವು ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ. “ಭಾರತೀಯ ಮುಸ್ಲಿಂ ನಾಗರಿಕರಿಗೆ ಕಿರುಕುಳ ನೀಡುವುದನ್ನು ನಾವು ಸಹಿಸುವುದಿಲ್ಲ – ಇಂಕ್ವಿಲಾಬ್ ಜಿಂದಾಬಾದ್” ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಬಂದಿದ್ದರು” ಎಂದು ಸ್ಕ್ರಾಲ್ ವರದಿ ಮಾಡಿದೆ.

ನ್ಯೂಸ್‌ಕ್ಲಿಕ್ ಅದೇ ರೀತಿ ಗಡಿ ಪೊಲೀಸ್ ಮತ್ತು ಫಾರಿನರ್ಸ್ ಟ್ರಿಬ್ಯೂನಲ್‌ಗಳಿಂದ ಡಿ (ಸಂಶಯಾಸ್ಪದ) ಮತದಾರರಿಗೆ ಕಿರುಕುಳ ನೀಡುವುದರ ವಿರುದ್ಧ ಪ್ರತಿಭಟನಾಕಾರರು ಪ್ರದರ್ಶನ ನಡೆಸುತ್ತಿದ್ದರು ಎಂದು ಬರೆದಿದೆ. ‘ಡಿ-ವೋಟರ್’ ಎಂಬುದು ಅಸ್ಸಾಂನ ಮತದಾರರ ವರ್ಗವಾಗಿದ್ದು, ಅವರು ತಮ್ಮ ಪೌರತ್ವದ  ದಾಖಲೆಗಳನ್ನು ಸಲ್ಲಿಸಲು ವಿಫಲರಾದರೆ ನಂತರ ಚುನಾವಣಾ ಆಯೋಗದ ಮತದಾರರ ಪಟ್ಟಿಯಿಂದಲೂ ಹೊರಹಾಕಲಾಗುತ್ತದೆ ನಂತರ ಮತದಾನದಿಂದ ವಂಚಿತರಾಗುತ್ತಾರೆ.

 

 

 

 

 

 

 

 

 

ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಖರ್ಬೋಜಾ ಗ್ರಾಮದಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಗುಂಡು ಹಾರಿಸಿದಾಗ 22 ವರ್ಷದ ಮುಸ್ಲಿಂ ವ್ಯಕ್ತಿ ಯಾಕುಬ್ ಅಲಿ ಸಾವನ್ನಪ್ಪಿದ್ದಾರೆ. ಗಡಿ ಪೊಲೀಸ್ ಮತ್ತು ವಿದೇಶಿ ನ್ಯಾಯಮಂಡಳಿಗಳು ಡಿ (ಸಂಶಯಾಸ್ಪದ) ಮತದಾರರಿಗೆ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 37 ರ ಕಡೆಗೆ ಮೆರವಣಿಗೆ ನಡೆಸುತ್ತಿದ್ದರು. ರ್ಯಾಲಿಯ ನೇತೃತ್ವವನ್ನು ನಜ್ರುಲ್ ಇಸ್ಲಾಂ ಎಂಬ ವಕೀಲರು ಈ ಪ್ರತಿಭಟನೆಯ ನೇತೃತ್ವವಹಿಸಿದ್ದರು.

ಪ್ರತಿಭಟನಕಾರರು ಪ್ರದರ್ಶಿಸಿದ ಬ್ಯಾನರ್‌ನಲ್ಲಿ, ‘ಡಿ ಮತದಾರರ’ ಪಟ್ಟಿಯಲ್ಲಿರುವ ಜನರು ನಿಜವಾದ ಭಾರತೀಯರು ಮತ್ತು ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಈ ಪೈಕಿ 40,000 ಭಾರತೀಯರು ನ್ಯಾಯಕ್ಕೆ ಅರ್ಹರು ಮತ್ತು ಪಟ್ಟಿಯನ್ನು ಮರುರೂಪಿಸಬೇಕು, ಹಕ್ಕು ವಂಚಿತರಿಗೆ ಸರ್ಕಾರಿ ಉದ್ಯೋಗ ಮತ್ತು ಭದ್ರತೆ ಒದಗಿಸಬೇಕು ಎಂದು ಬರೆಯಲಾಗಿದೆ.

 

 

 

 

 

 

 

 

ಒಟ್ಟಾರೆಯಾಗಿ ಹೇಳುವುದಾದರೆ, ಸರ್ಕಾರ ವಿಧಿಸಿದ್ದ ‘ಸಂಶಯಾಸ್ಪದ ನಾಗರಿಕರು ಮತ್ತು ಮತದಾರರು’ ಎಂಬ ಕಾಯ್ದೆಯ ವಿರುದ್ಧ 2017 ರಲ್ಲಿ ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯ ಖುತಾಮರಿ ಗ್ರಾಮದಲ್ಲಿ ನಡೆದ ಪ್ರತಿಭಟನೆಯ 7 ವರ್ಷಗಳ ಹಳೆಯ ಸಂಬಂಧವಿಲ್ಲದ ವಿಡಿಯೋವನ್ನು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿ ‘ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರು’ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ತಪ್ಪಾಗಿ ಮತ್ತು ಕೋಮುದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿಸಲಾಗಿದೆ ಎಂದು ಸಂಬಂಧವಿಲ್ಲ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights